ತುಮಕೂರು – ತುಮಕೂರಿನ ವೀರಶೈವ ಸಹಕಾರ ಬ್ಯಾಂಕ್ ಆವಣದಲ್ಲಿರುವ ಶ್ರೀ ಮಹಾನಂದಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕೈಲಾಸದಲ್ಲಿ ಶಿವನ ವಿಶೇಷ ದರ್ಶನ ಅಲಂಕಾರ ಹಾಗೂ ಉಮಾ ಮಹೇಶ್ವರರಿಗೆ ಭಕ್ತಾದಿಗಳಿಂದ ಕ್ಷೀರಾಭಿಷೇಕ ನೆರವೇರಿಸಲಾಯಿತು.
ಬ್ಯಾಂಕ್ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷರಾದ ಕೆ.ಮಲ್ಲಿಕಾರ್ಜುನಯ್ಯ, ನಿರ್ದೇಶಕ ಷಣ್ಮುಖ,ಪಿ.ರವಿಕುಮಾರ್,ಟಿ.ಜೆ.ಗಿರೀಶ್,ಸಂತೋಷ್ ಮಲ್ನಾಡ್,ಚಂದ್ರಶೇಖರ್ ಹಾಗೂ ವೀರಶೈವ ಸಮಾಜದ ಕೋರಿ ಮಂಜಣ್ಣ, ಬಾವಿಕಟ್ಟೆ ಮಂಜುನಾಥ್,ಸುನಿಲ್ ಬ್ಯಾಂಕಿನ ಸಿಬ್ಬಂದಿ ವರ್ಗದವರು ಮುಂತಾದವರಿದ್ದರು.
- ಕೆ.ಬಿ.ಚಂದ್ರಚೂಡ