ಹೊಳೆನರಸೀಪುರ: ನಾವು ಪೊಲೀಸರು ಸಂಬಳ ಪಡೆದು ಮಾಡುವ ಕೆಲಸ ಸೇವೆ ಎನಿಸುವುದಿಲ್ಲ. ಅದು ನಮ್ಮ ರ‍್ತವ್ಯ. ನಾನು ನಮ್ಮ ಸಂಬಳದಲ್ಲಿ ಏನಾದರು ಸಮಾಜಕ್ಕೆ ಸೇವೆ ಮಾಡಿದರೆ ಅದು ಸೇವೆ ಎನಿಸುತ್ತದೆ ಎಂದು ರ‍್ಕಲ್ ಇನ್ಸ್ಪೆಕ್ಟರ್ ಬಿ.ಆರ್. ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.
ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ನಿರ್ವಹಿಸಿದ್ದರಿಂದ ರಾಷ್ಟ್ರಪತಿಪದಕ ದೊರೆತ ಹಿನ್ನೆಲೆಯಲ್ಲಿ ಸೋಷಿಯಲ್ ಕ್ಲಬ್ ಆಯೋಜಿಸಿದ್ದ ಕಾರ‍್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಕಾರ್ಯ ನಿರ್ವಹಿಸಿದ್ದರಿಂದ ಸಿಬ್ಬಂದಿಗಳು, ನನ್ನ ಹಿರಿಯ ಅಧಿಕಾರಿಗಳು, ಸಾರ್ವಜನಿಕರು ನೀಡಿದ ಸಹಕಾರ ಹಾಗೂ ನಮ್ಮ ತಂದೆ, ತಾಯಿ, ಶಿಕ್ಷಕರು ನೀಡಿದ ಮಾರ್ಗದರ್ಶನ ನಾನು ಪೊಲೀಸ್ ಇಲಾಖೆ ಸೇರಲು ಪ್ರೇರೇಪಿಸಿತು.
ನಾನು ಎಂ.ಎಸ್.ಸಿ. ಬಾಟ್ನಿ ಮಾಡಿ ಪಿ.ಎಚ್,ಡಿ ಪಡೆಯಲು ಸಿದ್ದತೆ ನಡೆಸಿದ್ದೆ. ಕೃಷಿ ಅಧಿಕಾರಿ ಅಥವಾ ಸಸ್ಯ ವಿಜ್ಞಾನಿ ಆಗಬೇಕು ಎಂದು ಕೊಡಿದ್ದೆ. ಅದೇ ಸಮಯದಲ್ಲಿ ಸರ್ಕಾರ ಹಲವು ಇಲಾಖೆಗಳಿಂದ ನೌಕರಿಗೆ ಕರೆದರು. ಪರೀಕ್ಷೆ ಬರೆದ ನಾನು ಅಬಕಾರಿ ಇಲಾಖೆ, ಕೃಷಿ ಇಲಾಖೆ
ಅಧಿಕಾರಿ ಮತ್ತು ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿ ಆಯ್ಕೆ ಆಗಿದ್ದೆ. ನಮ್ಮ ತಂದೆ ಪೊಲೀಸ್ ಇಲಾಖೆ ಸೇರಿ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಒಳ್ಳೆ ಹೆಸರುಗಳಿಸಬಹುದು ಮತ್ತು ಜನರಿಗೆ ಉತ್ತಮ ಸೇವೆ ನೀಡಬಹುದು ಎಂದು ಹೇಳಿದ್ದರು.

ಅವರ ಸೂಚನೆ ಹಾಗೂ ಅವರ ಆಶಯದಂತೆ ಕೆಲಸ ಮಾಡಿದ್ದರಿಂದ ಇಂದು ನನ್ನ ಕರ್ತವ್ಯಕ್ಕೆ ರಾಷ್ಟ್ರಪತಿ ಪದಕ ದೊರೆತಿರುವುದು ನನಗೂ ಹಾಗೂ ನನ್ನ ಅಪ್ಪ ಅಮ್ಮನಿಗೆ ಅತ್ಯಂತ ಸಂತಸ ಹಾಗೂ ಆತ್ಮತೃಪ್ತಿ ತಂದಿದೆ ಎಂದರು.
ಡಿ.ವೈ.ಎಸ್.ಪಿ. ಶಾಳು (ಐ.ಪಿ.ಎಸ್) ಅವರು ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಸೇವೆ ಮಾಡಿದರೆ ಸಮಾಜದಲ್ಲಿ ಅತ್ಯುತ್ತಮ ಗೌರವ ಸಿಗುತ್ತದೆ ಎನ್ನುವುದು ನನಗೆ ರ‍್ಥವಾಗಿದೆ. ಪ್ರದೀಪ್ ಕುಮಾರ್ ಇಲಾಖೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದರಿಂದ ಅವರು ರಾಷ್ಟ್ರಪತಿ ಪದಕ ಪಡೆದು ಇಂದು ನಮ್ಮೆಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ. ನಮ್ಮ ಇಲಾಖೆಯ ಪ್ರತಿಯೊಬ್ಬ ಅಧಿಕಾರಿಯೂ ಇಂತಹ ಸಾಧನೆ ಮಾಡಿ ಗೌರವಕ್ಕೆ ಪಾತ್ರರಾಗಬೇಕು ಎಂದು ಬಯಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ಶಾಲೂ ನಗರಠಾಣೆಯ ಎಸ್.ಐ. ಅಭಿಜಿತ್, ಗ್ರಾಮಾಂತರ ಠಾಣೆಯ ರಮೇಶ್, ಹಳ್ಳಿಮೈಸೂರು ಠಾಣೆಯ ಸಲ್ಮಾನ್ಖಾನ್ ಅವರನ್ನು ಸನ್ಮಾನಿಸಿದರು. ಸೋಷಿಯಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಹೊನ್ನಪ್ಪ, ಕರ‍್ಯದಶರ್ಿ ಸುರ‍್ಶನ್ ಬಾಬು, ಉಪಾಧ್ಯಕ್ಷ ವನ್ನಿಕೊಪ್ಪಲು ಮಂಜು, ರಂಗಸ್ವಾಮಿ, ಖಜಾಂಚಿ ವಿಶ್ವೇಶ್ವರಯ್ಯ, ಅಬಕಾರಿ ಇಲಾಖೆ ಅಧಿಕಾರಿ ಪಾಂಡುರಂಗ, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ್, ಸುರೇಶ್ಕುಮಾರ್, ಪುರಸಭಾ ಸದಸ್ಯ ಎ. ಜಗನ್ನಾಥ್, ಸುಂದರ್, ನಟೇಶ್, ಮಾಜಿ ಅಧ್ಯಕ್ಷ ನರಸಿಂಹೇಗೌಡ ಇತರರು ಭಾಗವಹಿಸಿದ್ದರು..