ಚಿಕ್ಕಮಗಳೂರು. ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮಿ ನಂಜಯ್ಯ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಸುಜಾತಾ ಶಿವಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಕೋಟೆಯಲ್ಲಿರುವ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ನಡೆದಿದ್ದು ಮುಂದಿನ ಐದು ವರ್ಷಗಳ ಅವಧಿಗೆ 13 ಜನ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯದ ಶ್ರೀಮತಿ ಎಚ್.ಆರ್ ರುಕ್ಮಿಣಿ ಅವರು ಘೋಷಿಸಿದರು.
ನಿರ್ದೇಶಕರುಗಳಾಗಿ ಆರ್‌ಟಿ ಜಯಶೀಲ, ಕೆ ನೇತ್ರಾವತಿ, ಕೆ.ಎಚ್ ನೇತ್ರಾವತಿ, ಗೀತಾ ಸುಂದರೇಶ್. ಎಸ್.ಬಿ ದಾಕ್ಷಾಯಿಣಿ, ಶರ್ಲಿ ಎಸ್ ರೋಡ್ರಿಗಸ್, ಪದ್ಮ ಮಹಂತೇಶ್, ಎಸ್.ಎಲ್ ರಶ್ಮಿ ಲಿಂಗಪ್ಪ, ಎಚ್.ಎಸ್ ಮೋಹನ್‌ಕುಮಾರಿ, ಜಯಶ್ರೀ ಸಿ.ಎಸ್, ಬಿ.ಆರ್ ಶೀಲಾ ರವರು ಆಯ್ಕೆಯಾಗಿದ್ದಾರೆಂದು ಸಂಘದ ಕಾರ್ಯದರ್ಶಿಯವರಾದ ಶ್ರೀಮತಿ ಪವಿತ್ರ ಅರಸ್ ರವರು ತಿಳಿಸಿದ್ದಾರೆ