ಎಚ್.ಡಿ. ಕೋಟೆ-ತಾಲೂಕಿನ ಹೈರಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅವರ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿ, ಗ್ರಾಮದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಅವರ ಮತ್ತು ಶ್ರೀ ವಾಲ್ಮೀಕಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.
ಚುನಾವಣಾ ಪ್ರಕ್ರಿಯೆಯಾಗಿ 12ದಿನಗಳ ಮುಂಚೆ ಚುನಾವಣಾ ದಿನಾಂಕ ನಿಗದಿ ಮಾಡಿ ಗ್ರಾ.ಪಂ ಸದಸ್ಯರಿಗೆ ನೋಟಿಸ್ ನೀಡಲಾಗುತ್ತು. 17 ಸದಸ್ಯರಲ್ಲಿ ಚುನಾವಣಾ ಸಂದರ್ಭ 14 ಸದಸ್ಯರು ಹಾಜರಾಗಿದ್ದು, 3 ಜನ ಗೈರಾಗಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬರೇ ನಾಮಪತ್ರ ಸಲಿಸಿದ ಕಾರಣ ಅನಿಲ್ ಕುಮಾರ್ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಎಂದು ಚುನಾವಣಾಧಿಕಾರಿ ರಾಮಸ್ವಾಮಿ ಘೋಷಿಸಿದರು.

ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ಈ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಬಹಳ ಸಂತಸ ತಂದಿದೆ ನನ್ನ ಎಲ್ಲ ಸದಸ್ಯರಿಗು ಕೃತಜ್ಞತೆ ಹೇಳುತ್ತೇನೆ ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ ಅವರಿಗೆ ಮತ್ತು ಜನತೆಗೆ ಯಾವುದೇ ಕಪ್ಪು ಚುಕ್ಕಿ ಬರದ ರೀತಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಅಧ್ಯಕ್ಷರಾದ ಜಯ ನಾಗರಾಜ್ ಜೊತೆಗೂಡಿ ಎಲ್ಲಾ 17 ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ನಾನು ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದರು.
ಪಿಡಿಓ ಸಂತೋಷ್ ನಾಗ್, ಗ್ರಾಮ ಪಂಚಾಯತಿ ಅಧ್ಯಕ್ಷ ಜಯ ನಾಗರಾಜ್, ಕಾರ್ಯದರ್ಶಿ ಬಸವರಾಜ್, ಮಾಜಿ ಅಧ್ಯಕ್ಷ ಶಿವಣ್ಣ, ದಿನೇಶ್, ಮಟಕೆರೆ ರಾಜೇಶ್, ಕೆಂಪಮ್ಮ, ಪುಷ್ಪ, ಹೆಚ್, ಕೆ, ಶ್ರೀಧರ್, ರಾಜೇಶ್, ಗಾಯಿತ್ರಿ, ಜವರ ನಾಯಕ, ಚೆನ್ನಮದನಾಯಕ, ಶಿವಮಲ್ಲಯ್ಯ, ವೆಂಕಟೇಶ್, ಶೋಭಾ, ವಸಂತ, ನಿರ್ಮಲ, ಮಂಜುಳಾ, ತೇಜಾಮಣಿ, ಹಾಗೂ ಗ್ರಾಮದ ಮುಖಂಡರಾದ ಸಿದ್ದಲಿಂಗೇಗೌಡ, ವರಸಿಂಗೇಗೌಡ, ನಾಗರಾಜ್, ಗೋವಿಂದೇಗೌಡ, ಉದಯಕುಮಾರ್, ಕಾಳಿಂಗ, ಶಿವರಾಜ್, ಶಿವಣ್ಣೇಗೌಡ, ಪಣಿಂದ್ರ, ಹಲಗೇಗೌಡ, ಹಾಗೂ ಆಡಳಿತ ವರ್ಗದವರು ಗ್ರಾಮಸ್ಥರು ಇದ್ದರು.
-ಶಿವು ಕೋಟೆ