ಅರಕಲಗೂಡು-ಪಿಒಪಿ ಯಿಂದ ಮಾಡಿದ ಗಣಪತಿಗಳನ್ನು ಯಾರು ಕೊಳ್ಳಬಾರದು,ಗಣೇಶ ಸಮಿತಿಯವರು ಸಣ್ಣ ಗಣಪತಿಯಾದರು ಸರಿಯೇ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಗಳನ್ನೇ ಪ್ರತಿಷ್ಠಾಪಿಸುವಂತೆ ಕೋಟೆ-ಕೊತ್ತಲು ಗಣಪತಿ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರದೀಪ್ ರಾಮಸ್ವಾಮಿ ಮನವಿ ಮಾಡಿಕೊಂಡರು.
ಸಮಿತಿಯ ವತಿಯಿಂದ ದೇವಸ್ಥಾನದ ಆವರಣದಲ್ಲಿ ಚಿಣ್ಣರಿಗಾಗಿ ಹಮ್ಮಿಕೊಳ್ಳಲಾಗಿದ್ದ ಮಣ್ಣಿನಿಂದ ಗಣಪತಿ ಮೂರ್ತಿ ಮಾಡುವ ಶಿಭಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿವಿಧ ರೀತಿಯಲ್ಲಿ ಪರಿಸರ ಕುತ್ತಿಗೆ ತುತ್ತಾಗುತ್ತಿದ್ದು ಪಿಒಪಿ ಗಣಪತಿ ಮೂರ್ತಿಗಳ ಕೊಡುಗೆಯು ಅದರಲ್ಲಿದೆ.ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಿದಾಗ ಪಿಒಪಿ ನೀರಿನಲ್ಲಿ ಬೆರೆತು ಜಲಚರಗಳಿಗೆ ಕಂಟಕವಾಗುವುದರ ಜೊತೆಗೆ ಕೆರೆಗಳ ನೀರು ಕಲುಷಿತಗೊಳ್ಳುತ್ತಿದೆ.ಈ ಕಾರಣದಿಂದ ನಾವೆಲ್ಲಾ ಪ್ರಜ್ಞಾವಂತರಾಗಿ ಪಿಒಪಿ ಮೂರ್ತಿಗಳ ಬಹಿಷ್ಕರಿಸಿ ಮಣ್ಣಿನ ಮೂರ್ತಿಗಳ ಪ್ರತಿಷ್ಠಾಪಿಸುವತ್ತ ಮುಂದಾಗಬೇಕು ಎಂದರು.
ನಗರದ ಹಲವಾರು ಶಾಲೆಗಳ ಚಿಣ್ಣರಿಗಾಗಿ ಈ ಶಿಭಿರ ಆಯೋಜಿಸಲಾಗಿದ್ದು ಈ ಮೂಲಕ ಅವರಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ.ಮೂರ್ತಿ ತಯಾರಿಕೆಯ ಪಾಠದ ಜೊತೆಗೆ ಮಣ್ಣಿನ ಮೂರ್ತಿಗಳ ಪ್ರಾಮುಖ್ಯತೆಯನ್ನು ತಿಳಿಸಿಕೊಡಲಾಗುತ್ತಿದೆ.ಮಕ್ಕಳು ಅತ್ಯಂತ ಸಂಭ್ರಮ ಸಂತೋಷದಿಂದ ಮಣ್ಣಿನ ಮೂರ್ತಿಗಳ ತಯಾರಿಸುತ್ತಿದ್ದು ಅವನ್ನು ಅವರ ಮನೆಗಳಿಗೆ ಕೊಟ್ಟು ಕಳುಹಿಸುತ್ತಿದ್ದೇವೆ ಎಂದು ತಿಳಿಸಿದರು.
ಈ ಕಾರ್ಯಗಾರದಲ್ಲಿ ಜಿ ಜಿ ಜೆ ಸಿ ಅರಕಲಗೂಡು,ಹೆಚ್ ಪಿ ಎಸ್ ಪೇಟೆ ಅರಕಲಗೂಡು,ಜಿ ಹೆಚ್ ಪಿ ಎಸ್ ಹೆಂಟಗೆರೆ ಕೊಪ್ಪಲು, ಜಿ ಹೆಚ್ ಪಿ ಎಸ್ ಕೋಟೆ ಅರಕಲಗೂಡು, ಬ್ರೈಟ್ ಕಾನ್ವೆಂಟ್,ನಿವೇದಿತ ವಿದ್ಯಾ ಶಾಲೆ,ಕಂಚಿರಾಯಸ್ವಾಮಿ ಹೈಸ್ಕೂಲ್, ಜಿ ಹೆಚ್ ಪಿ ಎಸ್ ಕೆಲ್ಲೂರು,ಬಾಯ್ಸ್ ಜೂನಿಯರ್ ಸ್ಕೂಲ್,ಶಾಲೆಗಳ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ್ ವಾಟಾಳ್ ,ಹಿರಿಯ ವಕೀಲರಾದ ಜನಾರ್ಧನ ಗುಪ್ತ,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಾದೇಶ್,ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಲೋಕೇಶ್,ಸ್ಟುಡಿಯೋ ಬಾಬಣ್ಣ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯರು ರವಿಕುಮಾರ್, ಪ್ರಾಂಶುಪಾಲರು ಬಸವರಾಜ್, ಸಮಿತಿಯ ಸದಸ್ಯರುಗಳಾದ ಮುಗುಳೂರು ಪಾಂಡುರಂಗ,ಮೋಹನ್ ಕೆ ಅಬ್ಬೂರು,ಸೋಮಣ್ಣ ಸೋಂಪುರ,ಲೋಕೇಶ್ ಹೆಗ್ಡಳ್ಳಿ,ರಂಗಸ್ವಾಮಿ, ಕಾಂತರಾಜು, ನಸ್ರುಲ್ಲಾ ಟಿಪ್ಪು ಹಾಗು ಶಾಲೆಗಳ ಶಿಕ್ಷಕರು ಇದ್ದರು.
———————ಶಶಿಕುಮಾರ್ ಕೆಲ್ಲೂರು