ತುಮಕೂರು-ಮಹಾಶಿವಾರಾತ್ರಿ ಪ್ರಯುಕ್ತ-ಬಾಣಲಿಂಗ-ಉಮಾಮಹೇಶ್ವರಿ ದೇವರಿಗೆ-ವಿಶೇಷ ಅಲಂಕಾರ

ತುಮಕೂರು: ನಗರದ ಎಸ್.ಎಸ್.ಪುರಂ ಮುಖ್ಯರಸ್ತೆಯಲ್ಲಿರುವ ಶ್ರೀ ಉಮಾಮಹೇಶ್ವರಸ್ವಾಮಿ ದೇವಾಲಯದಲ್ಲಿ ಪುನರ್ ಪ್ರತಿಷ್ಠಾಪನೆಯಾಗಿರುವ ಬಾಣಲಿಂಗ,ಉಮಾಮಹೇಶ್ವರಿ ದೇವರಿಗೆ ಮುಖ್ಯ ಅರ್ಚಕ ವೇ||ಬ್ರ||ಶ್ರೀ ನಾಗರಾಜಶಾಸ್ತಿçಗಳ ನೇತೃತ್ವದಲ್ಲಿ ಮಹಾಶಿವಾರಾತ್ರಿ ಪ್ರಯುಕ್ತ ವಿಶೇಷ ಅಲಂಕಾರವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ವೇ||ಬ್ರ||ಶ್ರೀ ಲಕ್ಷ್ಮಿನಾರಾಯಣಶಾಸ್ತ್ರೀ ,ಸುಬ್ರಹ್ಮಣ್ಯಶಾಸ್ತ್ರೀ ,ಫಣಿದತ್ತ, ಹಿರಿಯಣ್ಣ ಮುಂತಾದವರ ನೇತೃತ್ವದಲ್ಲಿ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ರಾಜ್ ಕುಮಾರ್ ಗುಪ್ತ ಕುಟುಂಬವರ್ಗದವರಿಂದ ಸಾವಿರಾರು ಭಕ್ತಾದಿಗಳಿಗೆ ಫಲಹಾರ ವಿತರಿಸಲಾಯಿತು.

Leave a Reply

Your email address will not be published. Required fields are marked *

× How can I help you?