ಹೊಳೆನರಸೀಪುರ – ರಿವರ್ಬ್ಯಾಂಕ್ ರಸ್ತೆಯ ಲಕ್ಷ್ಮಣೇಶ್ವರ ದೇವಸ್ಥಾನ ಹಿಂಭಾಗದಲ್ಲಿ, ಧರ್ಮಶಾಶ್ತ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟ್ನವರು ಸುಮಾರು 4 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ದೇವಾಲಯದಲ್ಲಿ ಮಾರ್ಚ್ 12 ರಂದು ಅಯ್ಯಪ್ಪಸ್ವಾಮಿ ಅವರ ಪ್ರಾಣಪ್ರತಿಷ್ಠಾಪನೆ, ಕುಂಭಾಭಿಷೇಕ, ದೇವಾಲಯ ಉದ್ಘಾಟನೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.
ಹೊಳೆನರಸೀಪುರ: ರಿವರ್ಬ್ಯಾಂಕ್ ರಸ್ತೆಯ ಲಕ್ಷ್ಮಣೇಶ್ವರ ದೇವಸ್ಥಾನದ ಹಿಂಭಾಗದಲ್ಲಿ, ಧರ್ಮಶಾಶ್ತ ಅಯ್ಯಪ್ಪಸ್ವಾಮಿ ಚಾರಿಟಬಲ್ ಟ್ರಸ್ಟ್ನವರು ಸುಮಾರು 4 ಕೋಟಿ ವೆಚ್ಚದಲ್ಲಿ ನೂತನವಾಗಿ ನಿಮರ್ಿಸಿರುವ ಅಯ್ಯಪ್ಪಸ್ವಾಮಿ ದೇವಾಲಯ ಮಾರ್ಚ್12 ರಂದು ಉದ್ಘಾಟನೆ ಆಗಲಿದೆ, ಅಯ್ಯಪ್ಪಸ್ವಾಮಿ ಅವರ ಪ್ರಾಣಪ್ರತಿಷ್ಠಾಪನೆ, ಕುಂಭಾಭಿಷೇಕಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ.
ವಾಸವಿ ಪೀಠದ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಕುಂಭಾಭಿಷೇಕ ನೆಡೆಸಲಿದ್ದು, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ವಾಸುದೇವನ್ ನಂಬೂದರಿ ಅವರ ನೇತೃತ್ವದಲ್ಲಿ ಪೂಜಾವಿಧಿವಿಧಾನಗಳು ನಡೆಯಲಿದೆ. ಬೆಂಗಳೂರಿನ ಅಯ್ಯಪ್ಪ ಭಕ್ತ ನಟರಾಜ್ ಅವರ ಮಾರ್ಗದರ್ಶನದಲ್ಲಿ ಶಿಲ್ಪಿ ಸ್ವಾಮಿನಾಥನ್ ದೇವಾಲಯ ನಿರ್ಮಾಣ ಮಾಡಿದ್ದಾರೆ.
ಉದ್ಘಾಟನೆ ಅಂಗವಾಗಿ ಪೂಜಾವಿಧಿ ವಿಧಾನಗಳು ಮಾಚರ್್ 10 ರ ಸೋಮವಾರದಿಂದ 17 ರ ವರೆಗೆ ನಡೆಯಲಿದೆ. 12 ರಂದು ಬುಧವಾರ ಗಣಪತಿ ಹೋಮ, ಪ್ರಾಣ ಪ್ರತಿಷ್ಠೆ, ತತ್ವ ಕಲಶ ಪೂಜೆ, ಅಭಿಷೇಕ, ಅನುಜ್ಞಾ ಕಲಶ ಪೂಜೆ, ಕುಂಭಾಭಿಷೇಕ ಅಯ್ಯಪ್ಪನ ಪ್ರತಿಷ್ಠಾಪನೆ ನೆಡೆಯಲಿದೆ. ಮಧ್ಯಾಹ್ನ 12 ಗಂಟೆಯಿಂದ ಸಾರ್ವಜನಿಕಕ ಅನ್ನಸಂತರ್ಪಣೆ. ಮಾಚರ್್ 14 ರಂದು ನೂತನ ದೇವಾಲಯದ 18 ಮೆಟ್ಟಿಲುಗಳ ಪಡಿಪೂಜೆ ನೆಡೆಯಲಿದೆ.

16 ರಂದು ಸಂಜೆ 5 ಗಂಟಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಯ್ಯಪ್ಪಸ್ವಾಮಿ ಉತ್ಸವ ನಡೆಯಲಿದೆ. ಪಟ್ಟಣವನ್ನೆಲ್ಲಾ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಲಾಗುತ್ತಿದ್ದು ದೇವಾಲಯವನ್ನು ಹಲವು ಹತ್ತು ಬಗೆಯ ಹೂವುಗಳಿಂದ ಸಿಂಗರಿಸಲಾಗುತ್ತಿದ್ದೆ. ಅಯ್ಯಪ್ಪನ ಭಕ್ತರು ದೇವಾಲಯ ಸಮಿತಿಯವರು ತಾಲ್ಲೂಕಿನ ಪ್ರತೀಹಳ್ಳಿಗೆ ತೆರಳಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಹ್ವಾನಿಸುತ್ತಿದ್ದಾರೆ.
ಟ್ರಸ್ಟಿನ ಅಧ್ಯಕ್ಷ ಟಿ. ಶಿವಕುಮಾರ್ ದೇವಾಲಯ ನಿರ್ಮಾಣಕ್ಕೆ ಶಾಸಕ ಎಚ್.ಡಿ. ರೇವಣ್ಣ ಹೆಚ್ಚಿನ ಸಹಕಾರ ನೀಡಿದ್ದು ತಾಲ್ಲೂಕಿನ ಅಯ್ಯಪ್ಪ ಭಕ್ತರು, ಸಾರ್ವಜನಿಕ ಸಹಕಾರ ದಿಂದ ನಿಮರ್ಾಣ ಗೊಂಡಿರುವ ಈ ದೇವಾಲಯ ಮಾಚರ್್ 12 ರಂದು ಲೋಕಾರ್ಪಣೆ ಆಗಲಿದೆ ಎಂದು ವಿವರಿಸಿದ್ದಾರೆ.