ಚಿಕ್ಕಮಗಳೂರು-ಜನಸಂಪರ್ಕ-ಸಭೆ-ಕಾಟಾಚಾರದ- ಸಭೆಗಳಾಗಬಾರದು-ಶಾಸಕ-ಹೆಚ್.ಡಿ.ತಮ್ಮಯ್ಯ


ಚಿಕ್ಕಮಗಳೂರು-ಗ್ರಾಮೀಣ ಭಾಗದ ಜನಸಂಪರ್ಕ ಸಭೆಗಳು ಗ್ರಾಮಸ್ಥರ ಮೂಲ ಸೌಕರ್ಯಕ್ಕೆ ಸ್ಪಂದಿಸುವ ಸಭೆಗಳಾಗಬೇಕು. ಕಾಟಾಚಾರದ ಸಭೆಗಳಾದರೆ ರೈತರ ಸಮಸ್ಯೆಗಳನ್ನು ಆಲಿಸಲು ಸಾಧ್ಯವಾಗದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.


ತಾಲ್ಲೂಕಿನ ಲಕ್ಕಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ಬಿಳೇಕಲ್ಲಹಳ್ಳೀ ಮತ್ತು ಲಕ್ಕಮ್ಮನಹಳ್ಳಿ ಗ್ರಾಮಸ್ಥರಿಗೆ ಹಮ್ಮಿಕೊಂಡಿದ್ಧ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.

ವೃದ್ದಾಪ್ಯವೇತನ, ಸಂದ್ಯಾಸುರಕ್ಷಾ, ಭಾಗ್ಯಲಕ್ಷ್ಮಿ ಯೋಜನೆ, ವಿದ್ಯುತ್ ಸಮಸ್ಯೆ, ನೀರಾವರಿ ಸೌಲಭ್ಯಗಳ ಕೊರತೆ ಎದುರಾದಲ್ಲಿ ರೈತರು ತಾಲ್ಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಮುಂದಿನ ಸಭೆ ತನಕ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಸಭೆ ನಡೆಸಿ ಪ್ರಯೋಜನವಿಲ್ಲ. ಹೀಗಾಗಿ ಹಳೇ ಅರ್ಜಿಗ ಳನ್ನು ಶೀಘ್ರವೇ ವಿಲೇಗೊಳಿಸಬೇಕು ಎಂದರು.


ದೇಶದ ಬೆನ್ನೆಲುಬು ರೈತರಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ವಾರ್ಷಿಕ ಎರಡು ಭಾರಿ ಗ್ರಾಮೀಣ ಪ್ರದೇ ಶದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜನಸಂಪರ್ಕ ಸಭೆ ನಡೆಸಲಾಗುತ್ತಿದೆ. ಶಾಸಕಾಂಗ ಮತ್ತು ಕಾರ್ಯಾಂಗ ಒಟ್ಟಾಗಿ ಕೈಜೋಡಿಸಿದರೆ, ರೈತರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹರಿಸಲು ಅಧಿಕಾರಿಗಳಿಗೆ ಸೂ ಚಿಸಲು ಸುಲಭವಾಗಲಿದೆ ಎಂದರು.


ಜನಸಂಪರ್ಕ ಸಭೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಕಾಟಾಚಾರದ ಸಭೆಗಳಾಗಬಾರದು. ಜನಸಾ ಮಾನ್ಯರ ಅರ್ಜಿಗಳನ್ನು ಕೂಲಂಕುಶವಾಗಿ ನೊಂದಾಯಿಸಿ, ಮುಂದಿನ ಸಭೆಯೊಳಗೆ ಹಿಂದಿನ ಅರ್ಜಿಗಳು ವಿಲೇಗೊಳಿಸಲು ಮುಂದಾಗಬೇಕು. ಹೊಸ ಅರ್ಜಿಗಳು ದಾಖಲಾಗುವಂತೆ ವ್ಯವಸ್ಥೆ ನಿರ್ಮಾಣಗೊಂಡರೆ ಶೇ.೮೦ರಷ್ಟು ಸಮಸ್ಯೆಗಳಿಗೆ ಪರಿಹಾರ ಲಭಿಸಿದಂತೆ ಎಂದರು.


ಇAದು ಬಿಳೇಕಲ್ಲಹಳ್ಳಿ ಮತ್ತು ಲಕ್ಕಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 2.25ಕೋಟಿ ರೂ. ವೆಚ್ಚ ದಲ್ಲಿ ಕಾಂಕ್ರೀಟ್ ರಸ್ತೆ, ಸಮುದಾಯ ಭವನ, ದೇವಾಲಯ, ಚರಂಡಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇ ರಿಸಿದ್ದು ಮಳೆಗಾಲ ಆರಂಭವಾಗುವ ಮುನ್ನವೇ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಂಡು ಗುಣಮಟ್ಟದಿಂದ ನಿರ್ವಹಿಸಿ ಗ್ರಾಮಸ್ಥರಿಗೆ ಸಮರ್ಪಿಸಬೇಕು ಎಂದರು.


