ತುಮಕೂರು : ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ವತಿಯಿಂದ ತುಮಕೂರು ತಾಲ್ಲೂಕು ಕೋರಾ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಫೆಬ್ರವರಿ 28 ರಂದು “ತುಮಕೂರು ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ”ವನ್ನು ಏರ್ಪಡಿಸಲಾಗಿದೆ.
ಸಮ್ಮೇಳನದ ಅಂಗವಾಗಿ ಅಂದು ಬೆಳಿಗ್ಗೆ 7.30 ಗಂಟೆಗೆ ಧ್ವಜಾರೋಹಣ, 8.30 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ,10 ಗಂಟೆಗೆ ವೇದಿಕೆ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮ ನಡೆಯಲಿವೆ.
ಸಮ್ಮೇಳನದ ಪ್ರಯುಕ್ತ ಫೆಬ್ರವರಿ 28 ರ ಮಧ್ಯಾಹ್ನ 12 ಗಂಟೆಗೆ ಸಮ್ಮೇಳನಾಧ್ಯಕ್ಷ ಎಂ.ನಂಜಯ್ಯ ಅವರ ಸಾಹಿತ್ಯಾವಲೋಕನ; 12.45 ಗಂಟೆಗೆ ಕೋರಾ-ಸ್ಥಳೀಯ ಸಾಂಸ್ಕೃತಿಕತೆ, ಶೈಕ್ಷಣಿಕ ನಗರಿಯಿಂದ-ಕೈಗಾರಿಕಾ ನಗರಿಯತ್ತ ತುಮಕೂರು, ಜಾನಪದ ಕಲೆ ಮತ್ತು ಸಾಹಿತ್ಯದ ಮೇಲೆ ನಗರೀಕರಣದ ಪ್ರಭಾವ 2.30 ಗಂಟೆಗೆ ರಂಗಭೂಮಿ ಮತ್ತು ಸಂಗೀತ, 3.30 ಗಂಟೆಗೆ ಕವಿ ಸಮಯ ಗೋಷ್ಠಿಗಳು ನಡೆಯಲಿವೆ. ಸಂಜೆ 4.45 ಗಂಟೆಗೆ ಆಜೀವ ಸದಸ್ಯರ ಬಹಿರಂಗ ಅಧಿವೇಶನ, 5 ಗಂಟೆಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ತಿಳಿಸಿದ್ದಾರೆ.