ಬೆಂಗಳೂರು– ಶ್ರೀಕ್ಷೇತ್ರ ಮಂಜುನಾಥನ ಪಾವನ ಕ್ಷೇತ್ರವನ್ನು ನಾಡಿನ ಉದ್ದಗಲಕ್ಕೂ ಪರಿಚಯಿಸಿ ಚತುರ್ದಾನಗಳಾದ ಅನ್ನ,ಅಭಯ,ಔಷಧ,ಶಿಕ್ಷಣದ ಮೂಲಕ, ಭಕ್ತರಿಗೆ ಸಾತ್ವಿಕತೆ,ಪರಂಪರೆ,ಭಕ್ತಿಯನ್ನು ನೀಡಿ ಧಾರ್ಮಿಕ ಪರಂಪರೆಯ ಜೊತೆ ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಮೂಲಕ ಶಿಕ್ಷಣ,ಸಾಮಾಜಿಕ ಸೇವೆ,ಆರೋಗ್ಯ ಸೇವೆ,ಧಾರ್ಮಿಕ ಸೇವೆ,ಧಾರ್ಮಿಕ ಸೇವೆಯ ಜೊತೆಗೆ ಗ್ರಾಮಾಭಿವೃದ್ಧಿ, ವೈದ್ಯಕೀಯ ಸೇವೆ, ಅಕ್ಷರದಾಸೋಹ, ವಿಜ್ಞಾನ, ತಂತ್ರಜ್ಞಾನ, ತಾಂತ್ರಿಕ ಶಿಕ್ಷಣದ ಜೊತೆಗೆ ಸ್ತ್ರೀ ಶಕ್ತಿ ಸಂಘಗಳ ಜೊತೆಗೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ ಸೇವೆಯನ್ನು ಗುರುತಿಸಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಮತ್ತು ಲೋಕ ಶಿಕ್ಷಣ ಟ್ರಸ್ಟ್ ವತಿಯಿಂದ ರಾಜ್ಯಸಭಾ ಸದಸ್ಯರು,ಖಾವಂದರೂ,ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ||ಡಿ.ವೀರೇಂದ್ರಹೆಗ್ಗಡೆರವರಿಗೆ ಆರೋಗ್ಯಬಂಧು ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಪ್ರಶಸ್ತಿ ನೀಡಿರುವುದು ಪ್ರಶಸ್ತಿಗೆ ಒಂದು ತೂಕ ಬಂದಿದೆ.ಪೂಜ್ಯ ಹೆಗ್ಗಡೆರವರಿಗೆ ಹೆಗ್ಗಡೆರವರೇ ಸಾಟಿ,ಅವರು ಮಾಡುತ್ತಿರುವ ಸಮಾಜಸೇವೆ,ಗ್ರಾಮಾಭಿವೃದ್ಧಿ ಒಂದು ಸರ್ಕಾರ ಮಾಡಬೇಕಾದ ಎಲ್ಲಾ ಕೆಲಸಗಳನ್ನು ಪೂಜ್ಯ ವೀರೇಂದ್ರಹೆಗ್ಗಡೆರವರು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಕೆ.ಬಿ.ಚಂದ್ರಚೂಡ