ತುಮಕೂರು- ಪಟ್ವಣ ವಿದ್ಯಾನಗರದಲ್ಲಿ ವಿದ್ಯಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಜ್ಞಾನಿ ಶ್ರೇಷ್ಠ ಡಾ. ಸಿ. ದುರ್ಗಾ ಪ್ರಸಾದ್ ರವರನ್ನು ಸನ್ಮಾನಿಸಲಾಯಿತು.
ವಿದ್ಯಾನಗರದ ನಿವಾಸಿಯೂ ಆಗಿರುವ ವಿಜ್ಞಾನಿ ದುರ್ಗಾ ಪ್ರಸಾದ್ ರವರು ವಿಶ್ವದ ಪ್ರತಿ ಶತ ಎರಡು ಪರ್ಸೇಂಟ್ ಶ್ರೇಷ್ಠ ವಿಜ್ಞಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರಿಂದ ಅವರನ್ನು ನಾಗದೇವತಾ ಪ್ರತಿಷ್ಠಾಪನಾ ರಜತ ಮಹೋತ್ಸವದ ಸಂದರ್ಭದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಆಡಿಟರ್ ಟಿ.ಆರ್.ಅಂಜನಪ್ಪರವರು ವಹಿಸಿದ್ದರು.
ಪಾಲಿಕೆಯ ಮಾಜಿ ಸದಸ್ಯರುಗಳಾದ ಲಲಿತಾ ರವೀಶ್, ಶ್ರೀನಿವಾಸಮೂರ್ತಿ ಸೇರಿದಂತೆ ಬಡಾವಣೆಯ ಪ್ರಮುಖರು, ಸಂಘದ ಉಪಾಧ್ಯಕ್ಷ ವಾಸುದೇವ ತವಳ, ಕಾರ್ಯದರ್ಶಿ ನಿವೃತ್ತ ಪ್ರಾಚಾರ್ಯ ಕುಮಾರಸ್ವಾಮಿ, ಖಜಾಂಚಿ ಜಿ.ವಿ. ಲಕ್ಷ್ಮೀನರಸಿಂಹಯ್ಯ, ನಿರ್ದೇಶಕ ಗಂಗಾಧರಮೂರ್ತಿ, ವಿದ್ಯುತ್ ಗುತ್ತಿಗೆದಾರ ಯೋಗೀಶ್, ಕಲಾವಿದರೂ ಹಾಗೂ ನಿವೃತ್ತ ಬ್ಯಾಂಕ್ ನೌಕರ ಚಿಕ್ಕಹನುಮಂತಯ್ಯ, ಹೆಚ್ಎಂಟಿ ನಂಜುಂಡಪ್ಪ, ರವೀಶ್ ಮತ್ತಿತರರು ಪಾಲ್ಗೊಂಡಿದ್ದರು.
- ಕೆ.ಬಿ.ಚಂದ್ರಚೂಡ್