ಮಧುಗಿರಿ:– ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ದಂಡಿನ ಮಾರಮ್ಮ ಜಾತ್ರೆ ಮಾರ್ಚ್ 11 ರಿಂದ 21 ರ ವರೆಗೂ ನಡೆಯಲಿದ್ದು ಅದರ ಸಲುವಾಗಿ ಸೋಮವಾರದಂದು ಜಾತ್ರೆ ಕಾಲದಲ್ಲಿ ಸೇರತಕ್ಕ ಅಂಗಡಿಗಳ ಮೇಲೆ ನೆಲವಳಿ ಸುಂಕ ವಸೂಲಿ ಮಾಡುವ ಹಕ್ಕಿನ ಹರಾಜು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಇಲಾಖೆಯವತಿಯಿಂದಲೇ ನಡೆಸುವಂತೆ ಆಗ್ರಹಿಸಿ ಭಕ್ತಾದಿಗಳು ಮನವಿ ಸಲ್ಲಿಸಿದರು.
ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತಾನಾಡಿ, ರಾಜ್ಯದಲ್ಲಿ 11 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಹರಾಜುದಾರರು ಹೆಚ್ಚಿಗೆ ಕೂಗುವುದರಿಂದ ಭಕ್ತಾದಿಗಳಿಗೆ ಹೊರೆಯಾಗುತ್ತಿದೆ. ಮನೋರಂಜನೆ ನೀಡುವಂತಹ ಆಟಗಳಲ್ಲಿ ಮಕ್ಕಳನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗದೆ ಪೋಷಕರು ಸಾಕಷ್ಟು ತೊಂದರೆ ಆಗುತ್ತಿರುವುದರಿಂದ ಇದನ್ನು ಮನಗಂಡು ಹರಾಜು ಪ್ರಕ್ರಿಯೆ ನಡೆಸದೆ ಇಲಾಖಾವತಿಯಿಂದ ನಡೆಸುವಂತೆ ಜಾತ್ರೆಯ ಪರಿಸ್ಥಿತಿಯ ಬಗ್ಗೆ ವಿವರಿಸಿದರು.
ಕಳೆದ ಬಾರಿ 18 ಲಕ್ಷ 4 ಸಾವಿರಕ್ಕೆ ಹರಾಜು ಆಗಿದ್ದ ಕಾರಣ ಇದರ ಹೊರೆಯನ್ನು ಭಕ್ತರ ಮೇಲೆ ಬಿದ್ದ ಪರಿಣಾಮ ಜಾತ್ರೆಗೆ ಭಕ್ತಾದಿಗಳ ಆಗಮನಕ್ಕೆ ತೊಂದರೆ ಆಯಿತು. ಆದ್ದರಿಂದ ಭಕ್ತಾದಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಧರ ನಿಗದಿಯಾದರೆ ಭಕ್ತರ ಸಂಖ್ಯೆಯು ಹೆಚ್ಚಾಗುತ್ತದೆ ಜೊತೆಗೆ ಜಾತ್ರೆಯು ಕಳೆಗಟ್ಟುತ್ತದೆ ಎಂಬ ಅಭಿಪ್ರಾಯ ಅಲ್ಲಿದ್ದ ಎಲ್ಲಾ ಭಕ್ತಾದಿಗಳಿಂದ ಉಪವಿಬಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ವೇಳೆ ಪುರಸಭೆ ಸದಸ್ಯ ಮಂಜುನಾಥ್ ಆಚಾರ್,ಮುಖಂಡರು ಗಳಾದ ಎಸ್ ಬಿ ಟಿ ರಾಮು,, ಕಿಶೋರ್,, ಬಾಲಾಜಿ ಬಾಬು, ಎಂ.ವಿ .ಮೂಡ್ಲಿಗಿರೀಶ್,ಯತೀಶ್ ಬಾಬು,ಜಿ. ನಾರಾಯಣರಾಜು,ಟಿ.ಪ್ರಸನ್ನಕುಮಾರ್, ಗ್ರಾ,ಪಂ. ಮಾಜಿ ಅಧ್ಯಕ್ಷ ಗೀರಿಶ್, ಕನ್ನಡಪರ ಸಂಘಟನೆಗಳ ತಿಮ್ಮರಾಜು ಎಸ್ಟಿಡಿ ರಘು ಹಾಗೂ ಅಪಾರಭಕ್ತ ವೃಂದ ಹಾಜರಿದ್ದರು..