ತುಮಕೂರು: ಯುವ ನಾಯಕ ರಾಹುಲ್ ಗೌರಿಶಂಕರ್ ಅವರು ಹಾಗೂ ಪ್ರಿಯಾ ಗಾರ್ಮೆಂಟ್ಸ್ ಮಾಲೀಕರು, ಗೂಳೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಉಸ್ತುವಾರಿಗಳಾದ ಪಾಲನೇತ್ರಯ್ಯನವರು ಪಾಲಸಂದ್ರದ ವಿವಿಧ ದೇವಾಲಯಗಳ ಮುಖ್ಯದ್ವಾರದ ಉದ್ಘಾಟನೆಯನ್ನು ನೆರವೇರಿಸಿದರು.
ಜಿ.ಪಾಲನೇತ್ರಯ್ಯನವರು ಮಾತನಾಡುತ್ತಾ ನಮ್ಮ ಕಲ್ಪತರು ನಾಡು ಸಾಧು-ಸಂತರ ಶರಣರ ಬೀಡಾಗಿದ್ದು ಪುರಾಣ ಪುಣ್ಯ ದೇವಾಲಯಗಳ ತವರು ಜಿಲ್ಲೆಯಾಗಿದೆ, ಈ ಜಿಲ್ಲೆಯ ವಿವಿಧ ದೇವಾಲಯಗಳ ಜೀರ್ಣೋದ್ಧಾರ ಹಾಗೂ ಶೈಕ್ಷಣಿಕ ಶಿಕ್ಷಣ ಗ್ರಾಮೀಣ ಭಾಗದ ಜನತೆಗೆ ರಸ್ತೆ, ಬೀದಿ ದೀಪ ಅಭಿವೃದ್ಧಿಪಡಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಮಹಾತ್ಮ ಗಾಂಧೀಜಿಯವರ ಗ್ರಾಮಗಳ ಅಭಿವೃದ್ಧಿಯು ಮುಖ್ಯ ಗುರಿಯಾಗಿದ್ದು ಅವರ ಮಾರ್ಗದರ್ಶನ ಆದರ್ಶ ತತ್ವ ಸಿದ್ಧಾಂತಗಳು ನಮಗೆ ಸದಾ ಸಿಗಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಗೌರಿಶಂಕರವರ ಸುಪುತ್ರ ರಾಹುಲ್.ಪಾಲಸಂದ್ರದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು,ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ರವರ ಆಪ್ತ ಸಹಾಯಕ ಸುರೇಶ್, ಹಾಗೂ ಗ್ರಾಮದ ಮುಖ್ಯಸ್ಥರು ಭಾಗವಹಿಸಿ ಶುಭ ಹಾರೈಸಿದರು.
- ಕೆ.ಬಿ.ಚಂದ್ರಚೂಡ್