ಅರೇಹಳ್ಳಿ-ಗ್ರಂಥಾಲಯಗಳು-ಓದುಗರ-ಜ್ಞಾನದ-ಕಣಜ-ಇ ಒ- ವಸಂತಕುಮಾರ್

ಅರೇಹಳ್ಳಿ: ತಂತ್ರಜ್ಞಾನ ಮುಂದುವರಿದಂತೆ ಅದಕ್ಕೆ ಅನುಗುಣವಾಗಿ ಗ್ರಾಮೀಣ ಭಾಗದಲ್ಲಿ ಓದುಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪುಸ್ತಕ ರೂಪದಲ್ಲಿ ಸಿಗುತ್ತಿದ್ದ ಪ್ರತಿಯೊಂದು ಅಗತ್ಯ ಮಾಹಿತಿಗಳು ಡಿಜಿಟಲ್ ಮಾದರಿಯಲ್ಲಿ ಪರಿವರ್ತನೆ ಗೊಂಡಿದ್ದು ಇದೀಗ ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಡಿಜಿಟಲ್ ಮಾದರಿಯ ಗ್ರಂಥಾಲಯಗಳಲ್ಲಿ ಲಭ್ಯ ಇದ್ದು ಓದುಗರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾ ಪಂ ಕಾರ್ಯನಿರ್ವಾಹಣಾಧಿಕಾರಿ ವಸಂತಕುಮಾರ್ ತಿಳಿಸಿದರು

ತಾಲೂಕಿನ ಅರೇಹಳ್ಳಿ ಹೋಬಳಿ ನಾರ್ವೆ ಪೇಟೆ ಗ್ರಾಮದಲ್ಲಿ 8.50 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮಪಂಚಾಯಿತಿ ವ್ಯಾಪ್ತಿಯ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯಗಳು ಓದುಗರಿಗೆ ಅಕ್ಷರ ಜ್ಞಾನವನ್ನು ಉಣಬಡಿಸುವ ಜ್ಞಾನ ಕೇಂದ್ರವಾಗಿದೆ. ರಾಜ್ಯದ ಕಬ್ಬನ್ ಪಾರ್ಕ್ ನಲ್ಲಿ ಇರುವ ಕೇಂದ್ರ ಗ್ರಂಥಾಲಯದಲ್ಲಿ ಸಿಗುವ ಪ್ರತಿಯೊಂದು ಉಪಯುಕ್ತ ಮಾಹಿತಿಗಳು ನಿಮ್ಮ ಮನೆಯಂಗಳದ ಡಿಜಿಟಲ್ ಗ್ರಂಥಾಲಯದಲ್ಲಿಯೂ ಕೂಡ ಲಭ್ಯವಿದೆ. ಕೇವಲ ಕಥೆ ಕಾದಂಬರಿ ಮಾತ್ರವಲ್ಲದೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗೆ ಸಂಬಂಧ ಪಟ್ಟಂತೆ ಹಲವು ಮಾಹಿತಿಯನ್ನು ಇಲ್ಲಿಯೆ ಪಡೆದು ಕೊಳ್ಳಬಹುದಾಗಿದೆ ಎಂದರು.

ನಂತರ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ಈ ಭಾಗದ ಓದುಗರ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಜಿಟಲ್ ಮಾದರಿಯ ಸುಸಜ್ಜಿತವಾದ ಗ್ರಂಥಾಲಯವನ್ನು ತೆರೆಯಲಾಗಿದೆ ಜನಸಾಮಾನ್ಯರು ವಿಧ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರು ಗ್ರಂಥಾಲಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸುಲಗಳಲೆ, ಸದಸ್ಯರಾದ ಚಿದಾನಂದ, ಮಲ್ಲಿಕಾರ್ಜುನ ನಾರ್ವೆ ಮಂಜುನಾಥ್, ಬೇಬಿ,ವೀಣಾ, ಪವಿತ್ರ, ಮಾಜಿ ತಾ ಪಂ ಸದಸ್ಯ ಸೋಮಯ್ಯ, ಸಾಮಾಜಿಕ ಹೋರಾಟಗಾರ ಚಂದ್ರು ಬ‌ಹುಜನ್, ಶ್ರೀಕಾಂತ್, ವೆಂಕಟೇಶ್, ಮೂರ್ತಿ ಪಿಡಿಒ ಚಂದ್ರಯ್ಯ ಕಾರ್ಯದರ್ಶಿ ಚಾಮರಾಜ್, ಗ್ರಂಥಾಲಯ ಮೇಲ್ವಿಚಾರಕ ಚಂದ್ರಶೇಖರ್, ಹಾಗೂ ಸಿಬ್ಬಂದಿಗಳು ಹಾಜರಿದ್ದರು

Leave a Reply

Your email address will not be published. Required fields are marked *

× How can I help you?