ರಾಮನಾಥಪುರ– ವಸತಿ ರಹಿತ ಜನರ ಪರವಾಗಿ ಹಾಗೂ ಖಾತೆ ಮಾಡಲು ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ದ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ತಾಲೂಕು ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಡಾಕ್ಟರ್ ಸರೋಜಿನಿ ಮಹಿಷಿ ಚಳುವಳಿ ಹೋರಾಟಗಾರರಾದ ಡಾ.ಎಸ್ ರಾಘವೇಂದ್ರ ಗೌಡ್ರು, ಖಾಲಿ ನಿವೇಶನ ಕೊಟ್ಟು ಮೂರು ವರ್ಷಗಳಾದರೂ ಹಕ್ಕು ಪತ್ರ ಪಡೆದಂತ ಜನರಿಗೆ ಖಾತೆ ಮಾಡಿಕೊಡದೆ. ಖಾಲಿ ನಿವೇಶನ ಪಡೆದಂತ ಬಡ ಜನರು ಮನೆ ಕಟ್ಟಿಕೊಳ್ಳಲು ಯಾವುದೇ ಸಂಘ ಸಂಸ್ಥೆಗಳಲ್ಲಿ ಸಾಲ ಪಡೆಯಲು ಆಗದೆ ಹಾಗೂ ಜನರು ಮನೆ ಕಟ್ಟಿಕೊಳ್ಳಲು ಅವರಿಗೆ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಆಗದೆ, ನೊಂದ ಬಡ ಜನರ ಪರವಾಗಿ ನ್ಯಾಯ ಕೊಡಿಸಲು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಈ ದಿನ ರಾಮನಾಥಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಕುಮಾರಸ್ವಾಮಿ ರವರಿಗೆ ತಾಲೂಕ್ ಪಂಚಾಯತಿ ಅಧಿಕಾರಿಗಳಾದ ಪ್ರಕಾಶ್ ರವರಿಗೆ ಹಾಗೂ ಅರಕಲಗೂಡು ತಾಲ್ಲೂಕಿನ ತಹಶೀಲ್ದಾರ್ ಮಲ್ಲಿಕಾರ್ಜುನ ರವರಿಗೆ ಇಂದು ಮನವಿ ಮಾಡಿದ್ದೇವೆ.
ಶೀಘ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಖಾತೆ ಮಾಡಿಕೊಡಬೇಕು ಹಾಗೂ ಇವರು ಕೊಟ್ಟಿರುವ ಕಾಲಿ ನಿವೇಶನದ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ಕುಡಿಯುವ ನೀರು ವಿದ್ಯುತ್ ವಿಚಾರವಾಗಿ ಮನವಿ ಮಾಡಿದ್ದು, ಈ ವಿಚಾರವಾಗಿ ಇನ್ನ ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕು ಇಲ್ಲದಿದ್ದಲ್ಲಿ. ನೊಂದ ಜನರ ಪರವಾಗಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ತಾಲೂಕ್ ಪಂಚಾಯತಿ ಕಚೇರಿ ಮುಂಭಾಗ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಎಸ್ ರಾಘವೇಂದ್ರ ಗೌಡ್ರು ರಾಜ್ಯ ಮಹಿಳಾ ಅಧ್ಯಕ್ಷರಾದ ಮಧುಶ್ರೀ .ಮೆಕಾನಿಕ್ ರಮೇಶ್ ಗಿರೀಶ್ ಆನಂದ ಆಚಾರ್ ಬೇಕರಿ ರಮೇಶ್ ಮಂಜು ಶೆಟ್ಟಿ ಮಂಜೇಗೌಡ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಳೇ ಗೌಡ್ರು ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಎಸ್ .ದಿವಾಕರ್ ರಾಮನಾಥಪುರ ವಿಜಯ್ ರಾಜು ಯಾಸಿನ್ ಅಬ್ಬು ಮಂಜುನಾಥ್ ಶಿವಕುಮಾರ್ ವೇದಾವತಿ ಲತಾ ಶೈಲಾ ಸುಜಾತ ಪಾರ್ವತಿ ಮಂಜುಳಾ ಲಕ್ಷ್ಮಿ ವಸಂತ್ ಕುಮಾರಿ ಅಂಬಿಕಾ ವೀಣಾ ಶೀಲಾ ರಕ್ಷಣೆ ಇನ್ನೂ ಹೆಚ್ಚಿನ ನೊಂದ ಕುಟುಂಬದವರು ಭಾಗವಹಿಸಿದ್ದರು .