ಮೈಸೂರು-ನಾನು ಇಂದು ಚುಕ್ಕಿಚಿತ್ರ ಕಲಾವಿದನೆಂದು ಸಾಕಷ್ಟು ಹೆಸರು ಮಾಡಿದ್ದರೂ ನನ್ನ ಮೊದಲ ಚುಕ್ಕಿಚಿತ್ರ ಗಣಪತಿಯದ್ದಾಗಿತ್ತೆಂಬುವುದನ್ನು ಮರೆಯುವಂತಿಲ್ಲ.ವಾಸವಾಗಿದ್ದ ಬಾಡಿಗೆ ಮನೆಯ ಹೊರಭಾಗದ ಗೋಡೆಯ ಮೇಲೆ ಗಣಪನ ಚಿತ್ರ ಬರೆದಿದ್ದಂತೂ ಸದಾ ಸ್ಮರಣೀಯ.ಬಹುಶಃ ಸಿದ್ಧಿವಿನಾಯಕನಷ್ಟು ಜನಪ್ರೀತಿ ಗಳಿಸಿದ ದೇವರುಗಳ ಸಂಖ್ಯೆ ಹೆಚ್ಚಿರಲಿಕ್ಕಿಲ್ಲ ಆಬಾಲ ವೃದ್ಧರಾಗಿಯಾಗಿ ಸರ್ವತ್ರ ಗೌರವಕ್ಕೆ ಪಾತ್ರನಾದ ನಮ್ಮ ಗಣಪ ನಿಜಕ್ಕೂ ಭಾರತೀಯರೆಲ್ಲರ ಹೆಮ್ಮೆ ಸಾಹಿತಿ ಚುಕ್ಕಿ ಚಿತ್ರ ಕಲಾವಿದ ಮೋಹನ್ ವೆರ್ಣೇಕರ್ ಹೇಳಿದರು.
ದೀಪ್ತಿ ಸಾಂಸ್ಕೃತಿಕ ವೇದಿಕೆ ವತಿಯಿಂದ ನಿಮಿಷಾಂಬ ನಗರದಲ್ಲಿರುವ ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರದಲ್ಲಿ,ಕಾಳಿಹುಂಡಿ ಶಿವಕುಮಾರ್ ರವರು ಸಂಗ್ರಹಿಸಿರುವ ಪತ್ರಿಕೆಗಳಲ್ಲಿ ಬಂದಿರುವ ಗಣಪತಿಯ ಚಿತ್ರ- ಲೇಖನ ಮಾಹಿತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕಾಳಿಹುಂಡಿ ಶಿವಕುಮಾರ್ ಅವರ ಈ ವೈವಿಧ್ಯಮಯ ಗಣಪತಿಯ ಸಾವಿರಾರು ಚಿತ್ರಗಳ ಸಂಗ್ರಹ ಕಾರ್ಯ ಶ್ಲಾಘನೀಯವಾದದ್ದು.ಅದರಲ್ಲೂ 25 ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇವರ ಈ ಚಿತ್ರಗಳ ಪ್ರದರ್ಶನ ರಾಜ್ಯಾದ್ಯಂತ ಏರ್ಪಾಡು ಆಗುವಂತಾಗಬೇಕು.ಇಲ್ಲಿಯ ಚಿತ್ರಗಳ ವೀಕ್ಷಣೆ ಎಂದರೆ ಕಣ್ಣಿಗೆ ಭಕ್ತಿ ಭಾವದೊಡನೆ ವಿಸ್ಮಯ ಬೆರೆತ ಅದ್ಭುತ ನೋಟವೇ ಸರಿ.ಒಂದು ಅಭಿರುಚಿಯನ್ನು ಬೆಳೆಸಿಕೊಂಡಾದ ಬಳಿಕ ಪೋಷಿಸಿಕೊಂಡು ಹೋಗುವುದು ಸುಲಭದ ಕಾರ್ಯವಲ್ಲ.ಶಿವಕುಮಾರ್ ಈ ವಿಷಯದಲ್ಲಿ ಸಫಲರಾಗಿರುವುದರಿಂದ ಅಭಿನಂದನೀಯರಾಗುತ್ತಾರೆ ಎಂದು ಮೋಹನ್ ವೆರ್ಣೇಕರ್ ತಿಳಿಸಿದರು.
