ಕೊರಟಗೆರೆ:– ಬೇಸಿಗೆ ಪ್ರಾರಂಭಕ್ಕೆ ಮುನ್ನವೇ ಬೆಂಕಿ ಅವಘಡಗಳು ಹೆಚ್ಚಾಗುತ್ತಿದ್ದು, ರೈತರ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ನಾಲ್ಕು ಮೇಕೆಗಳು ಸುಟ್ಟು ಕರ್ಕಲಾದರೆ, ಮೇಕೆಗಳನ್ನು ಬದುಕಿಸಲು ಹೋಗಿ ಅತ್ತೆ ಸೊಸೆಗೆ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿ ಸ್ವಲ್ಪದ್ರಲ್ಲೇ ಪ್ರಾಣಪಾಯದಿಂದ ಪಾರದ ಘಟನೆ ಕೊರಟಗೆರೆ ತಾಲೂಕಿನಲ್ಲಿ ಜರುಗಿದೆ.
ಕೊರಟಗೆರೆ ತಾಲೂಕಿನ ಬಿ ಡಿ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಟ್ಟಿಪಟ್ಟೆಪಾಳ್ಯ ದ ಶಿಲ್ಪ ಜಯರಾಮ್ ಎಂಬುವರ ಗುಡಸಿಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು 4 ಮೇಕೆಗಳು ದವಸ ಧಾನ್ಯ ಸೇರಿದಂತೆ ಎಲ್ಲವೂ ಸುಟ್ಟು ಬಸ್ಮವಾಗಿ ರೈತ ಕುಟುಂಬ ದಿಕ್ಕು ಕಾಣದಂತೆ ಕೈ ಹೊತ್ತು ಕುಳಿತಿರುವಂತಹ ಘಟನೆ ನಡೆದಿದೆ.
ಆಕಸ್ಮಿಕ ಬೆಂಕಿಯಿಂದ ಮೇಕೆಗಳನ್ನು ಕಾಪಾಡಲು ಹೋದ ಅತ್ತೆ ಸೊಸೆ ಇಬ್ಬರಿಗೂ ಬೆಂಕಿ ತಗೂಲಿ ಕೈ ಕಾಲು ಸೇರಿದಂತೆ ಮುಖಕ್ಕೆ ಗಾಯಗಳಾಗಿ ಕೊರಟಗೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಬಡ ಕುಟುಂಬ ಮೇಕೆಗಳನ್ನೇ ಸಾಕಿ ಬದುಕುತ್ತಿದ್ದ ಕುಟುಂಬಕ್ಕೆ ಸರ್ಕಾರದಿಂದ ಸಹಾಯಧನ ಕೊಡಿಸುವಂತೆ ಒತ್ತಾಯಿಸಲಾಗಿದೆ.

ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿತಲಿ 8 ಮೇಕೆಯಲ್ಲಿ 4ಮೇಕೆ ಸುಟ್ಟು ಕರ್ಕಲಾಗಿವೆ , ಇದರ ಜೊತೆಯಲ್ಲಿ ಜೋಳ , ಹುರುಳಿ ಸೇರಿದಂತೆ ದವಸ ಧಾನ್ಯಗಳು ಬೆಂಕಿಗೆ ಸುಟ್ಟು ಹೋಗಿದ್ದು, ಮಧ್ಯಾಹ್ನದ ವೇಳೆಯಲ್ಲಿ ಯಾರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಂತರ ವಿಚಾರ ತಿಳಿದು ಮೇಕೆಗಳನ್ನು ಕಾಪಾಡಲು ಹೋದ ಅತ್ತೆ ಸೊಸೆಗೆ ಬೆಂಕಿ ತರಲಿ ಸಣ್ಣಪುಟ್ಟ ಗಾಯಗಳಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬಡ ಕುಟುಂಬವಾದ ಕಾರಣ ಸರ್ಕಾರದಿಂದ ಇವರಿಗೆ ಸಹಾಯಧನ ನೀಡಲು ಕೊರಲಾಗಿದೆ.
- ಸೀನು