ತುಮಕೂರು : ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ಹಾಗೂ ಸಂಸದ ವಿ.ಸೋಮಣ್ಣ ಗುರುವಾರ ನವದೆಹಲಿಯಲ್ಲಿ ಘನವೆತ್ತ ರಾಷ್ಟçಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಪರಮಪೂಜ್ಯ ಲಿಂಗೈಕ್ಯ ಡಾ: ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ೧೧೮ನೇ ಜನ್ಮ ದಿನೋತ್ಸವದ ಅಂಗವಾಗಿ ಏಪ್ರಿಲ್ ೧ರಂದು ನಡೆಯಲಿರುವ “ಗುರುವಂದನಾ ಸಂಭ್ರಮಾಚರಣೆಗೆ” ಆಗಮಿಸುವಂತೆ ಆಹ್ವಾನ ನೀಡಿದರು.
ಶ್ರೀ ಮಠದ ಪರಂಪರೆ ಹಾಗೂ ಪರಮಪೂಜ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮಿಜಿಯವರ ಬಗ್ಗೆ ಅಪಾರ ಗೌರವ ತೋರಿದ ಘನತವೆತ್ತ ರಾಷ್ಟçಪತಿಗಳು ಆಹ್ವಾನವನ್ನು ಅತ್ಯಂತ ಭಕ್ತಿಭಾವದಿಂದ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತಾಗಿ ರಾಷ್ಟçಪತಿ ಕಾರ್ಯಲಯದಿಂದ ಸೂಕ್ತ ದಿನಾಂಕವನ್ನು ಶೀಘ್ರವಾಗಿ ತಿಳಿಸಲಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.