ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ ಹೋಬಳಿಯ ಚೀಕನಹಳ್ಳಿಕೊಪ್ಪಲು ಗ್ರಾಮದ ನಿವಾಸಿ ಸರೋಜಮ್ಮ ಮಾದೇಗೌಡ ದಂಪತಿಗಳ ಪುತ್ರ ಸಿ.ಎಂ.ಶಿವಕುಮಾರ್ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ.
ಅವರು ಮಂಡ್ಯದ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎ.ಎಸ್.ಶ್ರೀಕಂಠಪ್ಪ ರವರ ಮಾರ್ಗದರ್ಶನದಲ್ಲಿ ಮಂಡಿಸಿದ “ಎ ಸ್ಟಡಿ ಆನ್ ಎವಲೂಶನ್ ಆಫ್ ಟೂಲ್ ಕ್ಯಾರೆಕ್ಟೀರಿಸ್ಟಿಕ್ಸ್ ಆಫ್ ಕೋಟೆಡ್ ಅಂಡ್ ಅನ್ ಕೋಟೆಡ್ ಕಾರ್ಬೈಡ್ ಟಿಪ್ಪುಡ್ ಇನ್ಸರ್ಟ್ಸ್ ಇನ್ ಮೆಷನಿಂಗ್ ಸ್ಟೀಲ್ ಎಂಬ ಪ್ರಬಂಧಕ್ಕೆ” ದಿನಾಂಕ: 08-02-2025 ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ 24ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ ಪದವಿ ಪಡೆದುಕೊಂಡಿದ್ದಾರೆ.
ಸಿ.ಎಂ.ಶಿವಕುಮಾರ್ ಬಿ.ಇ,ಎಂ.ಟೆಕ್ ಪದವೀಧರರಾಗಿದ್ದು ಪ್ರಸ್ತುತ ಮಂಡ್ಯದ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ, ಮೆಕ್ಯಾನಿಕಲ್ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪಿ.ಹೆಚ್.ಡಿ ಪದವಿ ಪಡೆದು ತಾಲೂಕಿಗೆ ಕೀರ್ತಿ ತಂದ ಶಿವಕುಮಾರ್ ರವರನ್ನು ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ವಿಜಯ್‌ರಾಮೇಗೌಡ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್ ಅಭಿನಂದಿಸಿದ್ದಾರೆ.
- ಶ್ರೀನಿವಾಸ