ಕೆ.ಆರ್.ಪೇಟೆ-ಸಹಕಾರ ಸಂಘಗಳು-ರೈತರು-ಮತ್ತು-ಹಾಲು- ಉತ್ಪಾದಕರ-ಜೀವನಾಡಿಗಳಾಗಿವೆ-ಮನ್‌ಮುಲ್-ಹಿರಿಯ-ನಿರ್ದೇಶಕ- ಡಾಲು ರವಿ

ಕೆ.ಆರ್.ಪೇಟೆ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಡಾಲು ರವಿ ಮತ್ತು ಎಂ.ಬಿ.ಹರೀಶ್ ಹಾಗೂ 1 ಲಕ್ಷ ರೂ ವೆಚ್ಚದ ಹೈಮಾಸ್ಕ್ ದೀಪಗಳನ್ನು ಕೊಡುಗೆಯಾಗಿ ನೀಡಿರುವ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್ ಅವರನ್ನು ತಾಲ್ಲೂಕಿನ ಗಂಜಿಗೆರೆ, ಕಾಶಿಮುರುಕನಹಳ್ಳಿ, ಕಬ್ಬಲಗೆರೆಪುರ  ಗ್ರಾಮಗಳ ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ಸನ್ಮಾನಿಸಿ ಗೌರವಿಸಿದರು.

ಗ್ರಾಮಸ್ಥರುಗಳ ಸನ್ಮಾನ ಸ್ವೀಕರಿಸಿ ಮಾತನಾಡಿದ ಮನ್‌ಮುಲ್ ಹಿರಿಯ ನಿರ್ದೇಶಕ ಡಾಲು ರವಿ, ಸಹಕಾರ ಸಂಘಗಳು ರೈತರು ಮತ್ತು ಹಾಲು ಉತ್ಪಾದಕರ ಜೀವನಾಡಿಗಳಾಗಿವೆ. ಹಾಗಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ  ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕಳೆದ 10 ವರ್ಷಗಳಿಂದ ಒಕ್ಕೂಟದ ನಿರ್ದೇಶಕನಾಗಿ ತಾಲ್ಲೂಕಿನ ಎಲ್ಲಾ 253 ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈಗ ನನ್ನೊಂದಿಗೆ ಎರಡು ಭಾರಿ ನಿರ್ದೇಶಕರಾಗಿ 7 ವರ್ಷಗಳ ಕಾಲ ಅಧ್ಯಕ್ಷರಾಗಿ ಮನ್‌ಮುಲ್ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿರುವ ಎಂ.ಬಿ.ಹರೀಶ್ ಅವರನ್ನು ನನ್ ಜೊತೆಗೆ ಸುಮಾರು 127 ಮತಗಳನ್ನು ನೀಡಿ ಗೆಲ್ಲಿಸಿರುವ ತಾಲ್ಲೂಕಿನ ಎಲ್ಲಾ ಡೇರಿ ಪ್ರತಿನಿಧಿಗಳಿಗೆ ಹಾಗೂ ಎಲ್ಲಾ ನಿರ್ದೇಶಕರುಗಳಿಗೆ, ಎಲ್ಲಾ ಗ್ರಾಮಗಳ ಮುಖಂಡರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಮತ್ತು ಎಂ.ಬಿ.ಹರೀಶ್ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ಹೆಚ್.ಟಿ.ಮಂಜು ಅವರ ಗೆಲುವಿಗಾಗಿ ಮುಂಬೈ, ಊಟಿ, ಬೆಂಗಳೂರು ಕಡೆಗಳಲ್ಲಿ ನಮ್ಮ ಬೆಂಬಲಿಗರ ಸಭೆ ಮಾಡಿ ಮತದಾರರನ್ನು ಬಸ್ ಮೂಲಕ ಕರೆತಂದು ಮತ ಹಾಕಿಸಿದ್ದೇವೆ.  ಜೊತೆಗೆ ತಾಲ್ಲೂಕಿನಾಧ್ಯಂತ ಪ್ರಚಾರ ನಡೆಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡಿದ್ದೇವೆ. ಇದಕ್ಕೆ ನಮ್ಮನ್ನು ಮನ್‌ಮುಲ್ ಚುನಾವಣೆಯಲ್ಲಿ ಗೆಲ್ಲಿಸುತ್ತೇನೆ ಎಂಬ ಮಾತು ನೀಡಿ ಮಾತಿಗೆ ತಪ್ಪಿ ಶಾಸಕರು ವಚನ ಭ್ರಷ್ಠರಾಗಿದ್ದಾರೆ.  ನಮ್ಮಿಬ್ಬರನ್ನು ಮನ್‌ಮುಲ್ ಚುನಾವಣೆಯ ಜೆಡಿಎಸ್ ಅಭ್ಯರ್ಥಿಗಳೆಂದು ಸುಮಾರು 25ಸಾವಿರ ಮಂದಿ ಕಾರ್ಯಕರ್ತರ ಮುಂದೆ ಮಾಜಿ ಸಿ.ಎಂ.ಕುಮಾರಣ್ಣ ಘೋಷಣೆ ಮಾಡಿದ್ದರು.

