ಬಣಕಲ್-ಸಬ್ಳಿಯಲ್ಲಿ-ಕ್ಲಸ್ಟರ್-ಮಟ್ಟದ-ಕಲಿಕಾ-ಹಬ್ಬ-ಮಕ್ಕಳ-ಪ್ರತಿಭೆಗೆ-ಕಲಿಕಾ-ಹಬ್ಬ-ವೇದಿಕೆ-ದೇವರಾಜ್-ಸಬ್ಳಿ

ಬಣಕಲ್ :ಶಿಕ್ಷಣ ಇಲಾಖೆ ಕಲಿಕಾ ಹಬ್ಬ ಎಂಬ ಕಾರ್ಯಕ್ರಮ ರೂಪಿಸಿರುವುದರಿಂದ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆ ಹೊರಬರಲು ಸಹಕಾರಿ ಯಾಗಲಿದೆ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ದೇವರಾಜುರವರು ಅಭಿಪ್ರಾಯ ಪಟ್ಟರು.

ಸಬ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಟ್ಟಕಡೆಯ ಗ್ರಾಮದ ಮಕ್ಕಳಿಗೂ ಶಿಕ್ಷಣ ಸಿಗಬೇಕು ಯಾರು ಶಿಕ್ಷಣದಿಂದ ವಂಚಿತವಾಗಬಾರದು ಎಂದು ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಶಿಕ್ಷಣಕ್ಕೆ ಸಂಬಂಧ ಪಟ್ಟ ವಿನೂತನವಾದ ಹಲವಾರು ಕಾರ್ಯಕ್ರಮ ರೂಪಿಸುತ್ತಿದೆ ಇಂತಹ ಕಾರ್ಯಕ್ರಮವನ್ನು ಮಕ್ಕಳು ಉಪಯೋಗಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ ಚಂದ್ರಪ್ಪ ರವರು ವಹಿಸಿದ್ದರು ಮುಖ್ಯಅತಿಥಿಗಳಾಗಿ ರುದ್ರಯ್ಯ, ಗ್ರಾ.ಪಂ.ಅಧ್ಯಕ್ಷರಾದ ಜರಿನಾ, ಸದಸ್ಯರಾದ ಆತಿಕಾ ಬಾನು, ಸುರೇಶ್, ಮುಖ್ಯ ಶಿಕ್ಷಕರಾದ ಮರುಳಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.

11 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು,ಶಿಕ್ಷಕರು, ಪೋಷಕರು ಉಪಸ್ಥಿತರಿದ್ದ. ಕಲಿಕಾ ಹಬ್ಬದಲ್ಲಿ ಪಠ್ಯಕ್ಕೆ ಸಂಬಂದಿಸಿದ ವಿವಿಧ ಕಂಠಪಾಠ,ಓದುವಿಕೆ, ಗಣಿತ, ಈಗೆ ಹತ್ತು ಹಲವು ಚಟುವಟಿಕೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದರು.


ವರದಿ: ✍️ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?