ಚಿಕ್ಕಮಗಳೂರು-ಪ್ರಾಂಶುಪಾಲರ-ವರ್ಗಾವಣೆಗೆ-ದಸಂಸ-ಖಂಡನೆ

ಚಿಕ್ಕಮಗಳೂರು-ನಗರದ ಬಿಕನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಪ್ರಾಂಶುಪಾಲರಾದ ಮಧುಸೂದನ್ ಅವರನ್ನು ಇತರ ದಲಿತ ಸಂಘಟನೆಗಳ ಮುಖಂಡರ ಸುಳ್ಳು ಆರೋಪದ ಮೇಲೆ ವರ್ಗಾವಣೆ ಮಾಡಲಾಗಿದ್ದು ಕೂಡಲೇ ವರ್ಗಾವಣೆ ರದ್ದುಪಡಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಬಿ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಕಬ್ಬಿಕೆರೆ ಮೋಹನ್ ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.


ಪ್ರಾಂಶುಪಾಲರ ವರ್ಗಾವಣೆ ಕುರಿತು ಮಾತನಾಡಿದ ಅವರು ಬೀಕನಹಳ್ಳಿಯಲ್ಲಿರುವ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರ ವಿರುದ್ಧ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್ ವಾದ ಸಂಘಟನೆಯ ಕೆಲವು ಮುಖಂಡರು ತಮ್ಮ ವೈಯಕ್ತಿಕ ಕಾರಣಗಳಿಂದ ಆರೋಪಗಳನ್ನು ಹೊರಿಸಿ ವರ್ಗಾವಣೆ ಮಾಡಿಸಿರುವುದನ್ನು ನಮ್ಮ ಸಂಘಟನೆ ಖಂಡಿಸುತ್ತದೆ ಎಂದರು.


ಪ್ರಾಂಶುಪಾಲ ಮಧುಸೂದನ್ ಅವರು ಬಿಕನಹಳ್ಳಿಯ ವಸತಿ ಶಾಲೆಗೆ ಪ್ರಾಂಶುಪಾಲರಾಗಿ ಆಗಮಿಸಿದ ನಂತರ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ನಡೆಯುತ್ತಿದ್ದು ಮಕ್ಕಳಿಗೆ ಅನುಕೂಲವಾಗಲೆಂದು ದಾನಿಗಳ ಸಹಾಯದಿಂದ ಹಣ ಸಂಗ್ರಹಣೆ ಮಾಡಿ ಶಾಲೆಯನ್ನು ಅಭಿವೃದ್ಧಿ ಗೊಳಿಸಿರುತ್ತಾರೆ ಅಲ್ಲದೇ ವಸತಿ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ವಿನೂತನ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದು ಇದು ಪೋಷಕರ ಮೆಚ್ಚುಗೆಗೆ ಪಾತ್ರವಾಗಿರುತ್ತಾರೆ.

ಆದರೆ ಈ ಶಾಲೆಯಲ್ಲಿ ಗುತ್ತಿಗೆ ಆಧಾರಿತ ಅಡುಗೆ ಕೆಲಸ ಮಾಡುತ್ತಿರುವ ವಿದ್ಯಾ ಎಂಬ ಪರಿಶಿಷ್ಟ ಜಾತಿಗೆ ಸೇರಿದ ಹೆಣ್ಣು ಮಗಳ ಮೇಲೆ ಜಾತಿ ನಿಂದನ ಆರೋಪ ಹೊರಸಿ ಪರಿಶಿಷ್ಟ ಜಾತಿಯ ಹೆಣ್ಣು ಮಗಳ ಮೇಲೆಯೇ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿರುವುದು ಅಂಬೇಡ್ಕರ್ ವಾದ ಸಂಘಟನೆಯ ಸುಳ್ಳು ಆರೋಪದ ಸಾಕ್ಷಿ ಎಂಬಂತಿದೆ.

ವಿದ್ಯಾ ಅವರನ್ನು ಕೆಲಸದಿಂದ ತೆಗೆದುಹಾಕಲು ಸಮಾಜ ಕಲ್ಯಾಣ ಅಧಿಕಾರಿಗಳ ಮುಖಾಂತರ ಒತ್ತಡ ಹೇರಲಾಗಿದ್ದು, ದಲಿತ ಸಂಘಟನೆ ಯಾವುದೇ ಜಾತಿಯ ಬಡವರಿಗೆ ಅಥವಾ ದಲಿತರಿಗೆ ನ್ಯಾಯ ಕೊಡಿಸಲು ಇರುವುದೇ ಹೊರತು ಒಬ್ಬರ ಜೀವನವನ್ನು ಹಾಳು ಮಾಡಲಿಕ್ಕೆ ಅಲ್ಲ ಈ ಸುಳ್ಳು ಪ್ರಕರಣದಿಂದ ಅವರ ಉದ್ಯೋಗಕ್ಕೆ ತೊಡಕುಂಟಾಗಿದೆ.


 ಈ ವಿಚಾರದ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವಿದ್ಯಾ ಇವರನ್ನು ಮತ್ತೆ ಇದೇ ಶಾಲೆಯಲ್ಲಿ ಮುಂದುವರೆಸಬೇಕು ಹಾಗೂ ಪ್ರಾಂಶುಪಾಲರ ವರ್ಗಾವಣೆಯನ್ನು ಕೈಬಿಡಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ ಇಲ್ಲದೆ ಹೋದರೆ ಉಗ್ರ ಸ್ವರೂಪದ ಹೋರಾಟವನ್ನು ದಲಿತ ಸಂಘರ್ಷ ಸಮಿತಿ ರೂಪಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.


ವಿವಿಧ ದಲಿತ ಸಂಘಟನೆಗಳ ಮುಖಂಡರಾದ ನಂಜುಂಡಪ್ಪ, ಸತ್ಯನಾರಾಯಣ, ಹರೀಶ್ ಭಾರತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?