ಕೆ.ಆರ್.ಪೇಟೆ-ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು-ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ,ಜ್ಞಾನ ಸಂಪತ್ತನ್ನು ಪಡೆದು ಉತ್ತಮ ನಾಗರೀಕರಾಗಬೇಕು-ಶಾಸಕ ಹೆಚ್.ಟಿ ಮಂಜು

ಕೆ.ಆರ್.ಪೇಟೆ:ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ,ಜ್ಞಾನ ಸಂಪತ್ತನ್ನು ಪಡೆದು ಉತ್ತಮ ನಾಗರೀಕರಾಗಬೇಕು ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.

ಪಟ್ಟಣದಲ್ಲಿರುವ ಶತಮಾನದ ಶಾಲೆಯ (ಕೆ.ಪಿ.ಎಸ್) ಆವರಣದಲ್ಲಿ ತಾಲೂಕು ಆಡಳಿತ,ಶಿಕ್ಷಕರ ದಿನಾಚರಣೆ ಆಚರಣಾ ಸಮಿತಿ,ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದರು.

ಅನುಭವಕ್ಕೆ ಸಿಕ್ಕುವ ವೃತ್ತಿ ಶಿಕ್ಷಕ ವೃತ್ತಿ.ಶಿಕ್ಷಕ ವೃತ್ತಿಗೆ ಸಮಾಜದಲ್ಲಿ ತನ್ನದೇ ಸ್ಥಾನವಿದೆ. ಸಮಾಜದ ನಿರ್ಮಾಣ ಹಾಗೂ ವಿನಾಶ ಎರಡೂ ಶಿಕ್ಷಕನ ಮೇಲಿದೆ.ಶಿಕ್ಷಣ ಎಂಬುದು ಬದುಕು. ಅಕ್ಷರ ಹಾಗೂ ಒಗ್ಗಟ್ಟು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.ಶಿಕ್ಷಣ ತಜ್ಞ ಡಾ: ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಆದರ್ಶಗಳು ಇಂದಿನ ಶಿಕ್ಷಕರಿಗೆ ಸ್ಫೂರ್ತಿ.ಹಾಗೂ ಹಿರಿಯರ ಅನುಭವ,ಸೃಜನಶೀಲ ಗುಣಗಳು ನಮಗೆ ಮಾರ್ಗದರ್ಶಿ. ಸಮಾಜದಲ್ಲಿ ಪೋಷಕರಿಗಿಂತಲೂ ಮೇಲು ಶಿಕ್ಷಕ ಎಂದು ರಾಜಕೀಯ ತಜ್ಞ ಹಾಗೂ ದಾರ್ಶನಿಕ ಅರಿಸ್ಟಾಟಲ್ ಹಿಂದೆಯೇ ಹೇಳಿದ್ದಾರೆ.ಶಿಕ್ಷಣ ನಿರಂತರ ಕಲಿಕೆ.ನಾನು ಎಂಬ ಅಹಂ ಶಿಕ್ಷಕರಲ್ಲಿ ಬೇರೂರಬಾರದು.ಸಮಾಜದಲ್ಲಿ ನಾನು ಒಂದು ಕಣ ಎಂಬ ಭಾವನೆ ಬೆಳೆಸಿ ಕೊಳ್ಳಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಪ್ರಧಾನ ಭಾಷಣ ಮಾಡಿದ ಬೇಬಿಬೆಟ್ಟದ ಶ್ರೀ ರಾಮ ಯೋಗಿಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ,ಹಿಂದಿನ ಕಾಲದಲ್ಲಿದ್ದ ಗುರು ಶಿಷ್ಯರ ಪರಂಪರೆ ಇನ್ನೂ ಜೀವಂತ ಇರುವುದಕ್ಕೆ ಸಂತಸ ವ್ಯಕ್ತಪಡಿಸಿ,ಯಾವುದೇ ಒಬ್ಬ ವ್ಯಕ್ತಿ ಉನ್ನತ ಸ್ಥಾನಕ್ಕೆ ಏರಲು ಗುರುಗಳ ಮಾರ್ಗದರ್ಶನ ಖಂಡಿತವಾಗಿ ಅಗತ್ಯವಾಗಿದೆ.ಒಳ್ಳೆಯ ಸಮಾಜ ಕಟ್ಟುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದರು.