ಆದರೆ ಶಾಸಕ ಮಂಜು  ನಮ್ಮನ್ನು ಕಡೆಗಣಿಸಿದರು. ರ‍್ಯಾಯ ಅಭ್ಯರ್ಥಿಗಳನ್ನು ಘೋಷಣೆ ಮಾಡಿಕೊಂಡು ಚುನಾವಣೆ ನಡೆಸಿದರು. ನಮ್ಮನ್ನು ಜೆಡಿಎಸ್ ಪಕ್ಷದವರೇ ಅಲ್ಲ, ಪ್ರಾಥಮಿಕ ಸದಸ್ಯತ್ವವನ್ನೇ ಪಡೆದಿಲ್ಲ ಎಂದು ಘೋಷಣೆ ಮಾಡಿದರು.  ಇದರಿಂದಾಗಿ ನಾವು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರ ಸಹಕಾರ ಪಡೆದುಕೊಳ್ಳಬೇಕಾಯಿತು.

ಸುಮಾರು ೪ತಿಂಗಳ ಕಾಲ ತಾಲ್ಲೂಕಿನಾದ್ಯಂತ ಪ್ರಚಾರ ನಡೆಸಿ, ಎಲ್ಲರ ಸಹಕಾರ ಪಡೆದು ಗೆಲುವು ಸಾಧಿಸಿದ್ದೇವೆ. ಗೆದ್ದ ನಂತರ ವಿಜಯೋತ್ಸವ ಆಚರಣೆ ವೇಳೆ ಚುನಾವಣೆ ಸಂದರ್ಭದಲ್ಲಿ ನಮಗಾದ ನೋವನ್ನು ಕಾರ್ಯಕರ್ತರ ಮುಂದೆ ತೋಡಿಕೊಳ್ಳುತ್ತಿದ್ದೇವೆ ಆದರೆ ಇದನ್ನೇ ಟೀಕೆ ಮಾಡುತ್ತಿದ್ದಾರೆ ಎಂದು ಶಾಸಕರು ತಮ್ಮ ಬೆಂಬಲಿಗರ ಮೂಲಕ ಪ್ರತಿ ಟೀಕೆ ಮಾಡಿಸುತ್ತಿದ್ದಾರೆ.

ಬಹಿರಂಗ ಚರ್ಚೆಗೆ ಬರಲಿ ನಮಗೆ ಅವರು ಮೋಸ ಮಾಡಿದ್ದಾರೋ ಅಥವಾ ನಾವು ಅವರಿಗೆ ಮೋಸ ಮಾಡಿದೇವೋ ಎಂಬುದನ್ನು ಮಾಧ್ಯಮಗಳ ಸಮ್ಮುಖದಲ್ಲಿ ಚರ್ಚಿಸೋಣ ಎಂದು ಡಾಲು ರವಿ ಸವಾಲು ಹಾಕಿದರು.

