ತುಮಕೂರು : ನಗರದ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇನ್‌ಕ್ಯಾಪ್ ಕಾರ್ಖಾನೆಯಲ್ಲಿನ ನೂರಾರು ಸಂಖ್ಯೆಯ ಕಾರ್ಮಿಕರು ಇಂದು ರಕ್ತದಾನ ಮಾಡುವುದರ ಮೂಲಕ ಸಮಾಜಕ್ಕೆ ಕಾರ್ಮಿಕರ ಪಾತ್ರ ಅತ್ಯಂತ ಹಿರಿಮೆಯಾಗಿದೆ ಎಂದು ಸಾರಿದರು.
ಕಾರ್ಮಿಕರು ಪ್ರತಿನಿತ್ಯ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುವುದರಲ್ಲಿಯೇ ಸಮಯ ಕಳೆದು ಹೋಗಿರುತ್ತದೆ, ನಾವು ಎಲ್ಲಿ ಹೋಗಿ ಶ್ರಮದಾನ ಮಾಡಬೇಕು ಎಂದು ಯೋಚಿಸುತ್ತಿದ್ದ ಸಂದರ್ಭದಲ್ಲಿಯೇ ಸಂಜೀವಿನಿ ರಕ್ತಕೇಂದ್ರದ ಅರುಣ್ ಕುಮಾರ್‌ರವರು ನಾವೇ ಸ್ವತಃ ತಮ್ಮ ಕಾರ್ಖಾನೆಗೆ ಬಂದು ರಕ್ತವನ್ನು ಪಡೆದು, ಅದನ್ನು ಸಂಸ್ಕರಿಸಿ ರಕ್ತದ ಬೇಡಿಕೆ ಇರುವಂತಹ ರೋಗಿಗಳಿಗೆ ನೇರವಾಗಿ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ಮುಂದೆ ಬಂದರು.
ಅವರ ಸಹಕಾರದಿಂದಲೇ ಇಂದು ನಮ್ಮ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಲು ಸಹಕಾರಿ ಆಯಿತು ಎಂದು ಇನ್‌ಕ್ಯಾಪ್ ಕಾರ್ಖಾನೆಯ ಮುಖ್ಯಸ್ಥರಾದ ಡಾ. ರಾಕೇಶ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.