ಕೆ.ಆರ್.ಪೇಟೆ : ಅಕ್ರಮವಾಗಿ ನಿರ್ಮಾಣ ಮಾಡಿರುವ ರಸ್ತೆ ಉಬ್ಬಿನಿಂದ ಸಾವು ನೋವುಗಳ ಸಂಭವಿಸುತ್ತಿರುವ ಬಗ್ಗೆ ದೂರು ನೀಡಿದ್ದರೂ ಕ್ರಮವಹಿಸದ ಜಿಲ್ಲಾಧಿಕಾರಿ ಕುಮಾರ್, ಎಂಜಿನಿಯರ್ ಹರ್ಷ ಮತ್ತು ಉಬ್ಬು ನಿರ್ಮಾಣಮಾಡಿಕೊಂಡಿರುವ ನಾಯರ್ ಬಂಕ್ ಮಾಲೀಕನ ವಿರುದ್ಧ ಕಾನೂನು ಕ್ರಮ ವಹಿಸಲು ಎಂದು ಸಮಾಜ ಸೇವಕ ಹೆಚ್.ಬಿ.ಮಂಜುನಾಥ್ ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ನೀಡಿದ ನಂತರ ಎಚ್.ಬಿ.ಮಂಜುನಾಥ್ ಮಾತನಾಡಿ ಪಾಂಡಪುರ ರೈಲ್ವೆ ನಿಲ್ದಾಣದಿಂದ ಮತ್ತು ಕೆ.ಆರ್.ಪೇಟೆ ನಡುವೆ ಈಗಾಗಲೆ ಸುಮಾರು20 ರಸ್ತೆ ಉಬ್ಬುಗಳಿದ್ದು ವಾಹನ ಸವಾರರು ವಾಡಿಗಳನ್ನು ಓಡಿಸವುದಕ್ಕೆ ತೊಂದರೆ ಅನುಭವಿಸುತ್ತಿದ್ದಾರೆ, ಇದರ ನಡುವೆ ಆಶೊಕ ನಗರದ ಸಮೀಪದಲ್ಲಿ ಹೊಸದಾಗಿ ನಾಯರ್ ಕಂಪನಿಯವರು ಪೆಟ್ರೋಲ್ ಬಂಕ್ ಆರಂಭಮಾಡಿದ್ದು ಅವರು ತಮ್ಮ ಲಾಭಕ್ಕಾಗಿ ರಸ್ತೆಗೆ ಅಡ್ಡಲಾಗಿ ಎರಡು ದೊಡ್ಡ ಗ್ರಾತ್ರದ ರಸ್ತೆ ಉಬ್ಬುಗಳನ್ನು ನಿರ್ಮಾಣ ಮಾಡಿದ್ದು ಇದರಿಂದ ಪ್ರತಿದಿನ ಓದಾಡುವ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ.
ಕೆಲವೆ ತಿಂಗಳುಗಳ ಹಿಂದೆ ಇದೇ ಮಂಡ್ಯದಲ್ಲಿ ಅಕ್ರಮ ರಸ್ತೆ ಉಬ್ಬಿನಿಂದಾಗಿ ಒಬ್ಬ ಯುವಕ ಸಾವನ್ನಪ್ಪಿದ್ದಾರೆ. ಮೊನ್ನೆ ಕೆ.ಆರ್.ಎಸ್ ಸಂಈಪ ಇರುವ ಬಂಕ್ ಮುಂಭಾಗ ಕೂಡಾ ಅಪಘಾತವಾಗಿರುವ ಬಗ್ಗೆ ಮಾಹಿತಿ ಇದೆ. ಆದರೂ ಕೂಡಾ ಕ್ರಮ ವಹಿಸಬೇಕಾದ ಅಧಿಕಾರಿಗಳು ಕಣ್ಣು ಮುಚ್ಚಿಕುಳಿತು ಜನರ ಜೀವದ ಜೊತೆಗೆ ಚೆಲ್ಲಾಟಾಡುತ್ತಿದ್ದಾರೆ ಎಂದು ಬೆಸರ ವ್ಯಕ್ತಪಡಿಸಿದರು.
