ಬೆಂಗಳೂರು: ಏಷ್ಯಾದ ಅತಿದೊಡ್ಡ ವಕೀಲರ ಸಂಘ ಎಂದು ಖ್ಯಾತಿ ಹೊಂದಿದ ಬೆಂಗಳೂರು ವಕೀಲರ ಸಂಘಕ್ಕೆ೨೦೨೫-೨೮ನೇ ಸಾಲಿಗೆ ೨ನೇ ಬಾರಿ ಅಧ್ಯಕ್ಷರಾಗಿ ಹಿರಿಯ ವಕೀಲರಾದ ವಿವೇಕ್ ಸುಬ್ಬಾರೆಡ್ಡಿರವರು ಮತ್ತೊಮ್ಮೆ ಆಯ್ಕೆಯಾಗಿದ್ದಾರೆ.ವಿವೇಕ್ ಸುಬ್ಬಾರೆಡ್ಡಿರವರು ೬೮೨೦ ಮತಗಳನ್ನು ಪಡೆಯುವುದರೊಂದಿಗೆ ಪುನರಾಯ್ಕೆಯಾಗಿದ್ದಾರೆ.
ಕಳೆದ ಬಾರಿ ಮಾಡಿದ ಅದ್ಭುತ ಉತ್ತಮ ಕೆಲಸಗಳೇ ಈ ಬಾರಿ ವಿವೇಕ್ ಸುಬ್ಬಾರೆಡ್ಡಿ ಗೆಲ್ಲಲು ಕಾರಣವಾಗಿದೆ.ವಕೀಲರ ಪ್ರೀತಿ ವಿಶ್ವಾಸದಿಂದ 2ನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ. ಅವರಿಗೆ ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಉಪಾಧ್ಯಕ್ಷರಾದ ಶಿವಶಂಕರಯ್ಯ,ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಜಂಟಿ ಕಾರ್ಯದರ್ಶಿ ಸಿ.ಪಾಲಾಕ್ಷಯ್ಯ, ಖಜಾಂಚಿ ಕೆ.ಎಲ್.ಭಾರತಿ,ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಎಂ.ಬಿ.ಗುರುಪ್ರಸಾದ್, ಟಿ.ಎಸ್.ಜನಾರ್ಧನ್,ಎಂ.ಬಿ.ನವೀನ್ ಕುಮಾರ್, ಎಸ್.ಮೋಹನ್, ಶಿವಕುಮಾರಸ್ವಾಮಿ, ಪಿ.ಎಸ್.ಸಂದೀಪ್,ಮAಜುಳ.ಹೆಚ್.ಎನ್ ರವರುಗಳು ಶುಭಾಶಯಗಳನ್ನು ಕೋರಿದ್ದಾರೆ.
- ಕೆ.ಬಿ ಚಂದ್ರಚೂಡ