ಹಾಸನ: ಪ್ರತಿನಿಧಿ ಸಾಹಿತ್ಯ ಬಳಗ ಹಾಗೂ ಹಾಸನ ಜಿಲ್ಲಾ ಬರಹಗಾರರ ಸಂಘದ ವತಿಯಿಂದ ಫೆ.9ರ ಭಾನುವಾರ ಮಧ್ಯಾಹ್ನ 1 ಗಂಟೆಗೆ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಯಂತಿ ಚಂದ್ರಶೇಖರ್ ಅವರ ನಿರ್ಲಿಪ್ತ ಹಾಗೂ ಕವಿ ಎನ್.ಎಲ್.ಚನ್ನೇಗೌಡ ರವರ ಕೃತಿಗಳ ಬಿಡುಗಡೆ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ ಹಾಗೂ ಕವಿಗೋಷ್ಠಿ ಏರ್ಪಡಿಸಲಾಗಿದೆ.
ಸಾಹಿತಿ ಡಾ.ಹೆಚ್.ವಿ.ಪಾಶ್ರ್ವನಾಥ್ ಅವರು ಕಾರ್ಯಕ್ರಮ ಉದ್ಘಾಟಿಸುವರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಎಸ್.ಚಂದ್ರಕಿರಣ್ ಕೃತಿ ಬಿಡುಗಡೆಗೊಳಿಸುವರು, ದಾಳೇಗೌಡ ಹೊಸಳ್ಳಿ, ಪ್ರವೀಳ್ ಜಗಾಟ, ಬಿ.ಟಿ.ಲೋಕೇಶ್ ಮುಂತಾದವರು ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ರಾಜೇಶ್ವರಿ ಹುಲ್ಲೇನಹಳ್ಳಿ, ಪತ್ರಿಕಾ ರಂಗದ ಜೆ.ಆರ್.ರವಿಕುಮಾರ್, ಹಿರಿಯ ಸಾಹಿತಿ ಎ.ಹೆಚ್.ಬೋರೇಗೌಡ, ಅಂತರಾಷ್ಟ್ರೀಯ ಕರಾಟೆ ಪಟು ಚಿ|| ಆರ್ಯನ್ ಬಿ.ಬಿ. ಅವರನ್ನು ಸನ್ಮಾನಿಸಲಾಗುವುದು.