ಹೊಳೆನರಸೀಪುರ – ಅರಣ್ಯ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾಡು ಬೆಳೆಸಿ ನಾಡು ಉಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ಬಿ.ಟಿ. ಮಾನವ ಕಲಾತಂಡದ ಸದಸ್ಯರು ಇಲ್ಲಿನ ಗಾಂಧೀ ವೃತ್ತದಲ್ಲಿ ಬೀದಿನಾಟಕಾಡಿ ಗಮನ ಸೆಳೆದರು.
ಕಾಡು ಬೆಳೆಸಿ, ನಾಡು ಉಳಿಸಿ ನಾಡುಳಿದರೆ ನಾವೂ ನೀವೂ ಉಳಿಯುತ್ತೇವೆ. ಕಾಡಿಲ್ಲದಿದ್ದರೆ ನಾಡಿಲ್ಲ ಎಂದು ಕಲಾವಿದ ಬಿ.ಟಿ. ಮಾನವ ತಂಡದ ಸದಸ್ಯರು ಬೀದಿನಾಟಕದ ಮೂಲಕ ಗಮನ ಸೆಳೆದರು. ಮಂಗಳವಾರ ಇಲ್ಲಿನ ಮಹಾತ್ಮಾ ಗಾಂಧೀ ವೃತ್ತದಲ್ಲಿ ಅರಣ್ಯ ಇಲಾಖೆ ಆಯೋಜಿಸಿದ್ದ ಕಾಡು ಬೆಳೆಸಿ ನಾಡು ಉಳಿಸಿ ಜಾಗೃತಿ ಕಾರ್ಯಕ್ರಮದಲ್ಲಿ ನಾಟಕ ಆಡಿ ಗಮನ ಸೆಳೆದರು.
ಕಾಡಿಲ್ಲದಿದ್ದರೆ ಮಳೆ ಬರಲ್ಲ. ಮಳೆ ಇಲ್ಲದಿದ್ದರೆ ಬೆಳೆ ಇರಲ್ಲ. ಕುಡಿಯಲು ನೀರೂ ಸಿಗುವುದಿಲ್ಲ. ಕಾಡುಪ್ರಾಣಿಗಳು ನಾಡಿಗೆ ನುಗ್ಗಿ ಮನುಷ್ಯರನ್ನೇ ಕೊಂದು ತಿನ್ನುವ ಅಪಾಯ ಇರುತ್ತದೆ. ನಿಮ್ಮ ತಾಲ್ಲೂಕಿನಲ್ಲಿ ಈಗಾಗಲೇ ಚಿರತೆಗಳ ಹಾವಳಿ ಹೆಚ್ಚಾಗಲು ಕಾಡು ಪ್ರದೇಶ ಕಡಿಮೆ ಆಗಿರುವುದೇ ಕಾರಣವಾಗಿದೆ ಎಂದು ನಾಟಕ ಪ್ರದರ್ಶನ ಮಾಡಿದರು.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಶ್ರುತಿ ಮತ್ತು ದಿಲೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಮಾರಸ್ವಾಮಿ, ಮೂತರ್ಿ, ರುದ್ರೇಶ್,ರವಿ. ರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.