ಗ್ರಾ.ಪ. ವ್ಯಾಪ್ತಿಯ ಕಟ್ಟೆಹೊಳೆಗೆ ನೀರು ತುಂಬಿಸುವ ಕಾರ್ಯಕ್ಕೆ ಹಲವಾರು ಮನವಿ ಸಲ್ಲಿಕೆಯಾದ ಹಿನ್ನೆಲೆ ವಿಧಾನಸಭೆಯಲ್ಲಿ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು ಮುಂಬರುವ ದಿನಗಳಲ್ಲಿ 1.5 ಕೋಟಿ ರೂ. ಅನುದಾನದಲ್ಲಿ ಹೊಳೆ ತುಂಬಿಸುವ ಕಾರ್ಯಕ್ಕೆ ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.


ಲಕ್ಕಮ್ಮನಹಳ್ಳಿ ಗ್ರಾ.ಪಂ. ಅಧ್ಯಕ್ಷ ಶಶಿಕಲಾ ಮಾತನಾಡಿ ಗ್ರಾಮೀಣ ನಿವಾಸಿಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಜನಸಂಪರ್ಕ ಸಭೆ ಹಮ್ಮಿಕೊಂಡಿದೆ. ಹೀಗಾಗಿ ಗ್ರಾಮ ಸ್ಥರು ರಸ್ತೆ, ವಿದ್ಯುತ್ ಸಂಪರ್ಕ ಇನ್ನಿತರೆ ಸಮಸ್ಯೆಗಳಿಗೆ ಸಮಗ್ರ ಮಾಹಿತಿ ಒದಗಿಸುವ ಮೂಲಕ ಅಧಿಕಾರಿ ಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು.


ಸ್ಥಳೀಯ ಗ್ರಾಮಸ್ಥರು ಮಾತನಾಡಿ ವಿದ್ಯುತ್ ಲೈನ್ ಹಾಗೂ ಒಲ್ಡ್ಟೇಜ್ ಸಮಸ್ಯೆಯಿದೆ. ಅನೇಕ ವಷ ðಗಳಿಂದ ಅರ್ಜಿ ಸಲ್ಲಿಸಿದರೂ ಮೆಸ್ಕಾಂ ಇಲಾಖೆ ಸ್ಪಂದಿಸುತ್ತಿಲ್ಲ ಹಾಗೂ ಸ್ಥಳೀಯ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಶಾಸಕರಿಗೆ ತಿಳಿಸಿದಾಗ, ಸ್ಥಳದಲ್ಲಿದ್ದ ಕೆಇಬಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಮುಂದಿನ ಮಾರ್ಚ್ ಅಂತ್ಯದೊಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಏಪ್ರಿಲ್‌ನಲ್ಲಿ ಬೇರೆ ಅಧಿಕಾರಿ ಗಳನ್ನು ನೇಮಿಸಲಾಗುವುದು ಎಂದು ಎಚ್ಚರಿಸಿದರು.

????????????????????????????????????


ಲಕ್ಕುಮ್ಮನಹಳ್ಳಿ, ಬಿಳೇಕಲ್ಲಹಳ್ಳಿಯ ಮಕ್ಕಳು ಚಿಕ್ಕಮಗಳೂರಿಗೆ ವಿದ್ಯಾಭ್ಯಾಸಕ್ಕೆ ತೆರಳಲು ಬೆಳಿಗ್ಗೆ ಸಂ ಜೆ ಉದ್ದೇಬೋರನಹಳ್ಳಿ ಗ್ರಾಮದಿಂದ ಬಸ್ ಸೌಲಭ್ಯವಿದೆ. ಸ್ವಲ್ಪಹೊತ್ತು ಕಳೆದರೂ ಯಾವುದೇ ಬಸ್‌ಗಳು ನಿಲು ಗಡೆಗೊಳಿಸುವುದಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಕಡೂರು-ಚಿಕ್ಕಮಗಳೂರು ಸಂಚರಿಸುವ ಬಸ್ ಗಳನ್ನು ಉದ್ದೇಬೋರನಹಳ್ಳಿ ಗ್ರಾಮಕ್ಕೆ ನಿಲುಗಡೆ ಸೂಚಿಸುತ್ತೇನೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಬಿಳೇಕಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಭಾನುಪ್ರಕಾಶ್, ತಹಶೀಲ್ದಾರ್ ಸುಮಂತ್, ತಾ. ಪಂ. ಇಓ ವಿಜಯ್‌ಕುಮಾರ್, ಲಕ್ಕಮ್ಮನಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಲಕ್ಷ್ಮಣ ಗೌಡ, ಸದಸ್ಯರಾದ ಸಣ್ಣಕಾಟೇ ಗೌಡ, ಚಂದ್ರಶೇಕರ್, ರತ್ನಮ್ಮ, ಹರೀಶ್, ಯಶೋಧ, ಲತಾ, ಪಿಡಿಓ ಕೆ.ಬಿ.ಮಂಜೇಗೌಡ, ಕಾರ್ಯದರ್ಶಿ ಬಿ.ಟಿ.ರುದ್ರೇಶ್, ಬಿಳೇಕಲ್ಲಹಳ್ಳಿ ಗ್ರಾ.ಪಂ. ಸದಸ್ಯರಾದ ಜಗದೀಶ್, ನಾಗರತ್ನ, ಗೋಪಿಕೃಷ್ಣ, ಲೋಲಾಕ್ಷಿ ಮತ್ತಿ ತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?