ಚಿಕ್ಕಮಗಳೂರು – ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಲೋಕಸಭಾ ಮಾದ ರಿಯ ಮೈತ್ರಿಕೂಟದ ತಂತ್ರಗಾರಿಕೆ ಅಳವಡಿಸಿಕೊಂಡಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಜನಸಾಮಾನ್ಯರ ಬದುಕಿಗೆ ಆಧಾರವಾಗುತ್ತಿತ್ತು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಬಿಜೆಪಿ ಹೋಬಳಿ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತ ರ ಸಭೆಯನ್ನುದ್ದೇಶಿಸಿ ಶುಕ್ರವಾರ ಸಂಜೆ ಅವರು ಮಾತನಾಡಿದರು.
ರಾಜ್ಯದಲ್ಲಿನ ಬೆಲೆಏರಿಕೆ ತಾಪಮಾನದಿಂದ ಇಂದು ಜನತೆಗೆ ಕಂಗಾಲಾಗಿದ್ದಾರೆ. ಪ್ರತಿಯೊಂದು ವಸ್ತುವಿನ ಮೇಲೆ ದರವನ್ನು ಏರಿಸಿ ಉಚಿತವಾಗಿ ನೀಡುತ್ತಿರುವ ರಾಜ್ಯಸರ್ಕಾರದಲ್ಲಿ ಜನಸಾಮಾನ್ಯರ ಮೂಲಭೂತ ಅಭಿವೃಧ್ದಿಗೆ ಹಣವಿಲ್ಲ. ಮನಬಂದಂತೆ ಬೆಲೆಏರಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದರು.

ಉಡುಪಿ ಜಿಲ್ಲೆಯ ಪ್ರತಿಷ್ಟಿತ ಉದ್ಯಮಿ ಮಗ ಸೈನ್ಯಕ್ಕೆ ಸೇರ್ಪಡೆಗೊಂಡು ಪಾಕಿಸ್ತಾನದ ವಿರುದ್ಧ ಧೈರ್ಯ ದಿಂದ ಹೋರಾಡಿ ಹುತಾತ್ಮನಾಗುತ್ತಾನೆ. ಆದರೆ ರಾಜ್ಯದ ವಿಧಾನಸಭೆಯಲ್ಲಿ ಪಾಕಿಸ್ಥಾನಕ್ಕೆ ಜೈಕಾರ ಹಾಕುವ ಮೂಲಕ ಕಾಂಗ್ರೆಸ್ ಮುಖಂಡರುಗಳು ಹುತಾತ್ಮ ಸೈನ್ಯಕರಿಗೆ ಅಗೌರವ ತೋರುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಜಿಲ್ಲೆಯ ಮತದಾರರು ದೇಶ ಗಟ್ಟಿತನದಿಂದ ಕೂಡಿರಬೇಕು. ಸ್ವಾಭಿಮಾನ ಸಂಕೇತದಿಂದ ಜೀವಿಸಬೇಕು ಎಂಬ ದೃಷ್ಟಿಯಿಂದ ಲೋಕಸಭಾ ಸದಸ್ಯನಾಗಿ ತಮ್ಮನ್ನು ಆಯ್ಕೆಗೊಳಿಸಿದೆ. ಆದರೆ ಎಐಸಿಸಿ ಅಧ್ಯಕ್ಷ ಹಿಂ ದೂಗಳ ಪವಿತ್ರ ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಹೊಟ್ಟೆ ತುಂಬುವುದೇ ಎಂಬ ಅವಹೇಳನಕಾರಿ ಹೇಳಿ ಕೆ ನೀಡಿ ಹಿಂದೂ ಸಮಾಜಕ್ಕೆ ಘಾಸಿ ಉಂಟು ಮಾಡುವುದು ಸರಿಯಲ್ಲ ಎಂದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಯೊಂದು ಜನಾಂಗಕ್ಕೂ ಯೋಜನೆಗಳನ್ನು ರೂಪಿಸಿ ಸ್ಪಂದಿಸುತ್ತಿದೆ. ಅಲ್ಲದೇ ಈ ಹಿಂದೆ 5 ಲಕ್ಷವಿದ್ಧ ಆಧಾಯ ತೆರಿಗೆಯನ್ನು ಪ್ರಸ್ತುತ ಬಜೆಟ್‌ನಲ್ಲಿ 12 ಲಕ್ಷಕ್ಕೆ ಯಾವುದೇ ತೆರಿಗೆ ವಿಧಿಸದಂತೆ ಕ್ರಮ ಕೈಗೊಂಡಿದೆ. ಅಲ್ಲದೇ 36 ವಿವಿಧ ಔಷಧಿಗಳಲ್ಲಿ ತೆರಿಗೆ ವಿನಾಯಿತಿ ನೀಡಿ ಬಡವರ ಆಶಾದೀಪವಾಗಿದೆ ಎಂದರು.

