ನಂಜನಗೂಡು– ಕ್ಷೇತ್ರದ ಜನಪ್ರಿಯ ಯುವ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ನಂಜನಗೂಡು ತಾಲ್ಲೂಕಿನ ಯಾಲಹಳ್ಳಿ ಗ್ರಾಮದಲ್ಲಿ ಇಂದು ಸಾಮಾನ್ಯ ವರ್ಗದ ಬೀದಿಯಲ್ಲಿ ಸಿ. ಸಿ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಗೆ 20 ಲಕ್ಷ ರೂ ವೆಚ್ಚದಲ್ಲಿ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್ ರವರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ, ಗ್ರಾ. ಪಂ ಅಧ್ಯಕ್ಷ ಶಿವನಾಗಪ್ಪ , ಬಸವರಾಜ್ , ಹುಲ್ಲಹಳ್ಳಿ ಮಾದಪ್ಪ, ಅಭಿನಂದನ್ ಪಟೇಲ್ , ಹಲ್ಲರೆ ಮಹದೇವು , ಕಗ್ಗಲಿಹುಂಡಿ ಮಹದೇವು ಮಹೇಶ್ ,ಆದರ್ಶ್ , ದೇಬೂರು ಅಶೋಕ್ , ಕುರಿಹುಂಡಿ ರಾಜು , ಸೋಮೇಶ್ , ಹಗಿನವಾಳು ಬಸವಣ್ಣ , ಪ್ರಭು ಯಾಲಹಳ್ಳಿ ನಾಗೇಂದ್ರ ಸೇರಿದಂತೆ ಹಲವು ಮುಖಂಡರುಗಳು, ಯಜಮಾನರುಗಳು ಗ್ರಾಮಸ್ಥರುಗಳು ಉಪಸ್ಥಿತರಿದ್ದರು.