ಚಿಕ್ಕಮಗಳೂರು- ಬೆಳಗಾವಿಯ ಬಸ್ ನಿರ್ವಾಹಕನ ಮೇಲೆ ಮರಾಠಿಗರು ದೌರ್ಜನ್ಯ ಎಸಗಿರುವುದನ್ನು ಖಂಡಿಸಿ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಜಿಲ್ಲಾ ಕನ್ನಡಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಕನ್ನಡಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ ವಿಶಾಲ ಹೃದಯ ಹೊಂದಿರುವ ಕನ್ನಡಿ ಗರು ಅನ್ಯ ಭಾಷಿಗರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಆದರೆ ಗಡಿ ಭಾಗದಲ್ಲಿ ಕೆಲವು ಕಿಡಿ ಗೇಡಿಗಳು ರಾಜ್ಯದ ಕಂಡೆಕ್ಟರ್ ಮೇಲೆ ಹಲ್ಲೆಗೆ ನಡೆಸಿರುವುದು ಖಂಡನೀಯ. ಕೂಡಲೇ ಅವರ ವಿರುದ್ಧ ಕಠಿ ಣ ಕ್ರಮ ಕೈಗೊಳ್ಳಬೇಕು ಎಂದರು.
ಕರ್ನಾಟಕದಲ್ಲಿ ಕನ್ನಡಿಗರು ಸಾರ್ವಭೌಮ, ನಾಡಿನಲ್ಲಿ ನೆಲೆಸಿರುವ ಪ್ರತಿಯೊಬ್ಬರು ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡಿಗರಿಗೆ ಉದ್ಯೋಗವೆಂಬ ಆದೇಶ ಮಾಡಿದರೂ ಇದನ್ನೆ ಲೆಕ್ಕಸದೇ ಕೆಲವರು ಕನ್ನಡಿಗರ ಮೇಲೆ ಹೆಚ್ಚು ದೌರ್ಜನ್ಯಕ್ಕೆ ಮುಂದಾಗುತ್ತಿರುವುದು ನ್ಯಾಯಸಮಂಜಸವಲ್ಲ ಎಂದು ಹೇಳಿದರು.
ನಾಡಿನ ಮತದಾರರ ಮೂಲಕ ಅಧಿಕಾರ ಹಿಡಿದು, ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಳಕರ್ ಅವರು ಕನ್ನಡಿಗರ ಪರವಾಗಿ ಕೈಜೋಡಿಸಿ, ಕಷ್ಟ-ಸುಖಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳದೇ, ಹಲ್ಲೆ ನಡೆಸಿರುವ ಮರಾಠಿಗರ ಬೆನ್ನೆಲುಬಾಗಿ ನಿಲ್ಲುವ ಮೂಲಕ ಕನ್ನಡಿಗರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ಕನ್ನಡಿಗನ ಮೇಲೆ ಹಲ್ಲೆ ನಡೆಸಿರುವ ಮರಾಠಿ ಪುಂಡರನ್ನು ಕೂಡಲೇ ಗಡಿಪಾರು ಮಾಡಬೇಕು. ಪ್ರಕರ ಣ ತಿರುಚಲು ಬಸ್ ನಿರ್ವಾಹಕನ ಮೇಲೆ ಪೋಕ್ಸೋ ಕೇಸು ದಾಖಲಿಸಿರುವುದು ಹಿಂಪಡೆದುಕೊಂಡು ನಿರ್ವಾಹಕನ ಪರವಾಗಿ ನ್ಯಾಯಬದ್ಧ ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಮಾತನಾಡಿ ರಾಜಕೀಯ ದೊಂಬರಾಟಕ್ಕೆ ಹೆಚ್ಚು ಕನ್ನಡಿಗರೇ ಬಲಿಯಾಗುತ್ತಿರುವುದು ಶೋಚನೀಯ. ಅಲ್ಪ ಸಂಖ್ಯೆಯ ಮರಾಠಿಗರ ಒಲೈಕೆಗಾಗಿ ಕೋ ಟ್ಯಾಂತರ ಕನ್ನಡಿಗರಿಗೆ ದ್ರೋಹವೆಸಗುತ್ತಿದೆ. ಕೂಡಲೇ ಒಲೈಕೆ ರಾಜಕಾರಣ ಕೈಬಿಟ್ಟು ರಾಜ್ಯದ ಪ್ರಜೆಗಳ ಪರ ವಾಗಿ ಕೈಜೋಡಿಸಬೇಕು ಎಂದರು.
ನೆರೆರಾಜ್ಯದಿಂದ ಹಲವಾರು ಮಂದಿ ಕನ್ನಡ ನಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಮಾತೃಭಾಷೆ ಬೇರೆಯಾದರೂ ವ್ಯವಹಾರಿಕ ಭಾಷೆಯನ್ನು ಕನ್ನಡವಾಗಿ ಬಳಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ಗಡಿಯಲ್ಲಿ ದ್ವೇಷ ಭಾವನೆ ಕೆರಳಿಸುತ್ತಿರುವ ಕಿಡಿಕೇಡಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ಜಿಲ್ಲಾ ಉಪಾಧ್ಯಕ್ಷ ಅನ್ವರ್, ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರುಗಳಾದ ಸತೀಶ್, ರೋಷನ್, ಶಿವಣ್ಣ, ನವೀನ್, ಡಿಂಪನ, ಪುಷ್ಪ, ಪಾಲಾಕ್ಷಿ, ಹೊನ್ನಪ್ಪ ಮತ್ತಿತರರು ಹಾಜರಿದ್ದರು.