ಕೆ.ಆರ್.ಪೇಟೆ – ತಾಲೂಕಿನ ಕಸಬಾ ಹೋಬಳಿ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯವರ ಭವ್ಯವಾದ ತೆಪ್ಪೋತ್ಸವವು ಹೇಮಾವತಿ ನದಿಯಲ್ಲಿ ಅದ್ದೂರಿಯಾಗಿ ನಡೆಯಿತು.
ಮರದ ಹಲಗೆಗಳು ಹಾಗೂ ಬೃಹತ್ ಡ್ರಮ್ ಗಳಿಂದ ಸಿದ್ಧಪಡಿಸಿದ್ದ ತೆಪ್ಪದಲ್ಲಿ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಇಟ್ಟು ಅಲಂಕರಿಸಿ ಕಲರವ ವಿದ್ಯುತ್ ದೀಪಗಳು ಹಾಗೂ ಹೂವುಗಳಿಂದ ಅಲಂಕಾರ ಮಾಡಿ ಭಾನುವಾರ ರಾತ್ರಿ 8.30 ಕ್ಕೆ ಸರಿಯಾಗಿ ತೆಪ್ಪೋತ್ಸವಕ್ಕೆ ಶಾಸಕ ಹೆಚ್.ಟಿ ಮಂಜು ಹಾಗೂ ತಹಶೀಲ್ದಾರ್ ಅಶೋಕ್ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯವರ ಉತ್ಸವ ಮೂರ್ತಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.

ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯ ಉತ್ಸವ ಮೂರ್ತಿಗಳಿಗೆ ಬೆಟ್ಟದ ಪಾದದಿಂದ ಪೂಜೆ ಸ್ವೀಕರಿಸಿ ಹೊರಟ ತೆಪ್ಪವು, ಹೇಮಾವತಿ ನದಿಯ ಮಧ್ಯದಲ್ಲಿರುವ ಬೃಗು ಶಿಲೆಗೆ ಪೂಜೆ ಸಲ್ಲಿಸಿ, ನಾಟನಹಳ್ಳಿ ಭಾಗಕ್ಕೆ ತೆರಳಿ ಅಲ್ಲಿಂದ ನೇರವಾಗಿ ಕುಪ್ಪಳ್ಳಿ ಭಾಗಕ್ಕೆ ಬಂದು ಪೂಜೆ ಸ್ವೀಕರಿಸಿ ಸ್ವಸ್ಥಾನಕ್ಕೆ ಮರಳಿತು ತೆಪ್ಪೋತ್ಸವ ಅಂಗವಾಗಿ ವಿದ್ಯುತ್ ದೀಪಾಲಂಕಾರ ಹಾಗೂ ಡಿ.ಜೆ ಸದ್ದು ಭಕ್ತರ ಮನ ಸೂರೆಗೊಂಡಿತು,
ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದ್ದ ಬೆಟ್ಟದ ಪಾದ ಹಾಗೂ ಶ್ರೀ ಕಲ್ಯಾಣ ವೆಂಕಟರಮಣ ಸ್ವಾಮಿಯವರ ತೆಪ್ಪೋತ್ಸವ ಕಣ್ಣು ತುಂಬಿಕೊಳ್ಳಲು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ತೆಪ್ಪೋತ್ಸವದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಫೆ5 ರಂದು ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿಯವರ ಬ್ರಹ್ಮ ರಥೋತ್ಸವ ಸಡಗರ ಸಂಭ್ರಮಗಳಿಂದ ನಡೆದಿತ್ತು, ಇಂದು ತೆಪ್ಪೋತ್ಸವ ಆಚರಿಸುವ ಮೂಲಕ ಹೇಮಗಿರಿ ಜಾತ್ರೆಗೆ ತೆರೆ ಕಂಡಿತು.
ಈ ಸಂದರ್ಭದಲ್ಲಿ ಬಂಡಿಹೊಳೆ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಅಣ್ಣಪ್ಪ, ಕಸಬಾ ಹೋಬಳಿಯ ರಾಜಶ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಲೆಕ್ಕಾಧಿಕಾರಿ ಪೂಜಾ ಗೌಡ,ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷ ಆನಂದೇಗೌಡ,ಬಂಡಿಹೊಳೆ ಗ್ರಾ. ಪಂ ಸದಸ್ಯ ದರ್ಶನ್,ದೇವರಶೇಗೌಡ,ಕುಪ್ಪಹಳ್ಳಿ ಪ್ರಭುಗೌಡ,ಲವ ಕುಮಾರ್,ಮಾಕವಳ್ಳಿ ಎಂ,ಎಸ್ ಮಂಜೇಗೌಡ, ಬಿ.ಬಿ ಕಾವಲ್ ಮೋಹನ್ ಸೇರಿದಂತೆ ಉಪಸ್ಥಿತರಿದ್ದರು.
- ಮನು ಮಾಕವಳ್ಳಿ, ಕೆ ಆರ್ ಪೇಟೆ