ಮುಕ್ತಕ ಕವಿ ಮುತ್ತು ಸ್ವಾಮಿ ಮಾತನಾಡುತ್ತಾ ಅಪರೂಪದಲ್ಲಿ ಅಪರೂಪದ ಈ ರೀತಿಯ ಹವ್ಯಾಸ ರೂಡಿಸಿಕೊಂಡಿರುವ ಕಾಳಿಹುಂಡಿ ಶಿವಕುಮಾರ್ ರವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಜೊತೆಗೆ ಈ ಪ್ರದರ್ಶನ ವನ್ನ ವೀಕ್ಷಣೆ ಮಾಡಿ ಅದರ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಾಗರೀಕರ ಹಗಲು ಯೋಗಕ್ಷೇಮ ಕೇಂದ್ರದ ಮುಖ್ಯಸ್ಥರಾದ ಪ್ರಭುಸ್ವಾಮಿ ರವರು ಮಾತನಾಡುತ್ತಾ,ಗಣಪತಿ ಹಬ್ಬದ ಸಂದರ್ಭದಲ್ಲಿ ಇಂತಹ ಪ್ರದರ್ಶನ ಅತ್ಯಂತ ಮಹತ್ವಪೂರ್ಣವಾದದ್ದು.ಶಿವಕುಮಾರ್ ಅಂತಹವರು ನಮ್ಮ ಸತ್ಸಸಂಪ್ರದಾಯವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯುತ್ತಿದ್ದು, ಇವರಿಗೆ ಪ್ರೋತ್ಸಾಹ ಅಗತ್ಯ ಎಂದರು.
ಪತ್ರಿಕಾ ಸಂಗ್ರಹಕ ಕಾಳಿಹುಂಡಿ ಶಿವಕುಮಾರ್ ಮಾತನಾಡುತ್ತಾ ಕುತೂಹಲಕ್ಕೆ ನಾನು ಸಂಗ್ರಹಿಸಿದ ಗಣಪನ ಚಿತ್ರಗಳು ಇಂದು ಬೃಹದಾಕಾರವಾಗಿ ಸಂಗ್ರಹವಾಗಿದೆ.ಮೊದಲು ನಮ್ಮ ಮನೆಯಲ್ಲಿ ಪ್ರದರ್ಶನ ಮಾಡುತ್ತಿದ್ದ ನಾನು ಈಗ ಮೈಸೂರಿನ ಸುತ್ತಮುತ್ತ ಅಲ್ಲದೆ ಕಲ್ಬುರ್ಗಿ,ಧಾರವಾಡ ಇನ್ನಿತರ ಸ್ಥಳಗಳಲ್ಲೂ ಕೂಡ ಪ್ರದರ್ಶನ ಮಾಡಿದ್ದೇನೆ.ಯಾವುದೇ ಕೆಲಸವನ್ನು ನಾವು ಆಸಕ್ತಿಯಿಂದ ಮಾಡೇ ಮಾಡುತ್ತೇನೆ ಎಂದು ತೀರ್ಮಾನ ಮಾಡಿ ಮುನ್ನುಗ್ಗಿದರೆ ಅದು ಖಂಡಿತ ಯಶಸ್ಸು ಸಿಗುತ್ತದೆ ಎಂದರು.
ಪರಶಿವಮೂರ್ತಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಆರ್ಟ್ ಗ್ಯಾಲರಿ ಮೂರ್ತಿ ರವರು ಎಲ್ಲರನ್ನೂ ಸ್ವಾಗತಿಸಿದರು.ಕಣ್ಣೂರು ವಿ,ಗೋವಿಂದಾಚಾರಿ ಕಾರ್ಯಕ್ರಮವನ್ನು ನಿರೂಪಿಸಿದರು.ಅನಂತ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
——————–ಮಧುಕುಮಾರ್