ಮನ್‌ಮುಲ್ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕ ಎಂ.ಬಿ.ಹರೀಶ್ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಹರಳಹಳ್ಳಿ ತಿಮ್ಮೇಗೌಡರ ಸಾಮಾನ್ಯ ರೈತನ ಮಗ ಮಂಜು ಅವರನ್ನು ಶಾಸಕನ್ನಾಗಿ ಮಾಡಿ ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಪಂಚರತ್ನ ರಥ ಯಾತ್ರೆಯಲ್ಲಿ ಭಾಷಣ ಮಾಡಿ ಗೆಲ್ಲಿಸಿದ್ದೆವು. ಆಗ ನನ್ನ ಮಾತು ಚನ್ನಾಗಿದ್ದವು ಈಗ ಅದೇ ತಿಮ್ಮೇಗೌಡರ ಮಗ ಶಾಸಕ ಮಂಜು ನಮ್ಮನ್ನು ಕಡೆಗಣಿಸಿದರು. ನಮಗೆ ಮನ್‌ಮುಲ್ ಚುನಾವಣೆಯಲ್ಲಿ ಗೆಲ್ಲಿಸುತ್ತೇನೆ ಎಂದು ಭರವಸೆ ನೀಡಿ ಮಾತುಗೆ ತಪ್ಪಿದ್ದಾರೆ ಎಂದು ಭಾಷಣದಲ್ಲಿ ಹೇಳಿದರೆ  ಅದನ್ನು ತಪ್ಪು ಎನ್ನುತ್ತಾರೆ ಎಂದು ಎಂ.ಬಿಹರೀಶ್ ಹೇಳಿದರು.

ಇದೇ ಸಂದರ್ಭದಲ್ಲಿ ಎಲ್ಲಾ ಗ್ರಾಮಗಳಿಗೂ ಹೈಮಾಸ್ಕ್ ವಿದ್ಯುತ್ ದೀಪಗಳನ್ನು ಕೊಡುಗೆಯಾಗಿ ನೀಡಿ ಉದ್ಘಾಟಿಸಿದರು  ಕೆ.ಬಿ.ಮಹೇಶ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.   

ಅಭಿನಂದನಾ ಸಮಾರಂಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಕೆ.ಬಿ.ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಟಿ.ವೆಂಕಟೇಶ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಬಿ.ಈಶ್ವರ ಪ್ರಸಾದ್, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಪಿ.ಲೋಕೇಶ್,   ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಲ್ಲೇನಹಳ್ಳಿ ರಮೇಶ್, ಮುಖಂಡರಾದ ಬೂಕನಕೆರೆ ಮಹೇಶ್ ಅಡಿಕೆಸ್ವಾಮೀಗೌಡ, ಬಸ್ತಿ ಕೆ.ಇ.ಬಿ.ಕೃಷ್ಣೇಗೌಡ, ಎಂ.ಜೆ.ಶಶಿಧರ್, ಭತ್ತದ ವ್ಯಾಪಾರಿ ವೆಂಕಟರಾಮೇಗೌಡ, ಕುಮಾರ್,   ಪ್ರಸಾದ್, ಬಿ.ಕೆ.ಸುರೇಶ್ ಸೇರಿದಂತೆ ಹಲವು ಮುಖಂಡರು     ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರು,  ಕಾರ್ಯದರ್ಶಿಗಳು ಹಾಗೂ ಹಾಲು ಉತ್ಪಾದಕರು ಭಾಗವಹಿಸಿದ್ದರು.

  • ಶ್ರೀನಿವಾಸ

Leave a Reply

Your email address will not be published. Required fields are marked *

× How can I help you?