ಚಿಕ್ಕಮಗಳೂರು- ವೃದ್ದ-ಕಾಫಿ-ಬೆಳೆಗಾರನ-ಮೇಲೆ-ಮಾರಣಾಂತಿಕ- ಹಲ್ಲೆ- ಸೂಕ್ತ-ಕಾನೂನು-ಕ್ರಮಕ್ಕಾಗಿ-ಏಕಾಂಗಿ-ಪ್ರತಿಭಟನೆ

ಚಿಕ್ಕಮಗಳೂರು– ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳ್ಳೂರಿನ ಭಗೀರಥ ಎಸ್ಟೇಟ್ ಕಾಫಿ ಬೆಳೆಗಾರರಾದ 76 ವರ್ಷದ ವೃದ್ಧ ಎಂ.ಎಂ.ಮಂಜುನಾಥ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕಾಗಿ ಆಗ್ರಹಿಸಿ ಅವರು ಏಕಾಂಗಿ ಪ್ರತಿಭಟನೆಯನ್ನು ನಡೆಸಿದ್ದಾರೆ.


ನಗರದ ಆಜಾದ್ ಪಾರ್ಕ್ ವೃತದಲ್ಲಿ ಏಕಾಂಗಿಯಾಗಿ ತಟ್ಟೆ ಬಡೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದ ಇವರು ಕಾಫಿ ಕಣದಲ್ಲಿ ಕಾಫಿ ಬೀಜವನ್ನು ಒಣಗಿಸುವ ಸಮಯದಲ್ಲಿ ಸುಮಾರು 15 ರಿಂದ 20 ಜನಗಳು ನನ್ನ ಮೇಲೆ ಹಲ್ಲೆಗೈದು ಮನಸ್ಸೋಇಚ್ಛೆ ತಳಿಸಿದ್ದಾರೆ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಸಹ ಸೂಕ್ತ ರೀತಿಯಲ್ಲಿ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಕಿಡಿಕಾರಿದರು.


ನಮ್ಮ ಅಕ್ಕ ಪಕ್ಕದ ಜಮೀನುಗಳ ವಿವಾದ ಸದ್ಯ ನ್ಯಾಯಾಲಯದಲ್ಲಿದ್ದು ಈ ಬಗ್ಗೆ ಗ್ರಾಮದ ಪ್ರತಿಯೊಬ್ಬರಿಗೂ ಅರಿವಿದೆ, ಆದರೆ ನ್ಯಾಯಾಲಯದ ತೀರ್ಪು ನಮ್ಮ ಪರವಾಗಿ ಆಗುತ್ತದೆ ಎಂಬ ಆಲೋಚನೆಯಿಂದ ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಹಿಂಪಡೆಯುವAತೆ ಮಾಡಲು ನಮ್ಮನ್ನು ಹೆದರಿಸಿ ಈ ರೀತಿ ಹಲ್ಲೇ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.


ಈ ಬಗ್ಗೆ ಪೊಲೀಸರಿಗೆ ದೂರ ನೀಡಿದರೂ ಸಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಮುಖ್ಯ ಆರೋಪಿಯನ್ನು ಬಿಟ್ಟು ಇತರರ ಮೇಲೆ ಕಾನೂನಿನಡಿಯಲ್ಲಿ ಇರುವಂತಹ ಸೆಕ್ಷನ್ ಗಳನ್ನು ದಾಖಲಿಸುತ್ತ ದುರ್ಬಲ ಎಫ್.ಐ.ಆರ್ ಮಾಡಿ ಪೊಲೀಸರು ಸಹ ನಮಗೆ ನ್ಯಾಯ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.


ಮುಖ್ಯ ಆರೋಪಿಯನ್ನು ಹೊರತುಪಡಿಸಿ ಇತರರ ಮೇಲೆ ಪ್ರಕರಣ ದಾಖಲಿಸಿರುವ ಇವರುಗಳ ಮೇಲೆ ನಾನು ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಪ್ರಾರಂಭಿಸುವುದಾಗಿ ತಿಳಿಸಿದ ಮಂಜುನಾಥ್ ಅವರು ಸದ್ಯ ತಮಗಾಗಿರುವ ಅನ್ಯಾಯದ ವಿರುದ್ಧ ಏಕಾಂಗಿ ಪ್ರತಿಭಟನೆಯನ್ನು ನಡೆಸಿದ್ದು ಇವರಿಗೆ ರಾಜ್ಯ ರೈತ ಸಂಘ ಸಾತ್ ನೀಡಿದೆ.


ನಂತರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಭೇಟಿ ನೀಡಿ ತಮಗಾಗಿರುವ ಅನ್ಯಾಯದ ವಿರುದ್ಧ ಮನವಿ ಸಲ್ಲಿಸಿದ್ದಾರೆ, ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಕೂಡಲೇ ಕೂಲಂಕುಶವಾಗಿ ಪರಿಶೀಲಿಸಿ ಈ ಘಟನೆ ಬಗ್ಗೆ ವರದಿ ಸಲ್ಲಿಸಿ ಈ ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಲು ಸಂಬAಧ ಪಟ್ಟ ಪೊಲೀಸ್ ಠಾಣೆಗೆ ಸೂಚಿಸಿದ್ದಾರೆ.


ಇವರ ಏಕಾಂಗಿ ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಮಹೇಶ್, ಮುಖಂಡರಾದ ಪುಟ್ಟಸ್ವಾಮಿ, ಲಕ್ಷ್ಮಣಗೌಡ, ಚಂದ್ರಶೇಖರ್, ಉದ್ದೇಗೌಡ, ಬಸವರಾಜ್, ಲೋಕೇಶ್ ಹಾಗೂ ನಾರಾಯಣ ಇದ್ದರು

Leave a Reply

Your email address will not be published. Required fields are marked *

× How can I help you?