ಬೇಲೂರು-ಕೇಂದ್ರ ಹಾಗು ರಾಜ್ಯ ಸರಕಾರಗಳ ಸಹಭಾಗಿತ್ವದ ಯೋಜನೆಯಾದ ಪ್ರದಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಅಡಿ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿರುವವರಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಸೀಮಾ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ಹೆಕ್ಟೇರಿನ ಒಳಗೆ ಜಮೀನು ಹೊಂದಿರುವ ರೈತರಿಗೆ ಒಟ್ಟು ಖರ್ಚಿನ ಶೇಕಡಾ 90 ರಷ್ಟು ಹಾಗು 2ಹೆಕ್ಟೇರ್ ನಿಂದ 5 ಹೆಕ್ಟೇರ್ ನವರೆಗಿನ ರೈತರಿಗೆ ಒಟ್ಟು ಖರ್ಚಾದ ಮೊತ್ತದ ಶೇಕಡಾ 45 ರಷ್ಟು ಸಹಾಯಧನವನ್ನು ನೀಡಲು ಅವಕಾಶವಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಅರ್ಜಿಗಳನ್ನು ಜೇಷ್ಠತೆಯ ಆಧಾರದ ಮೇಲೆ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಹೇಳಿದ್ದು,ಆಸಕ್ತ ರೈತರು ನಿಗದಿತ ಅರ್ಜಿ ನಮೂನೆಯ ಜೊತೆಗೆಗೆ ಪ್ರಸಕ್ತ ಶಾಲಿನ ಪಹಣಿ,ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ,ಕೃಷಿ ಹಾಗು ರೇಷ್ಮೆ ಇಲಾಖೆಗಳ ನಿರಪೇಕ್ಷಣಾ ಪತ್ರ,ಪರಿಶಿಷ್ಟ ಪಂಗಡ ಹಾಗು ಪರಿಶಿಷ್ಟ ಜಾತಿಯ ರೈತರು ಜಾತಿ ಪ್ರಮಾಣಪತ್ರ.ಪಾಸ್ಪೋರ್ಟ್ ಸೈಜ್ ನ ಫೋಟೋ ಹಾಗು ಜಂಟಿ/ಪೌತಿ ಕಾತೆ ಇದ್ದಲ್ಲಿ ವಂಶವೃಕ್ಷ ಹಾಗು ಒಪ್ಪಿಗೆ ಪತ್ರ ಇವಿಷ್ಟನ್ನು ಲಗತ್ತಿಸಿ ತಾಲೂಕು ಸಹಾಯಕ ತೋಟಗಾರಿಕಾ ಅಧಿಕಾರಿಗಳ ಕಚೇರಿಗೆ ನೀಡಲು ಸೂಚಿಸಿದ್ದಾರೆ.
—————-ನೂರ್ ಅಹಮ್ಮದ್