ಕೊರಟಗೆರೆ ;- ತಾಲೂಕಿನ ಮೀನುಗಾರರ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಸ್ಥಾನಕ್ಕೂ ಮತ್ತು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಎಲ್ಲಾ ಸ್ಥಾನಗಳು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ಕೊರಟಗೆರೆ ತಾಲೂಕಿನ ಮೀನುಗಾರರ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಮಾನ್ಯ, ಮಹಿಳಾ ಮೀಸಲು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಹಿಂದುಳಿದ ಎ ಮತ್ತು ಬಿ ಪ್ರವರ್ಗಗಳ ನಿರ್ದೇಶಕರುಗಳ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳು ಅವಿರೋದವಾಗಿ ಆಯ್ಕೆಯಾಗಿ ಅದರೊಂದಿಗೆ ನಡೆದ ಅಧ್ಯಕ್ಷ ಸ್ಥಾನಕ್ಕೆ ಕೆ.ವಿ.ಮಂಜುನಾಥ್. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಬಿ.ಲೋಕೇಶ್ ಅವಿರೋಧವಾಗಿ ಆಯ್ಕೆಯಾದರೆ.
ನಿರ್ದೆಶಕರುಗಳಾಗಿ ಹೆಚ್.ಎಸ್.ನಂಜುಂಡಸ್ವಾಮಿ, ಎಂ,ಎಸ್,ರಮೇಶ್, ನಾಗರಾಜು, ಕೆಂಪರಾಜು, ಕೆ.ಆರ್.ರಮೇಶ್, ವಿಜಯನರಸಿಂಹ, ಬಿ.ಎಸ್.ಮುತ್ತೇಗೌಡ, ಕೆ.ಎಂ.ಸುರೇಶ್, ಪಾರ್ವತಮ್ಮ, ಅನಿತಾ ಲಕ್ಷ್ಮಿ, ಮಹಮದ್ ದಸ್ತಗೀರ್, ಕೆ.ಬಿ.ಲೋಕೇಶ್, ಕೆ.ವಿ.ಮಂಜುನಾಥ್, ಯಲ್ಲಪ್ಪ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆಂದು ಚುನಾವಣಾಧಿಕಾರಿ ಗುರುಸಿದ್ದಯ್ಯ ತಿಳಿಸಿದ್ದಾರೆ.

ಅವಿರೋಧವಾಗಿ ಆಯ್ಕೆ ನಂತರ ಮಾತನಾಡಿದ ನೂತನ ಆದ್ಯಕ್ಷ ಕೆ.ವಿ.ಮಂಜುನಾಥ್ ಹಾಗೂ ಉಪಾಧ್ಯಕ್ಷ ನಮ್ಮ ಸೇವಾ ಅವದಿಯಲ್ಲಿ ನಿದೇರ್ಶಕರುಗಳ ಮಾರ್ಗದರ್ಶನದಲ್ಲಿ ಹಾಗೂ ಮೀನುಗಾರಿಕಾ ಇಲಾಖಾ ಅಧಿಕಾರಿಗಳ ಸಹಕದಿಂದ ತಾಲ್ಲೂಕಿನಲ್ಲಿ ಮೀನುಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡುವುದರೊಂದಿಗೆ ಇಲಾಖಾ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದಾಗಿ ತಿಳಿಸಿದ ಅವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರುಗಳಿಗೆ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ತೋಟದ ಸಿದ್ದಪ್ಪ ಸೇರಿದಂತೆ ಇನ್ನಿತರ ಮುಖಂಡರುಗಳು ಹಾಜರಿದ್ದರು.
ವರದಿ: ಶ್ರೀನಿವಾಸ್ ಕೊರಟಗೆರೆ