ಹಳ್ಳಿಗಾಡಿನ ಪ್ರದೇಶಗಳಲ್ಲಿ ರಸ್ತೆ, ದೇವಾಲಯ ಅಭಿವೃಧ್ದಿಗೆ ಸಂಸದರ ನಿಧಿಯಿಂದ ಸೀಮಿತ ಅನುದಾ ನ ಮೀಸಲಿರುತ್ತದೆ. ಆದರೆ ತುರ್ತು ರಸ್ತೆ, ಶಾಲಾ ಕಟ್ಟಡ ದುರಸ್ಥಿಗೆ ಒಂದಿಷ್ಟು ಅನುದಾನ ನೀಡಬಹುದು. ಅಲ್ಲದೇ ಗ್ರಾಮದಲ್ಲಿ ಹಾದು ಹೋಗಿರುವ ರೈಲ್ವೆ ಸಮಸ್ಯೆಗೂ ಹೆಚ್ಚಿನ ಶ್ರಮ ವಹಿಸುವ ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳ ಸಣ್ಣಪುಟ್ಟ ಲೋಪದೋಷಗಳಿದ್ದಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ರಾಜು ಮಣೇನಹಳ್ಳಿ ಮಾತನಾಡಿ ಮೂಡಿಗೆರೆ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಅಂಬಳೆ ಅತ್ಯಂತ ಹಿಂದುಳಿದ ಹೋಬಳಿಯಾಗಿದೆ. ಕೆಲವೆಡೆ ಅರ್ಧಬರ್ಧ ಕಾಮಗಾರಿ ಪ್ರಗತಿಯ ಲ್ಲಿವೆ. ಹಿಂದಿನ ಬಿಜೆಪಿ ಶಾಸಕರ ಕಾಲದ ಅಭಿವೃದ್ಧಿಗಳನ್ನೇ ಹಾಲಿ ಶಾಸಕರು ಶಂಕುಸ್ಥಾಪನೆ ನೆರವೇರಿಸುತ್ತಿ ದ್ದಾರೆ ಎಂದು ಹೇಳಿದರು.
ಹಿಂದುಳಿದ ಹಾಗೂ ಗಡಿಪ್ರದೇಶದಲ್ಲಿರುವ ಹೋಬಳಿಗೆ ಸಮಗ್ರ ಅನುದಾನದ ಕೊರತೆಯಿದೆ. ಹೀಗಾಗಿ ಸಂಸದರ ನಿಧಿಯಿಂದ ಗ್ರಾಮಕ್ಕೆ ಸಮುದಾಯ ಭವನ, ಅಡುಗೆ ಮನೆ, ಶೌಚಾಲಯಕ್ಕೆ ಅನುದಾನ ಒದಗಿಸಿ ಕೊಡಬೇಕು. ಜೊತೆಗೆ ಅಂಬಳೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಗಳು ಗುಂಡಿ ಬಿದ್ದಿರುವ ಕಾರಣ ದುರಸ್ಥಿಗೂ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ ಅಂಬಳೆ ಹೋಬಳಿ ಪಕ್ಷದ ಅತ್ಯ ಂತ ಸಂಘಟನಾತ್ಮಕ ಹೋಬಳಿ. ಹಿಂದಿನ ಶಾಸಕರಿಗೆ ಹೆಚ್ಚಿನ ಮತವನ್ನು ನೀಡಿವೆ. ಮಾಜಿ ಸಂಸದ ಶ್ರೀಕಂ ಠಯ್ಯ ಮಾದರಿಯಂತೆ ಕೋಟಾ ಶ್ರೀನಿವಾಸ್ ಜನಪರ ಕಾಳಜಿ ಹೊಂದಿದ್ದು ಹೋಬಳಿ ಅಭಿವೃದ್ದಿಗೆ ಅನು ದಾನ ಒದಗಿಸುವ ಭರವಸೆಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಪ್ರಧಾ ನ ಕಾರ್ಯದರ್ಶಿ ದಿನೇಶ್ ಪಾದಮನೆ, ಅಂಬಳೆ ಹೋಬಳಿ ಅಧ್ಯಕ್ಷ ಯೋಗೀಶ್, ಜಿ.ಪಂ. ಮಾಜಿ ಸದಸ್ಯ ಮುಗುಳುವಳ್ಳಿ ನಿರಂಜನ್, ಮಂಡಲ ಅಧ್ಯಕ್ಷ ಕೃಷ್ಣ, ಅಂಬಳೆ ಹೋಬಳಿ ಜೆಡಿಎಸ್ ಅಧ್ಯಕ್ಷ ವಿಶ್ವನಾಥ್, ಮುಖಂಡರುಗಳಾದ ದೀಪಕ್‌ದೊಡ್ಡಯ್ಯ, ರಮೇಶ್, ಧರ್ಮೇಗೌಡ, ಮಂಜೇಗೌಡ, ತಮ್ಮೇಗೌಡ, ಮಾಸ್ತೇ ಗೌಡ, ಬಲರಾಮ್, ಜಗನ್ನಾಥ್, ಪ್ರಸನ್ನ ಮತ್ತಿತರರಿದ್ದರು.
—ಸುರೇಶ್ ಎನ್ ಚಿಕ್ಕಮಗಳೂರು