ಕೊಟ್ಟಿಗೆಹಾರ: ಅತ್ತಿಗೆರೆ ಗ್ರಾಮಕ್ಕೆ ಸಾಗುವ ಮುಖ್ಯರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುಮಾರು 15 ವರ್ಷಗಳ ಹಿಂದೆ ಈ ರಸ್ತೆಗೆ ಡಾಂಬರೀಕರಣ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗಿತ್ತು. ಆದರೆ, ಇತ್ತೀಚೆಗೆ ಅತಿಯಾದ ಭಾರವಿರುವ ಲಾರಿಗಳು ನಿರಂತರವಾಗಿ ಸಂಚರಿಸಿದ ಪರಿಣಾಮವಾಗಿ ರಸ್ತೆ ಹಾಗೂ ಬಾಕ್ಸ್ ಚರಂಡಿಗಳು ಸಂಪೂರ್ಣ ಹಾಳಾಗಿದ್ದು, ವಾಹನಗಳು ತಿರುಗಾಡಲು ಸಾಕಷ್ಟು ತೊಂದರೆ ಉಂಟಾಗಿದೆ.
ಇಂದು ಬೆಳಗ್ಗೆ ಆಟೋರಿಕ್ಷೋ ಒಂದು ಬಾಕ್ಸ್ ಚರಂಡಿಗೆ ಸಿಲುಕಿಕೊಂಡು ಒದ್ದಾಡಿದ ದೃಶ್ಯ ಕಂಡು ಬಂತು ಈ ಘಟನೆಯಿಂದ ಗ್ರಾಮಸ್ಥರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು, ರಸ್ತೆ ಹಾಗೂ ಬಾಕ್ಸ್ ಚರಂಡಿಗಳನ್ನು ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.