ಚಿಕ್ಕಮಗಳೂರು. ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಒತ್ತಾಯಿಸಿ ಹಾಗೂ ಅಡುಗೆ ಸಿಬ್ಬಂದಿಯ ಮೇಲೆ ವಿನಾಕಾರಣ ಅನೈತಿಕ ಸಂಬಂಧದ ಆರೋಪ ಹೊರಿಸಿ ಅವರನ್ನು ಕೆಲಸದಿಂದ ತೆಗೆಯುವಂತೆ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಮೇಲೆ ಒತ್ತಡ ಏರುತ್ತಿದ್ದು ನಾವು ನಮ್ಮ ಸಂಘಟನೆಯಿಂದ ಇದನ್ನು ಆಕ್ಷೆಪಿಸಿದಾಗ ನಮ್ಮ ಮೇಲು ಹಲ್ಲೆ ಮಾಡಲಾಗಿದೆ ಈ ಎಂದು ಆರೋಪಿಸಿ ತಪ್ಪಿತಸ್ಥರ ವಿರುದ್ದ ಕೂಡಲೆ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಬಣದಿಂದ ಪೊಲೀಸ್ ವರೀಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿ ನೀಡಿ ಮಾತನಾಡಿದ ಮುಖಂಡ ಕಬ್ಬಿಗೆರೆ ಮೋಹನ್ ಅವರು ಈ ಪ್ರಕರಣದ ಬಗ್ಗೆ ಧ್ವನಿಯೆತ್ತಿದ್ದಕ್ಕಾಗಿ ಎಂಜಿ ರಸ್ತೆಯಲ್ಲಿ ಬರುತ್ತಿರುವಾಗ ನನ್ನ ಮೇಲೆ ಮರ್ಲೆ ಅಣ್ಣಯ್ಯನವರು ಹಲ್ಲೆ ನಡೆಸಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು, ಮುರಾರ್ಜಿ ಶಾಲೆಯ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಸ್ವತಃ ಇವರೇ ಅಲ್ಲಿನ ಶಾಲಾ ಸಿಬ್ಬಂದಿಗಳ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿದ್ಧರ ಪರಿಣಾಮವಾಗಿ ನನ್ನ ಮೇಲೆ ಹಲ್ಲೆ ನಡೆಸಿದ್ದು ತಮಗೆ ಲಭಿಸಿರುವ ಸಾಂವಿಧಾನಿಕ ಹಕ್ಕನ್ನು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನನ್ನ ಮೇಲೆ ನಡೆದಿರುವ ಹಲ್ಲೆಯ ಘಟನಾವಳಿ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದ್ದು ಪೊಲೀಸರು ಕೂಡಲೇ ಈ ಬಗ್ಗೆ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಕೆಲ ದಲಿತ ಸಂಘಟನೆಗಳ ಮುಖಂಡರ ಸ್ವಾರ್ಥಕ್ಕಾಗಿ ಇತರರ ಮೇಲೆ ಅನೈತಿಕ ಸಂಬಂಧದ ಆರೋಪಗಳನ್ನು ಹೋರಿಸಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದ್ದು ಈ ಮುಖಂಡರ ಕೃತ್ಯಗಳಿಂದ ಶಾಲೆಯಲ್ಲಿನ ಉತ್ತಮ ವಾತಾವರಣ ಹದಗೆಟ್ಟಿದೆ ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು ಬೀಕನಹಳ್ಳಿ ಮೊರಾರ್ಜಿ ಶಾಲೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿರುವ ಮತ್ತು ಇದನ್ನು ಪ್ರಶ್ನಿಸಲು ಹೋಗಿ ನನ್ನ ಮೇಲೆ ಹಲ್ಲೆ ಮಾಡಿರುವ ದಲಿತ ಮುಖಂಡರ ಮೇಲೆ ಕೂಡಲೇ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಭಾರತಿ, ಲಕ್ಷ್ಮಣ್ ಇದ್ದರು