ದುಬೈ : ಒಕ್ಕಲಿಗರ ಸಂಘ ದುಬೈ ವತಿಯಿಂದ ಇನ್ನಷ್ಟು ಹೆಚ್ಚಿನ ಸಮುದಾಯದ ಪರ ಕೆಲಸ, ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿ, ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಆಶ್ವಾಸನೆ ನೀಡಿದರು.
ಖಾಸಗಿ ಕಾರ್ಯಕ್ರಮದ ಪ್ರಯುಕ್ತ ದುಬೈಗೆ ತೆರಳಿದ್ದ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಒಕ್ಕಲಿಗರ ಸಂಘ ದುಬೈ ಯುಎಇ ಅಧ್ಯಕ್ಷ ಕಿರಣ್ ಗೌಡ ಹಾಗೂ ಕೋರ್ ಕಮಿಟಿ ಸದಸ್ಯರಾದ ಪ್ರದೀಪ್, ವಿಶಾಲ್ ಹಾಗು ಭೇಟಿಯಾಗಿ ತಾಯ್ನಾಡಿಗೆ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಅವರು, ಒಕ್ಕಲಿಗರ ಸಂಘ ದುಬೈ ಯುಎಇ ಸಂಘದ ಯಶಸ್ವಿ ಕಾರ್ಯಕ್ರಮವಾದ ಕೆಂಪೇಗೌಡ ಉತ್ಸವದ ಬಗ್ಗೆ ತಿಳಿದು ಹರ್ಷ ವ್ಯಕ್ತಪಡಿಸಿದರು. ಮುಂದೆಯೂ ಒಕ್ಕಲಿಗರ ಸಂಘ ದುಬೈ ವತಿಯಿಂದ ಇನ್ನಷ್ಟು ಹೆಚ್ಚಿನ ಸಮುದಾಯದ ಪರ ಕೆಲಸ, ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು, ಎಲ್ಲಾ ಸಮಾಜಮುಖಿ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ಆಶ್ವಾಸನೆ ನೀಡಿದರು.

ಈ ವೇಳೆ ಮಾತನಾಡಿದ ಒಕ್ಕಲಿಗರ ಸಂಘ ದುಬೈ ಯುಎಇ ಅಧ್ಯಕ್ಷ ಕಿರಣ್ ಗೌಡ ಅವರು, ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಈಗಾಗಲೇ ನಮ್ಮ ಎಲ್ಲಾ ಕೆಲಸಗಳಿಗೂ ಬೆಂಬಲ ನೀಡಿದ್ದಾರೆ. ಸಮುದಾಯಕ್ಕೆ ಅವರ ಕೊಡುಗೆ ಅಪಾರ ಎಂದ ಅವರು ನಿಮ್ಮ ಈ ಬೆಂಬಲ ನಮಗೆ ಮತ್ತಷ್ಟು ಸೇವೆಯನ್ನು ಮಾಡುವ ಹುರುಪನ್ನು ನೀಡಿದೆ, ಧನ್ಯವಾದಗಳು ಡಿಕೆ ಶಿವಕುಮಾರ್ ಅವರ ಪ್ರೀತಿಗೆ ಹಾರೈಕೆಗೆ ಎಂದು ಹರ್ಷ ವ್ಯಕ್ತಪಡಿಸಿದರು.