ತುಮಕೂರು-ವಾಸ್ತುಶಿಲ್ಪ-ಕೇಂದ್ರ-ತೆರೆಯಲು-ಪ್ರಸ್ತಾವನೆ ಸಲ್ಲಿಸಿ-ಸಿಇಓ-ಪ್ರಭು.ಜಿ.

ತುಮಕೂರು: ತಾಲ್ಲೂಕಿನ ಜೋಲುಮಾರನಹಳ್ಳಿ ಕಾಳಿಕಾ ಕಮಟೇಶ್ವರ ದೇವಾಲಯದಲ್ಲಿ ಫೆ.7 ಶುಕ್ರವಾರದಿಂದ ಶ್ರೀರುದ್ರೈಕಾದರ್ಶಿನಿ ಮಹಾಯಾಗ ಆರಂಭಗೊಂಡಿದ್ದು, ಯಾಗ ಪೂರ್ವಭಾವಿಯಾಗಿ ಯಜ್ಞ ಸ್ಥಳಕ್ಕೆ ಭೇಟಿಕೊಟ್ಟ ಜಿ.ಪಂ ಸಿಇಓ ಜಿ.ಪ್ರಭು ಅವರನ್ನು ಯಜ್ಞಸಮಿತಿ ಪರವಾಗಿ ನಾಗಭೂಷಣಚಾರ್ಯ, ಯತೀಶ್ ಆಚಾರ್ಯ, ಚಂದ್ರೇಶ್ ಶರ್ಮ ಮತ್ತು ಸಮಿತಿಯವರು ಗೌರವಿಸಿದರು.

ಇದೇ ವೇಳೆ ಗ್ರಾಮದ ಶಿಲ್ಪಿಗಳು ತಯಾರಿಸಿದ ಶಾಸ್ತ್ರೋಕ್ತ ಪಂಚಲೋಹ ಶಿಲ್ಪಗಳನ್ನು ಕಂಡು ಮೆಚ್ಚುಗೆ ಸೂಚಿಸಿದ ಸಿಇಓ ಅವರು ಕೈದಾಳದ ಅಮರಶಿಲ್ಪಿ ಜಕಣಾಚಾರಿ ತವರು ಸ್ಥಳದಲ್ಲಿ ವಾಸ್ತುಶಿಲ್ಪ ಕೇಂದ್ರ ತೆರೆಯಲು ಉಸ್ತುವಾರಿ ಸಚಿವರು ಉತ್ಸಕರಾಗಿದ್ದು ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಹಿರಿಯ ಸಂಶೋಧ ಡಾ.ಕೆ.ವಿ.ಕೃಷ್ಣಮೂರ್ತಿ ಹಾಗೂ ವಿಶ್ವಕರ್ಮ ಅಭಿವೃದ್ಧಿ ನಿಗಮದ ಜಿಲ್ಲಾನಿರ್ದೇಶಕ ಟಿ.ಸಿ.ಡಮರುಗೇಶ್ ಅವರಿಗೆ ಸೂಚಿಸಿದರು.

-ಕೆ.ಬಿ.ಚಂದ್ರಚೂಡ್

Leave a Reply

Your email address will not be published. Required fields are marked *

× How can I help you?