ಚಿಕ್ಕಮಗಳೂರು– ಗ್ರಾಮಾಡಳಿತ ಅಧಿಕಾರಿಗಳ ಐದನೇ ದಿನದ ಪ್ರತಿಭಟನಾ ಸ್ಥಳಕ್ಕೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಶುಕ್ರವಾರ ಭೇಟಿ ನೀಡಿ ಅಹವಾಲು ಸ್ವೀಕರಿಸಿ ಮೂಲಸೌಕರ್ಯ ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಢೇರಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಸುಸಜ್ಜಿತವಾದ ಕಚೇರಿ, ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಮೊಬೈಲ್, ಲ್ಯಾಪ್ ಟಾಪ್ ಇನ್ನಿತರೆ ಪರಿಕರಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಗ್ರಾಮಾಡಳಿತ ಅಧಿಕಾರಿಗಳು ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೋಮೋ ಹಾಕ ದಂತೆ ಹಾಗೂ ಕಚೇರಿ ಅವಧಿಯಲ್ಲಿ ಹೊರತುಪಡಿಸಿ ಸಭೆ, ವರ್ಚುವಲ್ ಸಭೆ ನಡೆಸದಂತೆ ಸರ್ಕಾರ ಸುತ್ತೋಲೆಯನ್ನು ಹೊರಡಿಸಿದ ನಂತರವೂ ಕೂಡ ಕೆಲವು ಜಿಲ್ಲೆಗಳಲ್ಲಿ ಸರ್ಕಾರದ ಆದೇಶ ಉಲ್ಲಂಘಿಸುವವರ ಬಗ್ಗೆ ಶಿಸ್ತು ಕ್ರಮವಹಿಸಬೇಕು ಎಂದರು.

ಕ್ಷೇತ್ರ ಮಟ್ಟದ ಗ್ರಾಮಾಡಳಿತ ಅಧಿಕಾರಿಗಳನ್ನು ಕಚೇರಿಗಳಿಗೆ ನಿಯೋಜಿಸಿಕೊಂಡಿರುವ ಪ್ರಕರಣಗಳಲ್ಲಿ ಅವರುಗಳ ಮೂಲ ಹುದ್ದೆಗಳಿಗೆ ಬಿಡುಗಡೆಗೊಳಿಸಲು ಸರ್ಕಾರವು ಸುತ್ತೋಲೆ ಹೊರಡಿಸಿದ್ದು ಈ ಬಳಿಕವು ಸಹ ಕ್ಷೇತ್ರ ಮಟ್ಟದ ಅಧಿಕಾರಿಗಳನ್ನು ಕಚೇರಿ ನಿಯೋಜನೆಯಿಂದ ಬಿಡುಗಡೆಗೊಳಿಸದೇ ಇರುವ ಪ್ರಕರ ಣಗಳಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಸಂಬಂಧಿಸಿದ ಸಚಿವರು ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಸಾಕಾಗುವಷ್ಟು ಅವಶ್ಯಕತೆಯಿರುವ ಬೇಡಿಕೆಗಳನ್ನು ಈಡೇರಿಕೆಗೆ ಭರವಸೆ ನೀಡಿದರು.
–ಸುರೇಶ್ ಎನ್, ಚಿಕ್ಕಮಗಳೂರು