ತುಮಕೂರು-ಕರ್ನಾಟಕ-ದಲಿತ-ಸಂಘರ್ಷ-ಸಮಿತಿ-ಬೆಂಗಳೂರು- ವಿಭಾಗೀಯ-ಸಂಚಾಲಕರಾಗಿ-ಛಲವಾದಿ-ಶೇಖರ್-ನೇಮಕ

ತುಮಕೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನ ವಾದ) ಬೆಂಗಳೂರು ವಿಭಾಗೀಯ ಸಂಚಾಲಕರನ್ನಾಗಿ ಛಲವಾದಿ ಶೇಖರ್ ಅವರನ್ನು ನೇಮಕ ಮಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ)ರಾಜ್ಯ ಪ್ರಧಾನ ಸಂಚಾಲಕ ಗೋವಿಂದರಾಜು ಆದೇಶಿಸಿದ್ದಾರೆ.

ತುಮಕೂರು ನಗರದ ಛಲವಾದಿ ಶೇಖರ್ ಅವರನ್ನು ಈ ಕೂಡಲೇ ಜಾರಿಗೆ ಬರುವಂತೆ ಒಂಭತ್ತು ಜಿಲ್ಲೆಗಳಿಗೆ ವಿಭಾಗೀಯ ಸಂಚಾಲಕರನ್ನಾಗಿ ನೇಮಿಸಲಾಗಿದ್ದು, ಈ ಕೂಡಲೇ ಒಂಭತ್ತು ಜಿಲ್ಲೆಯಾಧ್ಯಂತ ಸಂಘವನ್ನು ಬಲವಾಗಿ ಸಂಘಟಿಸಿ ಎಲ್ಲಾ ಜಿಲ್ಲಾ, ತಾಲ್ಲೂಕು, ಹೋಬಳಿ ಹಾಗೂ ಗ್ರಾಮ ಘಟಕಗಳನ್ನು ರಾಜ್ಯ ಪದಾಧಿಕಾರಿಗಳ ಹಾಗೂ ಸ್ಥಳಿಯ ಮುಖಂಡರ ಮಾರ್ಗದರ್ಶನ, ಸಹಕಾರದೊಂದಿಗೆ ಸಂಘಟನೆ ರಚನೆ ಮಾಡಿ ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

× How can I help you?