ಎಚ್.ಡಿ.ಕೋಟೆ-ಶೌಚಾಲಯ-ಗುಂಡಿಯಲ್ಲಿ-ಮಾನವನ-ತಲೆ-ಬುರುಡೆ-ಪತ್ತೆ

ಎಚ್.ಡಿ.ಕೋಟೆ: ತಾಲೂಕಿನ ಜೊಂಪನಹಳ್ಳಿಯ ಚಿನ್ನಪ್ಪ ಪಾಳ್ಯ ಗ್ರಾಮದ ದಾಸಪ್ರಕಾಶ್ ಎಂಬವರ ಮನೆಯ ಹಿತ್ತಲಿನ ಶೌಚಾಲಯದ ಗುಂಡಿಯಲ್ಲಿ ಮೃತ ವ್ಯಕ್ತಿಯೊಬ್ಬರ ತಲೆ ಬುರುಡೆ ಪತ್ತೆಯಾಗಿದೆ.

ಮಂಗಳವಾರ ಬೆಳಿಗ್ಗೆ ದಾಸಪ್ರಕಾಶ್ ಸೋದರ ಪ್ರವೀಣ್ ಮನೆಯ ಶೌಚಾಲಯದ ಗುಂಡಿ ಕುಸಿದು ಬಿದ್ದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ನಡೆಸಲು ಮುಂದಾಗಿದ್ದಾಗ ಶೌಚಾಲಯದ ಗುಂಡಿಯ ಒಳಗೆ ಮೂಳೆಗಳು, ಪತ್ತೆಯಾಗಿವೆ.

ತಕ್ಷಣ ಹೊಯ್ಸಳ ಪೊಲೀಸರಿಗೆ ವಿಚಾರ ತಿಳಿಸಿದ್ದು, ಸಿಬ್ಬಂದಿಗಳಾದ ಸೋಮನಾಯಕ, ಗೋವಿಂದ ರಾಜು ಮತ್ತು
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಸ್ತಿಪಂಜರ ಇರುವುದು ಖಚಿತವಾಗಿದೆ.

ಸರ್ಕಲ್ ಇನ್‌ಸ್ಪೆಕ್ಟರ್ ಶಬೀರ್ ಹುಸೇನ್, ಡಿವೈಎಸ್ಪಿ ಗೋಪಾಲಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲು ಮಾಡಿಕೊಂಡು ಕ್ರಮಕೈಗೊಂಡಿದ್ದಾರೆ. 7 ತಿಂಗಳುಗಳಿಂದ ದಾಸ್‌ ಪ್ರಕಾಶ್ ಕಾಣೆಯಾಗಿದ್ದು, ಈಗ ಮೃತದೇಹ ಪತ್ತೆಯಾಗಿರುವುದು ಅನೇಕ ಅನುಮಾನ ಗಳಿಗೆ ಎಡೆ ಮಾಡಿಕೊಟ್ಟಿದೆ. ಮೃತದೇಹದ ಅವಯವಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

× How can I help you?