ಶಿಕ್ಷಕರನ್ನು ಮಕ್ಕಳ ಕಲಿಕೆಗೆ ಸೀಮಿತವಾಗಿರಿಸದೇ ಸಾಕಷ್ಟು ಹೊರೆ ಹಾಕ ಲಾಗುತ್ತಿದೆ.ಇದರಿಂದಾಗಿ ಕಲಿಕಾ ಮಟ್ಟ ಕುಂಠಿತಗೊಳ್ಳುತ್ತಿರುವುದು ವಿಷಾದನೀಯ.ಕನಸುಗಳು ಬಾಳಿನ ಭರವಸೆಗಳನ್ನು ಈಡೇರಿಸುತ್ತವೆ.ಮಕ್ಕಳು ನಾನು ಮುಂದೆ ಏನಾಗಬೇಕು ಎಂದು ಕನಸುಗಳನ್ನು ಕಾಣಬೇಕು.ಪೋಷಕರು ತಮ್ಮ ಮಕ್ಕಳಲ್ಲಿ ಒಂದೆರಡು ಕನಸು ಗಳನ್ನು ಕಾಣುತ್ತಾರೆ.ಆದರೆ,ಶಿಕ್ಷಕರು ನೂರಾರು ಮಕ್ಕಳಲ್ಲಿ ನೂರಾರು ಕನಸುಗಳನ್ನು ಕಾಣುತ್ತಾರೆ.ಶಾಲೆಗಳಲ್ಲಿ ಶಿಕ್ಷಕರು ಕೇವಲ ಪಠ್ಯ,ಪಠ್ಯೇತರ ಚಟುವಟಿಕೆ ಗಳಲ್ಲಿ ಮುಂದಿರುವ ಮಕ್ಕಳನ್ನು ಗುರುತಿಸದೆ,ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಶಿಕ್ಷಕರು ವಿದ್ಯಾರ್ಥಿ ಗಳಿಗೆ ಆದರ್ಶ ಗುರುಗಳಾಗಬೇಕು ಎಂದರು.

ಬಳಿಕ ಶಾಸಕ ಮಂಜು ಅವರ ಪುತ್ರಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ವರ್ಷ ಎಂ.ಗೌಡ ಕಾರ್ಯಕ್ರಮದಲ್ಲಿ ಮಾತನಾಡಿ ಗುರುವಿನ ಸ್ಮರಣೆ ಮಾಡಿ ಭಕ್ತಿ ನುಡಿಗಳ ಆಡಿದರು.

ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಿಂದ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಭಾವಚಿತ್ರವನ್ನು ಭವ್ಯ ಮಂಗಳವಾದ್ಯೊಂದಿಗೆ ತೆರೆದ ವಾಹನದಲ್ಲಿ ಅರ್ಥಪೂರ್ಣವಾಗಿ ವೇದಿಕೆ ಕರೆತರಲಾಯಿತು. ಸತತ 25 ರಿಂದ 30 ವರ್ಷಗಳ ಕಾಲ ಸುದೀರ್ಘ ಪ್ರಾಮಾಣಿಕ ಸೇವೆ ಸಲ್ಲಿಸಿ ವಯೋ ನಿವೃತ್ತಿಗೊಂಡ 50 ಹೆಚ್ಚು ಶಿಕ್ಷಕರನ್ನು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಜಿ. ಆದರ್ಶ,ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸುಷ್ಮಾ,ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಶಿವರಾಮೇಗೌಡ, ಕಾರ್ಯಾಧ್ಯಕ್ಷ ಆನಂದ,ಪ್ರಧಾನ ಕಾರ್ಯದರ್ಶಿ ಪಿ.ಜೆ ಕುಮಾರ್,ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ, ನಿಕಟಪೂರ್ವ ಅಧ್ಯಕ್ಷ ಪದ್ಮೇಶ್, ಧರ್ಮಪ್ಪ,ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ವೆಂಕಟೇಶ್,ಎಸ್, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶಿಕ್ಷಕರು ಇದ್ದರು.

—————— ಮನು ಮಾಕವಳ್ಳಿ ಕೆ ಆರ್ ಪೇಟೆ

Leave a Reply

Your email address will not be published. Required fields are marked *

× How can I help you?