ಕೊರಟಗೆರೆ-ಹೊಸಕೋಟೆ-ಶಾಲೆಯಲ್ಲಿ-ವಿಶೇಷವಾಗಿ-ನಡೆದ-ಶಾಲಾ- ವಾರ್ಷಿಕೋತ್ಸವ

ಕೊರಟಗೆರೆ: ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ನಮ್ಮ ಸಂಸ್ಕೃತಿ ನಮ್ಮ ವೈಭವ ಎಂಬ ಕಾರ್ಯಕ್ರಮ ಹಾಗೂ ಶಾಲಾ ವಾರ್ಷಿಕೋತ್ಸವವನ್ನು ವಿಶೇಷವಾಗಿ ವಿಜೃಂಭಣೆಯಿಂದ ನಡೆಯಿತು.

ಈ ಕಾರ್ಯಕ್ರಮಕ್ಕೆ ದಿವ್ಯಸಾಹಿತ್ಯವನ್ನು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪರಪೂಜ್ಯ ಶ್ರೀ ಹನುಮಂತನಾಥ ಸ್ವಾಮೀಜಿ ಹಾಗೂ ಶ್ರೀ ಶಿವಕುಮಾರ ಸ್ವಾಮಿ ಚಿಕ್ಕಣ್ಣ ಸ್ವಾಮಿ ಸುಕ್ಷೇತ್ರ ಹೆಬ್ಬೂರು ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗೃಹ ಸಚಿವರ ವಿಶೇಷ ಅಧಿಕಾರಿ ಡಾ: ಕೆ. ನಾಗಣ್ಣ ಮಾತನಾಡಿ, ಹೊಸಕೋಟೆ ಗ್ರಾಮವು ತಾಲೂಕಿನ ವಿಶೇಷತೆಯನ್ನು ಕೂಡ ಆಗಿದ್ದು ಇದೇ ಗ್ರಾಮದಲ್ಲಿ ಓದಿ ಜಿಲ್ಲೆ ಆದಂತ ಹೆಸರು ಮಾಡಿರುವ ಹಾಗೂ ಊರಿಗೆ ಕೀರ್ತಿ ತಂದಿರುವ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪ್ರೇಮ ಮಾಲಿಂಗಪ್ಪನವರು ಹಾಗೂ ಅನೇಕ ಮಹನೀಯರು ಇದೇ ಊರಿನಲ್ಲಿ ಇದ್ದು ಊರಿಗೆ ಕೀರ್ತಿ ತಂದಿದ್ದು. ಹೊಸಕೋಟೆಯನ್ನು ಗ್ರಾಮವನ್ನು ತಿರುಗಿ ಹಲವಾರು ಜನರು ನೋಡುವಂತೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವರು ನಹಿದ ಜಂ ಜಂ. ಮುಖಂಡರಾದ ಮಹಾಲಿಂಗಪ್ಪ. ವೆಂಕಟೇಶ್ ಮೂರ್ತಿ. ಮಲ್ಲಿಕಾರ್ಜುನ್. ಕೃಷ್ಣಪ್ಪ. ಗ್ರಾಮ ಪಂಚಾಯ್ತಿ ಸದಸ್ಯ ದೇವರಾಜ್. ಲಕ್ಷ್ಮಿದೇವಮ್ಮ. ಎಸ್ ಡಿ ಎಮ್ ಸಿ ಅಧ್ಯಕ್ಷ ಹನುಮಂತರಾಯಪ್ಪ. ಶಿಕ್ಷಣ ಸಂಯೋಜಕರು ಗಂಗಮ್ಮ. ಅನುಸೂಯಮ್ಮ. ಸಿಆರ್‌ಪಿ ಮುತ್ತುರಾಜ್. ಚಿಕ್ಕಪ್ಪಯ್ಯ. ಮುಖ್ಯ ಶಿಕ್ಷಕರಾದ ಕಾಂತಪ್ಪ. ದೇವರಾಜ್. ಹರೀಶ್. ಮಂಜುಳಾ. ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.

– ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?