ಹಾಸನ :- ಹಾಸನ ಜಿಲ್ಲೆಯ ರೈತರಿಗಾಗಿ 2024-25ನೇ ಸಾಲಿನ ಅಟಲ್ ಭೂಜಲ್ ಯೋಜನೆಯ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಜಾವಗಲ್ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಸಲಾಗಿದೆ
ತರಬೇತಿಯಲ್ಲಿ ಅಟಲ್ ಭೂಜಲ್ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲಭದ್ರತಾ ಯೋಜನೆ ಸಿದ್ಧಪಡಿಸುವುದು, ನೀರಿನ ಬಳಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳು ಮತ್ತು ನೀರಿನ ಮರು ಪೂರೈಕೆ ಕ್ರಮಗಳ ಬಗ್ಗೆ ಚರ್ಚಿಸಿ ಮಾಹಿತಿ ನೀಡುವ ಕುರಿತು ಜಿಲ್ಲಾ ಕೃಷಿ ತರಬೇತಿ ಕೇಂದ್ರ ಅರಕಲಗೂಡು ಮತ್ತು ಕೃಷಿ ಇಲಾಖೆ ಅರಸೀಕೆರೆ ವತಿಯಿಂದ ಮಾ.೨೧ ರಂದು ಅರಸೀಕೆರೆ ತಾಲ್ಲೂಕಿನ ರೈತ/ರೈತ ಮಹಿಳೆಯರಿಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ರೈತ/ರೈತ ಮಹಿಳೆಯರು ಟಿ. ಹೆಚ್. ಶಿವಕುಮಾರ್, ಕೃಷಿ ತಜ್ಞರು, ಆಟಲ್ ಭೂಜಲ್ ಯೋಜನೆ ಅರಸೀಕೆರೆ ಇವರ ದೂರವಾಣಿ 7892734738 ಮತ್ತು ಸುಬ್ರಮಣ್ಯ ಕೃಷಿ ಅಧಿಕಾರಿ, ಜಾವಗಲ್ ಇವರ ದೂರವಾಣಿ 9113863514ಸಂಖ್ಯೆಗೆ ಅರಸೀಕೆರೆ ತಾಲ್ಲೂಕಿನ ರೈತರು ಕರೆಮಾಡಿ ನೋಂದಾಯಿಸಿಕೊAಡು ಸದರಿ ತರಬೇತಿಯ ಸದುಪಯೋಗ ಪಡೆದುಕೊಳ್ಳಲು ಅರಕಲಗೂಡಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರ