ಕೊರಟಗೆರೆ-ಎಲೆರಾಂಪುರದಲ್ಲಿ-ಹಾಲು-ಉತ್ಪಾದಕರ-ಸಹಕಾರ-ಸಂಘದ- ನೂತನ ಕಟ್ಟಡ-ಉದ್ಘಾಟನೆ

ಕೊರಟಗೆರೆ: ತಾಲೂಕಿನ ಕೋಳಾಲ ಹೋಬಳಿಯ ಎಲೆರಾಂಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನವಾಗಿ ನಿರ್ಮಾಣ ಮಾಡಿದ ಕಟ್ಟಡವನ್ನು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಹಸ್ತದೊಂದಿಗೆ ಹಾಗೂ ಹಲವಾರು ಮುಖಂಡರೊಂದಿಗೆ ಉದ್ಘಾಟನೆ ಮಾಡಲಾಗಿತ್ತು.


ಈ ವೇಳೆ ನಿರ್ದೇಶಕ ತಾಲೂಕಿನ ವಿ.ಸಿದ್ದಗಂಗಯ್ಯಮಾತನಾಡಿ, ನಾನು ತಾಲೂಕಿನಲ್ಲಿ ಎರಡನೇ ಡೈರಿಯ ಎಲೆರಾಂಪುರ ಗ್ರಾಮದಲ್ಲಿ ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಡೈರಿಯ ಕಟ್ಟಡವನ್ನು ಉದ್ಘಾಟನೆ ಮಾಡಿದ್ದು. ಎಲ್ಲರ ಸಹಕಾರದೊಂದಿಗೆ ಚುನಾವಣೆ ಗೆದ್ದಿದ್ದು ನಾನು ಇನ್ನೂ ಗೆಲ್ಲಬೇಕಾದರೆ. ನಿಮ್ಮಗಳ ಸೇವೆ ಪರಿಪೂರ್ಣವಾಗಿ ರೈತರುಗಳ ಧ್ವನಿಯಾಗಿ ನಿಂತು ಹೋರಾಟ ಮಾಡುವ ಮೂಲಕ ಹಾಗೂ ಕೆಲಸ ಮಾಡುವ ಮೂಲಕ ಗೆಲ್ಲಬೇಕು.

ಹಲವಾರು ಯೋಜನೆ ಗಳನ್ನು ಕನಸು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ತರಬೇತಿ ಕಾರ್ಯಕ್ರಮ ಇಟ್ಟುಕೊಂಡಿದ್ದು. ಪರೀಕ್ಷೆಯಲ್ಲಿ ಯಾವ ರೀತಿಯಲ್ಲಿ ಹೆದರಿಸಬೇಕು. ಯಾವ ರೀತಿ ಪರೀಕ್ಷೆ ಬರೆಯಬೇಕು. ಎಂಬುದನ್ನು ಮುಂದಿನ ದಿನಗಳಲ್ಲಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು ಅಂದುಕೊಂಡಿದ್ದು. ಗ್ರಾಮೀಣ ಪ್ರದೇಶದ ಮಕ್ಕಳನ್ನು ಬದಲಾವಣೆ ಯಾಗುತ್ತದೆ ಎಂದರು.

ರೈತರಿಗೆ ನಾಳೆಯಿಂದ ಎರಡೂ ರುಪಾಯಿ ಕೊಡುವ ಚಿಂತನೆ ಮಾಡಿದ್ದು ಮತ್ತು ಡೈರಿಯಲ್ಲಿ ಕೆಲಸ ನಿರ್ವಹಿಸುವವರಿಗೆ ವೇತನ ಹೆಚ್ಚು ಮಾಡುವ ಚರ್ಚೆ ಕೂಡ ಮಾಡಲಾಗಿದೆ ಎಂದು ಹೇಳುತ್ತಾ. ಡೈರಿ ದೇವಸ್ಥಾನ ಶಾಲೆಗಳು ನಮ್ಮ ಊರಿನ ಆಸ್ತಿಗಳು ನಮ್ಮೆಲ್ಲರ ಆಸ್ತಿ ಮತ್ತು ಸಾರ್ವಜನಿಕರ ಆಸ್ತಿ ನಾವುಗಳು ಭಾರತ ದೇಶದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ. ಅಖಂಡ ಭಾರತ ಮತ್ತು ಅದರಲ್ಲೂ ನಾವುಗಳು ಕರ್ನಾಟಕದಲ್ಲಿ ಹುಟ್ಟಿ ಕೊರಟಗೆರೆ ತಾಲೂಕಿನಲ್ಲಿ ಹುಟ್ಟಿರುವುದು ನಮ್ಮ ಪುಣ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಮುಖ್ಯಸ್ಥರಾದ ಪುಷ್ಪಲತಾ. ಬಷೀರಾ. ಮಹಾಲಕ್ಷ್ಮಿ. ವಿಸ್ತಾರಣ ಸಂಯೋಜಕರು ಜಯಕುಮಾರ್. ಮಾಜಿ ತಾಲೂಕ ಪಂಚಾಯಿತಿ ಅಧ್ಯಕ್ಷ ಆರ್ ಎಸ್ ರಾಜಣ್ಣ. ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು. ಭಾಜಪ ಅಧ್ಯಕ್ಷ ರುದ್ರೇಶ್. ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ನರಸಿಂಹರಾಜು. ಕೃ.ಪ. ಅಧ್ಯಕ್ಷ ಮಧು. ಮುಖಂಡರಾದ ನಟರಾಜು. ಲಕ್ಷ್ಮಿಕಾಂತಣ್ಣ. ಗ್ರಾ. ಪಂ. ಸದಸ್ಯ ಉಮೇಶ್ ಚಂದ್ರ. ಜೈ ರುದ್ರಯ್ಯ. ಸಂಘದ ಅಧ್ಯಕ್ಷ ಮಹೇಶ್ ಚಂದ್ರ. ಹನುಮಂತರಾಯಪ್ಪ. ವೈವಿ ಚಂದ್ರಶೇಖರಯ್ಯ. ಮಂಜುನಾಥ್. ರುದ್ರೇಶ್. ಮರಿಯಣ್ಣ. ನರಸಿಂಹರಾಜು. ಹನುಮಂತರಾಯಪ್ಪ. ನಾಗರಾಜಯ್ಯ. ಪಾತಿಲಿಂಗಯ್ಯ. ರತ್ನಮ್ಮ. ಶಾಂತಲಾದೇವಿ. ಹಾಲು ಪರಿವೀಕ್ಷಕ ನರಸಿಂಹಮೂರ್ತಿ. ಕಾರ್ಯದರ್ಶಿ ನಾಗರಾಜು. ಸಹಾಯಕ ಸಿದ್ದಗಂಗಯ್ಯ.ಹಾಗೂ ಸಂಘದ ಸಿಬ್ಬಂದಿ ವರ್ಗ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?