ಅರಕಲಗೂಡು-ವಸತಿ-ರಹಿತರ-ವಿವಿಧ-ಬೇಡಿಕೆ- ಈಡೇರಿಕೆಗಾಗಿ-ಸುವರ್ಣ-ಕರ್ನಾಟಕ-ರಕ್ಷಣಾ-ಸೇನೆಯಿಂದ-ಜಿಲ್ಲಾಧಿಕಾರಿಗೆ-ಮನವಿ

ಅರಕಲಗೂಡು– ತಾಲೂಕು ರಾಮನಾಥಪುರದ ವಸತಿ ರಹಿತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಹಾಸನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಹಾಗೂ ಹಾಸನ ಜಿಲ್ಲಾಧಿಕಾರಿ ರವರಿಗೆ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಮನವಿ ಸಲ್ಲಿಸಿದರು.


ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ಡಾಕ್ಟರ್ ಸರೋಜಿನಿ ಮಹಿಷಿ ಚಳುವಳಿ ಹೋರಾಟಗಾರರಾದ ಡಾ.ಎಸ್ ರಾಘವೇಂದ್ರ ಗೌಡ ಮಾತನಾಡಿ, ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿ ರಾಮನಾಥಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೋಟವಾಳು ಗ್ರಾಮದ ಸರ್ವೆ ನಂಬರ್ 12ರಲ್ಲಿ 6 ಎಕರೆ ಜಮೀನನ್ನು ವಸತಿ ರಹಿತ ಬಡವರಿಗೆ ಮನೆ ಕಟ್ಟಿಕೊಳ್ಳಲು, ರಾಮನಾಥಪುರ ಗ್ರಾಮ ಪಂಚಾಯತಿ ವತಿಯಿಂದ, ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಲ್ಲಿ, ರಾಮನಾಥಪುರ ಗ್ರಾಮದ ಬಡ ಜನರಿಗೆ ಸುಮಾರು 59 ಜನರಿಗೆ ದಿನಾಂಕ 10/10/2022 ರಂದು ಖಾಲಿ ನಿವೇಶನ ಗುರುತಿಸಿಕೊಟ್ಟು, ಹಕ್ಕು ಪತ್ರಗಳನ್ನ ಅಂದಿನ ಶಾಸಕರು ಮತ್ತು ಸಚಿವರು ಹಾಗೂ ತಾಲೂಕಿನ ತಹಶೀಲ್ದಾರರು ತಾಲೂಕು ಪಂಚಾಯತಿ ಕಾರ್ಯನಿರ್ವಣಾಧಿಕಾರಿ, ರಾಮನಾಥಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಂದಿನ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರುಗಳ ಸಮ್ಮುಖದಲ್ಲಿ ವಿತರಣೆ ಮಾಡಿದ್ದರು.


ಆದರೆ ಖಾಲಿ ನಿವೇಶನ ಕೊಟ್ಟು ಮೂರು ವರ್ಷಗಳಾದರೂ ಹಕ್ಕು ಪತ್ರ ಪಡೆದಂತ ಜನರಿಗೆ ಖಾತೆ ಮಾಡಿಕೊಡದೆ. ಖಾಲಿ ನಿವೇಶನ ಪಡೆದಂತ ಬಡ ಜನರು ಮನೆ ಕಟ್ಟಿಕೊಳ್ಳಲು ಯಾವುದೇ ಸಂಘ ಸಂಸ್ಥೆಗಳಲ್ಲಿ ಸಾಲ ಪಡೆಯಲು ಆಗದೆ, ನೊಂದ ಬಡ ಜನರ ಪರವಾಗಿ ನ್ಯಾಯ ಕೊಡಿಸಲು ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಈ ದಿನ ಹಾಸನ್ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಪೂರ್ಣಿಮಾ ಹಾಗೂ ಹಾಸನ ಜಿಲ್ಲಾಧಿಕಾರಿ ರವರಿಗೆ ಇಂದು ಮನವಿ ಸಲ್ಲಿಸಿದ್ದು, ಈ ವಿಚಾರವಾಗಿ ಇನ್ನ ಒಂದು ವಾರದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕು ಇಲ್ಲದಿದ್ದಲ್ಲಿ. ನೊಂದ ಬಡ ಜನರ ಪರವಾಗಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ತಾಲೂಕ್ ಪಂಚಾಯತಿ ಕಚೇರಿ ಮುಂಭಾಗ ಧರಣಿ ಮಾಡಲಾಗುತ್ತದೆ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ಎಸ್ ರಾಘವೇಂದ್ರ ಗೌಡ್ರು, ರಾಜ್ಯ ಮಹಿಳಾ ಅಧ್ಯಕ್ಷ ಮಧುಶ್ರೀ .ಮೆಕಾನಿಕ್ ರಮೇಶ್ ಗಿರೀಶ್, ಆನಂದ ಆಚಾರ್ ಬೇಕರಿ ರಮೇಶ್ , ಮಂಜು ಶೆಟ್ಟಿ, ಮಂಜೇಗೌಡ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಳೇ ಗೌಡ್ರು, ಮಾಜಿ ಗ್ರಾಮ ಪಂಚಾಯತಿ ಸದಸ್ಯರು ಎಸ್ .ದಿವಾಕರ್, ರಾಮನಾಥಪುರ ವಿಜಯ್ ರಾಜು, ಯಾಸಿನ್ ಅಬ್ಬು, ಮಂಜುನಾಥ್ ಶಿವಕುಮಾರ್, ವೇದಾವತಿ, ಲತಾ ಶೈಲಾ, ಸುಜಾತ, ಪಾರ್ವತಿ, ಮಂಜುಳಾ, ಲಕ್ಷ್ಮಿ,ವಸಂತ್ ಕುಮಾರಿ, ಅಂಬಿಕಾ, ವೀಣಾ, ದೀಪು, ಕಲಾವತಿ, ಶೀಲಾ ಇನ್ನೂ ಮುಂತಾದವರು ಭಾಗವಹಿಸಿದ್ದರು .

Leave a Reply

Your email address will not be published. Required fields are marked *

× How can I help you?