ಮೂಡಿಗೆರೆ-ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಿಶ್ವ ವಿದ್ಯಾಲಯದ ಪ್ರೋಫೇಸರ್‌ಗಳಿಗಿಂತ ಅಧಿಕ ವೇತನ ನೀಡುವ ಬಗ್ಗೆ ಶಿಕ್ಷಣ ತಜ್ಞರು ಗಂಭೀರ ಚಿಂತನೆ ನಡೆಸಬೇಕಾಗಿದೆ-ರಾಜಶೇಖರ್ ಮೂರ್ತಿ

ಮೂಡಿಗೆರೆ:ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಪುಣ್ಯದ ಕಾರ್ಯಕ್ಕೆ ಅವಕಾಶ ಸಿಕ್ಕಿರುವುದು ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಮಾತ್ರ.ಹಾಗಾಗಿ ಪಿಯುಸಿ ಬೋಧಕರು,ವಿಶ್ವ ವಿದ್ಯಾಲಯದ ಪ್ರೋಫೇಸರ್‌ಗಳಿಗಿಂತ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ಅಧಿಕ ವೇತನ ನೀಡುವ ಬಗ್ಗೆ ಶಿಕ್ಷಣ ತಜ್ಞರು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ತಹಸೀಲ್ದಾರ್ ರಾಜಶೇಖರ್ ಮೂರ್ತಿ ಅಭಿಪ್ರಾಯ ಮಂಡಿಸಿದರು.

ಅವರು ಗುರುವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನೋತ್ಸವದ ಪ್ರಯುಕ್ತ ಪಟ್ಟಣದ ಅಡ್ಯಂತಾಯ ರಂಗಮoದಿರದಲ್ಲಿ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ೬೩ನೇ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನಡೆಸಿ ಮಾತನಾಡಿದರು.

oplus_0

ಶಿಕ್ಷಣ ಕೇವಲ ಅಂಕ ಮತ್ತು ಜ್ಞಾಪಕ ಶಕ್ತಿಗೆ ಮಾತ್ರ ಪ್ರಮುಖ ಪಾತ್ರ ವಹಿಸಿದೆ.ಆತನೇ ಬುದ್ಧಿವಂತನೆoದು ಬಿಂಬಿಸುವುದರ ಬಗ್ಗೆ ಚರ್ಚೆ ಆಗಬೇಕಿದೆ.ಮಾನವನಲ್ಲಿ ಮಾತು,ಚಿಂತನೆ, ನಡವಳಿಕೆ,ತಿಳುವಳಿಕೆ ಉತ್ತಮವಾದರೆ ನಮ್ಮ ಭಾರತ ದೇಶ ಜಗತ್ತಿನಲ್ಲಿಯೇ ಸರ್ವ ಶ್ರೇಷ್ಟ ರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಕರ ಪಾತ್ರ ಅತಿ ಪ್ರಮುಖವಾಗಿದೆ ಎಂದು ಪ.ಪಂ. ಅಧ್ಯಕ್ಷೆ ಗೀತಾ ರಂಜನ್ ಅಜಿತ್,ಕುಮಾರ್ ಹೇಳಿದರು.ಅವರು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಪಾಲಿಗೆ ಶಿಕ್ಷಕರು ದೈವ ಸ್ವರೂಪವಾಗಿದ್ದಾರೆ.ಉತ್ತಮ ಸಮಾಜ ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರನ್ನು ಗೌರವದಿಂದ ಕಾಣಬೇಕು.ಶಿಕ್ಷಕರ ಕುಂದು ಕೊರತೆ ಹಾಗೂ ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಕರ ಸಂಘಗಳು ಆಲಿಸಿ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಹಾಸನ ಕಸಾಪ ಜಿಲ್ಲಾಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶ್‌ಗೌಡ ಅವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಎಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಶೇ.೧೦೦ ಫಲಿತಾಂಶ ಪಡೆದ ಶಾಲೆಯ ಪ್ರಾಂಶುಪಾಲರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ.ಪಂ. ಸದಸ್ಯರಾದ ಆಶಾ ಮೋಹನ್, ಹಂಝಾ, ಖುರ್ಷಿದ್‌ಬಾನು, ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ , ಬಿಇಒ ಹೇಮಂತಚoದ್ರ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎ.ಆರ್.ವಿಜಯ್‌ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಿಕರ ಸಂಘದ ಅಧ್ಯಕ್ಷ ಪಿ.ಎಚ್.ಪುಟ್ಟರಾಜು, ಕೆ.ಜಿ.ಶ್ರೀನಿವಾಸ್, ಜಿ.ರವಿನಾಯ್ಕ,ಶಮಿಯುನ್ನಿಸ, ಫೈರೋಜ್ ಅಹಮ್ಮದ್, ಬಿ.ಆರ್.ನವೀನ್, ಹೆಚ್.ಮಂಜಪ್ಪ, ಯಾಸ್ಮೀನ್,ಸುಲ್ತಾನ, ಜಗದೀಶ್ ನಾಯಕ್ ಮತ್ತಿತರರಿದ್ದರು.

————-ವಿಜಯ್ ಕುಮಾರ್ ಮೂಡಿಗೆರೆ

Leave a Reply

Your email address will not be published. Required fields are marked *

× How can I help you?