ಕೊರಟಗೆರೆ:– ತಾಲ್ಲೂಕಿನ ಕೋಳಾಲ ಹೋಬಳಿಯ ನೀಲಗೋಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯಲ್ಲಿ. ಶುದ್ಧ ನೀರಿನ ಘಟಕವನ್ನು ಸ್ಥಳಿಯ ಶಾಸಕರು ಹಾಗೂ ಜಿಲ್ಲೆಯ ಗೃಹ ಸಚಿವರಾದ. ಡಾ. ಜಿ. ಪರಮೇಶ್ವರ್ ಅವರು ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದರು.
ಸಾರ್ವಜನಿಕರಿಂದ ಬೇಡಿಕೆ: ಅನೇಕ ದಿನಗಳಿಂದ ಕುಡಿಯುವ ನೀರಿಗಾಗಿ ಸಾರ್ವಜನಿಕರಿಂದ ಬೇಡಿಕೆ ಕೂಡ ಆಗಿದ್ದು. ಪಾವಗಡ ಹಾಗೂ ಬೆಂಗಳೂರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಇರಕಸಂದ್ರ ಕಾಲೋನಿ ಹಲವಾರು ಊರುಗಳಿಗೆ ಹೋಗುವ ಸ್ಥಳೀಯ ಮುಖ್ಯ ನಿಲ್ದಾಣವಾಗಿದ್ದು. ಇರಕಸಂದ್ರ ಕಾಲನಿಯು ಹಲವಾರು ಜನರು ಬೇರೆ ಬೇರೆ ಕಡೆಯಿಂದ ಬಂದು ವಾಸ ಮಾಡುತ್ತಿದ್ದು ಹಾಗೂ ವ್ಯಾಪಾರಗಳಿಗೆ ಇರಕಸಂದ್ರ ಕಾಲೋನಿ ಅತಿ ವೇಗವಾಗಿ ಬೆಳೆಯುತ್ತಿದ್ದು ಇದೇ ಊರಿನಲ್ಲಿ 2000 ಜನಕ್ಕೂ ಹೆಚ್ಚು ಜನರು ವಾಸ ಮಾಡುತ್ತಿದ್ದಾರೆ. ಮುಖ್ಯವಾಗಿ ಶುದ್ಧ ಕುಡಿವ ನೀರು ಬೇಕೇ ಬೇಕು ಅದರಲ್ಲೂ ಸುತ್ತಮುತ್ತ ಹಳ್ಳಿಗಳಲ್ಲಿ ಸರಕಾರದಿಂದ ಶುದ್ಧ ನೀರು ಕುಡಿಯುವ ಘಟಕಗಳನ್ನು ಚಾಲನೆಯಲ್ಲಿ ಇದ್ದು. ಇದೀಗ ಇರಕಸಂದ್ರ ಕಾಲೋನಿ ಜನರಿಗೆ ಹಾಗೂ ಸಾರ್ವಜನಿಕರಿಗೆ ಶುದ್ಧ ನೀರಿನ ಘಟಕ ಚಾಲನೆಯಾಗಿದೆ.

ಕ್ರಷರ್ ತಡೆಗಾಗಿ ಪರಮೇಶ್ವರ ಅವರಿಗೆ ರೈತರಿಂದ ಮನವಿ:
ಡಾ. ಜಿ ಪರಮೇಶ್ವರ್ ಅವರು ಶುದ್ಧ ನೀರಿನ ಘಟಕವನ್ನು ಚಾಲನೆ ಮಾಡಿ ಕೆಲಸ ನಿಮಿತ್ತ ಕೊರಟಗೆರೆ ಕಡೆಗೆ ಹೋಗುವಾಗ ಮಣ್ಣೂರ್ ತಿಮ್ಮನಹಳ್ಳಿ ಬಳಿಯ ಹೈವೇ ರಸ್ತೆಯ ಪಕ್ಕದಲ್ಲಿರುವ ಕರಡಿ ಕುಟ್ಟೆ ಎಲ್ಲಿ ಇನ್ನೇನು ಹೊಸದಾಗಿ ಸ್ಥಾಪನೆ ಮಾಡಲು ಹೊರಟಿರುವ ಕ್ರಷರ್ ನಿಲ್ಲಿಸುವಂತೆ ನೂರಕ್ಕೂ ಹೆಚ್ಚು ರೈತರಿಂದ ಡಾ: ಜಿ. ಪರಮೇಶ್ವರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು ಅಲ್ಲೇ ಇದ್ದ ಜಿಲ್ಲಾಧಿಕಾರಿಯವರಿಗೆ ಡಾ. ಜಿ. ಪರಮೇಶ್ವರ್ ಸೂಚನೆ ನೀಡಿ ಅವರು ಕ್ರಷರ್ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯತಿ ಸಿಇಒ ಪ್ರಭು, ತಾಲೂಕು ತಂಡಾಧಿಕಾರಿ ಮಂಜುನಾಥ್, ಉಪ ತಹಸಿಲ್ದಾರ್ ಮಧು, ಮುಖಂಡರಾದ ಶಂಕರ್. ನಾಗಣ್ಣನವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ. ಮಾಜಿ ಅಧ್ಯಕ್ಷೆ ನಿಂಗಮ್ಮ. ಉಪಾಧ್ಯಕ್ಷೆ ರಮ್ಯಾ ಹನುಮಂತರಾಯಪ್ಪ. ಸದಸ್ಯರಾದ ಭಾಗ್ಯಮ್ಮ. ತಿಲಕ್. ಸುರೇಶ್. ಕೃಷ್ಣಮೂರ್ತಿ. ಮಾಜಿ ಅಧ್ಯಕ್ಷ ನಾಗರಾಜು. ಹೊಸಕೋಟೆ ಕೃಷ್ಣಪ್ಪ. ವೆಂಕಟೇಶ್ . ಶಶಿಧರ್. ಈಶ್ವರ್. ಮೆಡಿಕಲ್ ಹನುಮಂತು. ಹಲವಾರು ಮುಖಂಡರು ಹಾಜರಿದ್ದರು.
- ನರಸಿಂಹಯ್ಯ ಕೋಳಾಲ