ಅರಕಲಗೂಡು– ತಾಲ್ಲೂಕು ಹನ್ಯಾಳಿನಲ್ಲಿ ಸಂಜೆ ಏರ್ಪಡಿಸಲಾಗಿದ್ದ ಶಾಲಾ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು.
ಗ್ರಾಮದ ಪೂರ್ವ ಪ್ರಾಥಮಿಕ ಶಾಲೆ(ಮಕ್ಕಳ ಮನೆ), ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ,ಎಸ್ ಎಮ್ ಎಸ್ ಶಿಕ್ಷಣ ಸಂಸ್ಥೆ ಸಂಸ್ಥಾಪಕರು ಹಾಗೂ ರುದ್ರಪಟ್ಟಣದ ನಿವೃತ್ತ ಶಿಕ್ಷಕರು, ವಿಶೇಷ ಅತಿಥಿಗಳಾಗಿ ಬಿ.ವಿ.ಮಂಜುನಾಥ್ ಆಗಮಿಸಿ ಶಿಕ್ಷಣದ ಮಹತ್ವ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಅಭಿವೃದ್ಧಿ ಪರ ಮಕ್ಕಳ ಹಿತವಚನ ನೀಡಿದರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ತಾರಾ ಎ ಮಂಜು, ಮಕ್ಕಳ ಮನೆ ಮಕ್ಕಳಿಗೆ ಬಹುಮಾನ ವಿತರಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಅರಕಲಗೂಡು ತಾಲ್ಲೂಕಿನ ಚಿಕ್ಕಬೊಮ್ಮನಹಳ್ಳಿಯಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ನವೀನ್ , ಅರಕಲಗೂಡಿನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಶ್ರೀಯುತ ಮಹೇಶ್ ಸರ್, ಹಾಸನದ ಹಿಮ್ಸ್ ನ ಮುಖ್ಯ ಲೆಕ್ಕಾಧಿಕಾರಿ ಡಾ ಅಶೋಕ್ ಹನ್ಯಾಳ್ ಹಾಗೂ ಶಾಲೆಯ ನಿವೃತ್ತ ಶಿಕ್ಷಕರುಗಳು ಭಾಗವಹಿಸಿದ್ದರು.