ಆಲೂರು-ವಿದ್ಯಾರ್ಥಿಗಳು ಅಧ್ಯಯನಕ್ಕೆ ಕೊಡುವಷ್ಟೇ ಮಹತ್ವವನ್ನು ಕ್ರೀಡೆಗಳಿಗೂ ಕೊಡಬೇಕು-ಪ್ರತಿಭಾ ಮಂಜುನಾಥ್ ಕಿವಿಮಾತು

ಆಲೂರು:ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಧ್ಯಯನಕ್ಕೆ ಎಷ್ಟು ಮಹತ್ವವನ್ನು ಕೊಡುತ್ತೀರೋ ಅಷ್ಟೇ ಮಹತ್ವವನ್ನು ಕ್ರೀಡೆಗಳಿಗೆ ಕೊಟ್ಟರೆ ಸಮಾಜದಲ್ಲಿ ಒಬ್ಬ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಬಿಜೆಪಿ ಮುಖಂಡರಾದ ಪ್ರತಿಭಾ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು ಆಲೂರು ಪಟ್ಟಣದ ಕಲಿವೀರ್ ಪ್ರೌಢಶಾಲಾ ವಿದ್ಯಾ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ 2024-25 ನೇ ಸಾಲಿನ ಕಸಬಾ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಎದುರಿಸಲು ಮಕ್ಕಳು ಹೆಚ್ಚು ಸಮಯವನ್ನು ವಿದ್ಯಾಭ್ಯಾಸದ ಕಡೆಗೆ ಕೊಡುತ್ತಿದ್ದಾರೆ ಆದರೆ ಒಳ್ಳೆಯ ಆರೋಗ್ಯವಿದ್ದರೆ ಮಾತ್ರ ವಿದ್ಯಾಭ್ಯಾಸವನ್ನು ಮಾಡಲು ಸಾಧ್ಯ. ಒಳ್ಳೆಯ ಆರೋಗ್ಯ ಸಿಗಬೇಕಾದರೆ ಕ್ರೀಡೆಗಳಲ್ಲಿ ಭಾಗವಹಿಸಬೇಕೆಂದರು.

ಇವತ್ತು ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಲಾಗುತ್ತಿದೆ ಕ್ರೀಡಾಕೂಟದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಕ್ರಿಯವಾಗಿ ಭಾಗವಹಿಸಬೇಕು.ಈ ಮೂಲಕ ಶಿಕ್ಷಣ ಕ್ಷೇತ್ರದ ಜೊತೆಗೆ ಕ್ರೀಡೆಯಲ್ಲೂ ಸಹ ಸಾಧನೆ ಮಾಡಲು ಇದು ಉತ್ತಮ ವೇದಿಕೆಯಾಗಿದ್ದು ಈ ಅವಕಾಶವನ್ನು ಬಳಸಿಕೊಂಡು ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವನೆ ಮತ್ತು ಉತ್ಸುಕತೆಯಿಂದ ಸ್ಪರ್ಧಿಸಿ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೆಗೌಡ ಮಾತನಾಡಿ ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ ಭಾಗವಹಿಸುವಿಕೆ ಮುಖ್ಯ ಹೀಗಾಗಿ ಕ್ರೀಡೆಯಲ್ಲಿ ಭಾಗವಹಿಸುವವರು ಸಕರಾತ್ಮಕ ಮನೋಭಾವನೆಯಿಂದ ಉತ್ತಮವಾಗಿ ಆಟವನ್ನು ಆಡುವ ಮೂಲಕ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಯುವಕರು ಪಾಠದ ಜೊತೆಗೆ ಕ್ರೀಡೆ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಒಬ್ಬೊಬ್ಬರಲ್ಲಿ ಒಂದೊಂದು ಕಲೆ, ಕ್ರೀಡಾ ಪ್ರತಿಭೆ ಇರುತ್ತದೆ. ಅದನ್ನು ವೇದಿಕೆ, ಆಟೋಟ ಗಳಲ್ಲಿ ಪ್ರದರ್ಶನ ಮಾಡಬೇಕು ಎಂದು ತಿಳಿಸಿದರು.

ಕಲಿವೀರ್ ಪ್ರೌಢಶಾಲಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಭಾಗ್ಯ ಕಲಿವೀರ್ ಮಾತನಾಡಿ ಕ್ರೀಡಾ ಚಟುವಟಿಕೆಗಳು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಪಠ್ಯ ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಹೆಸರು ಬರಲಿದೆ ಹಾಗಾಗಿ ನಮ್ಮ ಸಂಸ್ಥೆ ಎಲ್ಲಾ ಕ್ಷೇತ್ರಗಳಲ್ಲಿಯೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಕಲಿವೀರ್ ಪ್ರೌಢಶಾಲಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಭಾಗ್ಯ ಕಲಿವೀರ್, ಟಿಪಿಓ ಗೋವಿಂದೇಗೌಡ,ತಾಲೂಕು ಪ್ರೌಢಶಾಲಾ ಸಂಘದ ಅಧ್ಯಕ್ಷ ಬಸವರಾಜು,ಪ್ರೌಢಶಾಲಾ ಸಂಘದ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್,ಮುಖ್ಯ ಶಿಕ್ಷಕ ಶಿವಪ್ಪಗೌಡ,ಅಬ್ಬನ ಕೃಷ್ಣಮೂರ್ತಿ,ವಾಸುದೇವ್ ರಾಮೇಗೌಡ ಸೇರಿದಂತೆ ಶಿಕ್ಷಕರು ಸಿಬ್ಬಂದಿಗಳು ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

——————--ಧರ್ಶನ ಕೆರೆಹಳ್ಳಿ

Leave a Reply

Your email address will not be published. Required fields are marked *

× How can I help you?