ಅಕ್ರಮವಾಗಿ ರಸ್ತೆಯಲ್ಲಿ ಉಬ್ಬುಗಳನ್ನು ನಿರ್ಮಾಣ ಮಾಡಬಾರದು ಎಂಬ ನಿಯಮವಿದೆ ಏಕೆಂದರೆ ರಸ್ತೆಗೆ ಉಬ್ಬು ನಿರ್ಮಾಣ ಮಾಡಿರುವುದು ಸರ್ಕಾರಿ ಆಸ್ತಿ ದುರ್ಬಳಕೆ ಮಾಡಿಕೊಂಡಂತಾಗಿದೆ, ಸುಗಮ ಸಂಚಾರಕ್ಕೆ ಅಕ್ಕಿಯಾಗಿದೆ. ಅಪಘಾತಕ್ಕೆ ಕಾರಣವಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಜೀವ ಹಾನಿಯಾಗುವ ಸಂಭವವಿದೆ.

ಈಗಾಗಲೆ ದೇಶದಲ್ಲಿ ಅಕ್ರಮ ಉಬ್ಬುಗಳಿಂದಲೆ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಇದನ್ನು ಕಂಡರೂ ಮತ್ತು ಪ್ರತಿದಿನ ಅದೇ ರಸ್ತೆಯಲ್ಲಿ ಓಡಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸುತ್ತಿರಲಿಲ್ಲಾ. ಆದರೆ ಅಕ್ರಮ ಉಬ್ಬುಗಳಿಂತ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಈ ಬಗ್ಗೆ ನಾನು ಈ ಬಗ್ಗೆ ದಿನಾಂಕ 02.02.2024 ರಂದು ಮಂಡ್ಯ ಡಿಸಿ ಮತ್ತು ಲೋಕೋಪಯೋಗಿ ಇಲಾಖೆ ಇಇ ಅವರಿಗೆ ಖುದ್ದು ದೂರು ನೀಡಿದ್ದು ನನ್ನ ದೂರಿಗೆ ಯಾವುದೇ ಕ್ರಮ ವಹಿಸಿಲ್ಲಾ.
ಜೊತೆಗೆ ನಾನು ದೂರು ನೀಡಿದ ನಂತರವೂ ಉದ್ದೇಶ ಪೂರಕವಾಗಿ ಬಂಕ್ ಮಾಲೀಕನ ವಿರುದ್ಧ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿರುವುದು ದೇಶದಲ್ಲಿ ನೂತನವಾಗಿ ಜಾರಿಗೆ ಬಂದಿರುವ ಬಿ ಎನ್ ಎಸ್ ನಿಯಮಕ್ಕೂ ವಿರುದ್ದವಾಗಿದ್ದು ಅದೆ ಕಾನೂನಿನ ಅಡಿಯಲ್ಲಿ ನಾನು ಇಂದು ಮಾನ್ಯ ಜಿಲ್ಲಾಧಿಕಾರಿಗಳಾದ ಕುಮಾರ್, ಲೋಕೋಪಯೋಗಿ ಇಲಾಖೆಯ ಇಇ ಹರ್ಷ ನಿರ್ಲಕ್ಷ್ಯ ವಹಿಸಿರುವುದು ಮತ್ತು ಬಂಕ್ ಮಾಲೀಕರು ರಸ್ತೆಯಲ್ಲಿ ಉಬ್ಬು ನಿರ್ಮಾಣ ಮಾಡಿರುವುದು ಅಪರಾಧವೇ ಆಗಿರುವುದರಿಂದ ಮೂವರ ವಿರುದ್ಧ ದೂರು ನೀಡಿದ್ದೇನೆ. ಇದರಿಂದಾದರೂ ಮುಂದಿನ ದಿನಗಳಲ್ಲಿ ಅಕ್ರಮವಾಗಿ ಉನ್ನು ನಿರ್ಮಣಮಾಡುವುದು ತಪ್ಪಿದರೆ ಸಾಕು.
- ಶ್ರೀನಿವಾಸ